ಕಾರುಗಳು ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಸರ್ವೇಸಾಮಾನ್ಯವಾಗಿ ಖರೀದಿಸುವ ವಾಹನವಾಗಿದೆ. ಜನರ ನಿರೀಕ್ಷೆಯ ದರದಲ್ಲಿ ಈಗಿನ ಕಾರುಗಳು ಬರುತ್ತಿರುವುದರಿಂದ ಜೊತೆಗೆ ಸ್ವಲ್ಪ ಬಳಕೆಯ ನಂತರ ಕಾರುಗಳನ್ನು ಪುನಹ ವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳಿಂದ ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ದರದಲ್ಲಿ ದೊರಕುತ್ತಿದೆ. ಸೆಕೆಂಡ್ ಹ್ಯಾಂಡ್ ಕಾರುಗಳು ಅಂದರೆ ಒಬ್ಬ ವ್ಯಕ್ತಿಯು ಶೋರೂಮ್ ನಿಂದ ಹೊಸ ಕಾರನ್ನು ಖರೀದಿಸಿ ಅವನ ಹೆಸರಿನಲ್ಲಿ ರಿಜಿಸ್ಟರ್ ಆಗಿರುತ್ತದೆ. ಅದನ್ನು ಆತ ಬೇರೊಬ್ಬನಿಗೆ ಮಾರುತ್ತಾನೆ. ಆಗ ಅದು ಸೆಕೆಂಡ್ ಹ್ಯಾಂಡ್ ಕಾರ್ ಆಗಿ ಪರಿವರ್ತನೆಯಾಗುತ್ತದೆ. ಈಗಿನ ಕಾಲದಲ್ಲಿ ಬೇಕಾದ ಕಂಪನಿಯ ಕಾರುಗಳು ಮತ್ತು ಒಳ್ಳೆಯ ದರದ ಕಾರುಗಳು ಕೂಡ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಕಡಿಮೆ ದರದಲ್ಲಿ ದೊರಕುತ್ತದೆ. ಆದ್ದರಿಂದ ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿಗೂ ಕೂಡ ಈಗಿನ ಕಾಲದಲ್ಲಿ ಬ್ರೋಕರ್ ಗಳ ರೂಪದಲ್ಲಿ ಅನೇಕರು ಕಂಪನಿಗಳನ್ನು ತಯಾರಿಸಿಕೊಂಡಿದ್ದಾರೆ. ಇವರ ಕೆಲಸ ವ್ಯಕ್ತಿಗಳಿಂದ ಕಾರನ್ನು ಖರೀದಿಸಿ ಅದಕ್ಕೆ ಸರಿಯಾದ ಬೆಲೆಯಲ್ಲಿ ಮಾರಾಟ ಮಾಡಿ ಕಮಿಷನ್ ಅನ್ನು ಪಡೆಯುವುದಾಗಿದೆ. ಬೆಂಗಳೂರಿನಲ್ಲಿ ಇಂತಹ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡುವ ಕಂಪನಿಗಳು ಹಲವಾರಿವೆ. ಎಚ್ಎಸ್ಆರ್ ಲೇಔಟ್ ನಲ್ಲಿರುವ ಸುಪ್ರೀಂ ಕಾರ್ ಗೋಲ್ಡ್ ಕೂಡ ಒಂದು. ಈ ಕಂಪನಿಯಲ್ಲಿ ಅನೇಕ ವಿಧದ ಸೆಕೆಂಡ್ ಹ್ಯಾಂಡ್ ಕಾರುಗಳು ಇವೆ. ಎರ್ಟಿಗಾ, ಐ ಟ್ವೆಂಟಿ, ಪೋಲೋ, ಕ್ರೆಟಾ, ರೀಡ್ಸ್, ಸ್ವಿಫ್ಟ್ ಹೀಗೆ ಅನೇಕ ಬಗೆಯ ಸೆಕೆಂಡ್ ಹ್ಯಾಂಡ್ ಕಾರ್ ಗಳು ದೊರೆಯುತ್ತದೆ.
ಈ ಕಾರುಗಳ ಬೆಲೆಯು ಅದರ ಮೆಂಟೇನೆನ್ಸ್ ಜೊತೆಗೆ ಕಾರಿನ ವಯಸ್ಸಿನ ಮೇಲೆ ನಿರ್ಧಾರವಾಗುತ್ತದೆ. ಕೆಲವು ಹಳೆಯ ಕಾರುಗಳು ಒಳ್ಳೆಯ ಮೆಂಟೇನೆನ್ಸ್ ಇದ್ದರೆ ಉತ್ತಮ ಬೆಲೆಗೆ ವ್ಯಾಪಾರವಾಗುತ್ತದೆ. ಕೆಲವು ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆಗಳ ನಿರ್ಧಾರವಾಗಿರುತ್ತವೆ. ಸೆಕೆಂಡ್ ಹ್ಯಾಂಡ್ ಐ ಟ್ವೆಂಟಿ 2013ರ ಮಾಡೆಲ್ ಗಾಡಿ 51,000 ಕಿಮೀ ಓಡಿರುವ ಕಾರು ಅಜಮಾಸು 5ಲಕ್ಷ 30ಸಾವಿರ ರೂಗಳಿಗೆ ದೊರಕುತ್ತದೆ. ಎರ್ಟಿಗಾ ಗಾಡಿಯು ತುಂಬಾ ಜನರು ಇಷ್ಟಪಡುವಂತಹ ಗಾಡಿ ಆಗಿದೆ. ಈ ಗಾಡಿ 2013ರ ಮಾಡೆಲ್ ಆಗಿದ್ದು 67000 ಕಿಲೋಮೀಟರ್ ಓಡಿದ್ದು ಸಿಂಗಲ್ ಓನರ್ ಜೊತೆಗೆ ಉತ್ತಮ ಮೆಂಟೆನೆನ್ಸ್ ಹೊಂದಿರುವ ಗಾಡಿಗೆ 6ಲಕ್ಷ 85 ಸಾವಿರ ರೂಗಳಿಗೆ ದೊರಕುತ್ತದೆ.
ಹೀಗೆ ಪ್ರತಿಯೊಂದು ಗಾಡಿಯ ಮಾಡೆಲ್ ಹಾಗೂ ಮೆಂಟೇನೆನ್ಸ್ ಗಳ ಮೇಲೆ ಗಾಡಿಯ ದರಗಳು ನಿರ್ಧಾರವಾಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರಮಾಡುವ ವ್ಯಾಪಾರಿಗಳು ಕೆಲವೊಂದು ಆಫರ್ ಗಳನ್ನು ನೀಡುವುದರ ಮೂಲಕ ಖರೀದಿದಾರರನ್ನು ಆಕರ್ಷಿಸುತ್ತಾರೆ. ಅಂದರೆ ಗಾಡಿಯ ರಿಜಿಸ್ಟ್ರೇಷನ್ ಫೀಸನ್ನು ಜೊತೆಗೆ ಕಾರಿಗೆ ಸ್ವಲ್ಪ ಹಣದ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಅವರೇ ಹಾಕಿಕೊಡುವ ಮೂಲಕ ಜನರನ್ನು ಸೆಳೆಯುತ್ತಾರೆ. ಹೀಗೆ ಎಲ್ಲ ಜನರು ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮಾಡಿ ಕಡಿಮೆ ವೆಚ್ಚದಲ್ಲಿ ಉತ್ತಮ ಕಾರುಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.