ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣ ಪಡೆಯಲು ಲ್ಯಾಪ್ ಟಾಪ್ ಬೇಕಾಗುತ್ತದೆ ಆದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಬಡತನದ ಕಾರಣದಿಂದ ಲ್ಯಾಪ್ ಟಾಪ್ ಖರೀದಿಸಲು ಹಣವಿರುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಕರ್ನಾಟಕ ಉಚಿತ ಲ್ಯಾಪ್ ಟಾಪ್ ಸ್ಕೀಮ್ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ, ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಹಾಗೂ ಬೇಕಾಗುವ ದಾಖಲಾತಿಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಕರ್ನಾಟಕ ಉಚಿತ ಲ್ಯಾಪ್ ಟಾಪ್ ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಲ್ಯಾಪ್ ಟಾಪ್ ನೀಡುತ್ತಿದೆ. ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರಿ ಯೋಜನೆಗಳ ಮಾಹಿತಿಯನ್ನು ಸರ್ಕಾರಿ ಯೋಜನಾ ಡಾಟ್ ಕಾಮ್ ನಲ್ಲಿ ನೋಡಬಹುದು. ಸೆಕೆಂಡ್ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಸೆಕೆಂಡ್ ಪಿಯುಸಿ ಪಾಸಾದ ನಂತರ ಅವರ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ ಎಂದು ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೆಂದರೆ ಕರ್ನಾಟಕದಲ್ಲಿ ವಾಸವಾಗಿರಬೇಕು, ಕರ್ನಾಟಕದಲ್ಲಿ ಓದಿರಬೇಕು. ಎಸ್ ಸಿ, ಎಸ್ ಟಿ, ಒಬಿಸಿ ವರ್ಗದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಉತ್ತಮ ಶ್ರೇಣಿಯಲ್ಲಿ 12 ನೇ ತರಗತಿಯಲ್ಲಿ ಪಾಸಾಗಿರಬೇಕು. ಈ ಎಲ್ಲ ಅರ್ಹತೆಗಳಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕು. ಕರ್ನಾಟಕದಲ್ಲಿ ವಾಸವಾಗಿರುವುದರ ಬಗ್ಗೆ ಕರ್ನಾಟಕ ನಿವಾಸ ಪತ್ರ, ಆಧಾರ್ ಕಾರ್ಡ್, ಆಧಾರನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ. ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೊ, ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ. ಈ ಎಲ್ಲ ದಾಖಲಾತಿಗಳನ್ನು ಸಲ್ಲಿಸಿದರೆ ಮಾತ್ರ ಉಚಿತ ಲ್ಯಾಪ್ ಟಾಪ್ ಸಿಗುತ್ತದೆ. ಕೆಲವೊಂದು ಕೋರ್ಸ್ ಪಟ್ಟಿಯನ್ನು ನೀಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅವುಗಳಲ್ಲಿ ಯಾವುದಾದರೂ ಒಂದು ಕೋರ್ಸ್ ನಲ್ಲಿ ಓದುತ್ತಿರಬೇಕು. ವೈದ್ಯಕೀಯ ಅಧ್ಯಯನ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳು, ಸ್ನಾತ್ತಕೋತ್ತರ ಕೋರ್ಸ್, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿದ್ದರೆ ಅರ್ಜಿ ಸಲ್ಲಿಸಬಹುದು. ಕೆಲವು ಕಾಲೇಜುಗಳನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯ ಕಾಲೇಜಿನ ಹೆಸರು ಈ ಲೀಸ್ಟ್ ನಲ್ಲಿ ಇದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳ ಹೆಸರನ್ನು ಲೀಸ್ಟನಲ್ಲಿ ಸೇರಿಸಲಾಗಿದೆ. ಲೀಸ್ಟ್ ನಲ್ಲಿ ಕರ್ನಾಟಕ ರಾಜ್ಯದ ಎಲ್ಲ ತಾಲೂಕುಗಳ ಕಾಲೇಜುಗಳ ಹೆಸರಿದೆ. ಕರ್ನಾಟಕ ಉಚಿತ ಲ್ಯಾಪ್ ಟಾಪ್ ಯೋಜನೆಗೆ ಕಂಪ್ಯೂಟರ್ ನಲ್ಲಿ ಪಿಡಿಎಫ್ ಪಾರ್ಮೇಟ್ ನಲ್ಲಿ ಒಂದು ಫಾರ್ಮ್ ಕೊಟ್ಟಿರುತ್ತಾರೆ. ಅದನ್ನು ಪ್ರಿಂಟ್ ತೆಗೆದು ಅದರಲ್ಲಿ ಕೇಳಿದ ಮಾಹಿತಿಯನ್ನು ತುಂಬಬೇಕು, ವಿಳಾಸ, ಕಾಲೇಜಿನ ಹೆಸರು, ಪಿಯುಸಿಯ ಅಂಕಗಳು, ಆದಾಯ, ಸೆಕೆಂಡ್ ಪಿಯುಸಿಯಲ್ಲಿ ತೆಗೆದುಕೊಂಡ ವಿಷಯಗಳು ಈ ಎಲ್ಲ ಮಾಹಿತಿಯನ್ನು ತುಂಬಬೇಕಾಗುತ್ತದೆ, ಬಲಗಡೆ ಫೋಟೊ ಅಂಟಿಸಿ ಹತ್ತಿರದಲ್ಲಿರುವ ಕರ್ನಾಟಕ ಶೈಕ್ಷಣಿಕ ಮಂಡಳಿಗೆ ಫಾರ್ಮ್ ನೊಂದಿಗೆ ಬೇಕಾಗುವ ದಾಖಲಾತಿಗಳನ್ನು ಅಟ್ಯಾಚ್ ಮಾಡಿ ಕೊಡಬೇಕಾಗುತ್ತದೆ. ಈ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ, ಸರ್ಕಾರದ ಯೋಜನೆಯ ಉಪಯೋಗ ಪಡೆಯಿರಿ.