ಹಳ್ಳಿ ಹುಡುಗಿಯಾಗಿ ಕಮಲಿ ಧಾರಾವಾಹಿಯಲ್ಲಿನಟಿಸುತ್ತಿರುವ ಅಮೂಲ್ಯ ಗೌಡ ಅವರ ಸಕತ್ ಡಾನ್ಸ್ ಸ್ಟೆಪ್

0 5

ಮುದ್ದು ಮುಖದ ಮಂಡ್ಯ ಕನ್ನಡ ಮಾತನಾಡುವ ಅಪ್ಪಟ ಹಳ್ಳಿ ಹುಡುಗಿಯಾಗಿ ಕಮಲಿ ಧಾರಾವಾಹಿಯಲ್ಲಿ ಕಮಲಿ ಪಾತ್ರದಲ್ಲಿ ನಟಿಸುತ್ತಿರುವ ಅಮೂಲ್ಯ ಗೌಡ ಅವರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಮೂಲ್ಯ ಗೌಡ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಮೂಲ್ಯ ಅವರ ಫೋಟೋಸ್ ಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೂಲ್ಯ ಅವರ ನಿಜ ಜೀವನದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಜೀ ಕನ್ನಡದಲ್ಲಿ ಪ್ರತಿದಿನ ಪ್ರಸಾರವಾಗುವ ಕಮಲಿ ಧಾರಾವಾಹಿಯಲ್ಲಿ ಕಮಲಿ ಪಾತ್ರಕ್ಕೆ ಜೀವ ತುಂಬುತ್ತಿರುವ ಅಮೂಲ್ಯ ಗೌಡ ಅವರು ಜನವರಿ 7, 1993 ರಂದು ಮೈಸೂರಿನಲ್ಲಿ ಜನಿಸಿದ್ದಾರೆ. ಇವರು ಡಿಪ್ಲೊಮಾ ಪದವಿಯನ್ನು ಮೈಸೂರಿನಲ್ಲಿ ಪಡೆದಿದ್ದಾರೆ. ಸೈಕ್ಲಿಂಗ್ ಮಾಡುವುದು, ಡ್ಯಾನ್ಸ್ ಮಾಡುವುದು, ಟ್ರಾವೆಲಿಂಗ್ ಇವರ ಹವ್ಯಾಸಗಳಾಗಿದೆ. ಸಿನಿಮಾಗಳಲ್ಲಾಗಲಿ, ಸೀರಿಯಲ್ ಗಳಲ್ಲಾಗಲಿ ನಟಿಸುತ್ತಿರುವವರ ನಿಜವಾದ ಜೀವನ ಬೇರೆ ರೀತಿಯೇ ಇರುತ್ತದೆ. ಕಮಲಿ ಧಾರಾವಾಹಿಯಲ್ಲಿ ಅಮೂಲ್ಯ ಗೌಡ ಅವರು ಮಂಡ್ಯ ಕನ್ನಡ ಮಾತನಾಡುತ್ತಾ, ಸಾಂಪ್ರದಾಯಿಕ ಉಡುಗೆಯಲ್ಲಿ ರಿಬ್ಬನ್ ನಿಂದ ಜಡೆ ಹಾಕಿಕೊಂಡು ಇರುತ್ತಾರೆ ಆದರೆ ಅವರು ನಿಜಜೀವನದಲ್ಲಿ ಬೇರೆಯೇ ರೀತಿ ಇರುತ್ತಾರೆ. ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೊಡರ್ನ್ ಡ್ರೆಸ್ ಹಾಕಿಕೊಂಡಿರುವ ಫೋಟೋಗಳನ್ನು ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಡ್ರೆಸ್ ಬಗ್ಗೆ ಟ್ರೋಲ್ ಆದಾಗ ಅವರು ತಲೆಕೆಡಿಸಿಕೊಂಡಿಲ್ಲ ನಮಗೂ ನಮ್ಮದೇ ಆದ ರಿಯಲ್ ಲೈಫ್ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಟ್ರೆಡಿಷ್ನಲ್ ಮತ್ತು ಮೋಡರ್ನ್ ಎರಡು ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವ ಅಮೂಲ್ಯ ಗೌಡ ಅವರು ಸ್ವಾತಿಮುತ್ತು, ಅರಮನೆ, ಪುನರ್ ವಿವಾಹ, ಕಮಲಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸಿನಿಮಾ ಮತ್ತು ಬೇರೆ ಭಾಷೆಯ ಧಾರಾವಾಹಿಗಳಿಂದ ಅಮೂಲ್ಯ ಅವರಿಗೆ ಸಾಕಷ್ಟು ಆಫರ್ ಬರುತ್ತಿದೆ, ಆದರೆ ಅವರು ಕಮಲಿ ಧಾರವಾಹಿ ಮುಗಿಯುವವರೆಗೂ ಬೇರೆ ಧಾರವಾಹಿಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ ಜೊತೆಗೆ ಸಿನಿಮಾಗಳಲ್ಲಿ ಚಾಲೆಂಜಿಂಗ್ ಪಾತ್ರ ಸಿಕ್ಕರೆ ನಟಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಮೂಲ್ಯ ಅವರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಮೂಲ್ಯ ಅವರಿಗೆ ಹೆಚ್ಚಿನ ಆಫರ್ ಬರಲಿ, ಹೆಚ್ಚು ಹೆಚ್ಚು ‌ಧಾರವಾಹಿಗಳಲ್ಲಿ ನಟಿಸಲಿ ಎಂದು ಆಶಿಸೋಣ.

Leave A Reply

Your email address will not be published.