ನಾವೇನಾದರೂ ಕಾರು, ಬೈಕನ್ನು ಖರೀದಿಸಿದರೆ ಅದನ್ನು ಬಣ್ಣ ಬಣ್ಣದ ಹೂವು ಇತರೆ ಅಲಂಕಾರಿಕ ಸಾಮಗ್ರಿಗಳಿಂದ ಅಲಂಕರಿಸಿ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ. ಆದರೆ ಇಲ್ಲೊಬ್ಬರು ತಮ್ಮ ಇಡೀ ಕಾರಿಗೆ ಸಂಪೂರ್ಣವಾಗಿ ಸಗಣಿಯಿಂದ ಅಲಂಕರಿಸಿದ್ದಾರೆ ಇದಕ್ಕೆ ಕಾರಣವೇನು ಹಾಗೂ ಸಗಣಿಯಿಂದ ಅಲಂಕರಿಸಿದರೆ ಪ್ರಯೋಜನಗಳಿವೆಯೇ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಬಹಳಷ್ಟು ಜನರಿಗೆ ಬೈಕ್ ಮತ್ತು ಕಾರುಗಳ ಮೇಲೆ ಕ್ರೇಜ್ ಇರುತ್ತದೆ. ಸಾಮಾನ್ಯವಾಗಿ ಎಲ್ಲರೂ ಡ್ರೀಮ್ ಬೈಕ್ ಅಥವಾ ಕಾರನ್ನು ಖರೀದಿ ಮಾಡಿದರೆ ಅದಕ್ಕೆ ನಾನಾ ರೀತಿಯ ಸ್ಟಿಕರ್ ಡಿಸೈನ್ ಮಾಡಿಸಿ, ಅಲಂಕಾರ ಮಾಡಿ ಎಲ್ಲರ ಗಮನ ಸೆಳೆಯುವ ಹಾಗೆ ಮಾಡುತ್ತೇವೆ. ಆದರೆ ಮಹಿಳೆಯೊಬ್ಬರು ತಮ್ಮ ಕಾರಿಗೆ ಸಗಣಿ ಅಲಂಕಾರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ ಇವರ ಹೆಸರು ಶಾಜಿಲ್ ಶಾಹಿ. ಇವರು ಮೂಲತಃ ಅಹಮದಾಬಾದ್ ನವರು. ಇವರು ಕಾರಿಗೆ ಸಗಣಿಯಿಂದ ಮಾಡಿರುವ ಅಲಂಕಾರದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಇವರು ತಮ್ಮ ಕಾರಿಗೆ ಸಂಪೂರ್ಣವಾಗಿ ಸಗಣಿಯನ್ನು ಬಳಿದು ಅಲಂಕಾರ ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಿಸಿಲಿನ ತಾಪ ಇರುತ್ತದೆ ಹೀಗಾಗಿ ಪ್ರಯಾಣಿಕರು ಕಾರಿನಲ್ಲಿ ಏಸಿಯನ್ನು ಹಾಕಿಕೊಂಡು ಪ್ರಯಾಣ ಮಾಡುತ್ತಾರೆ ಅಥವಾ ಮನೆಯ ಹತ್ತಿರ ಕಾರನ್ನು ನಿಲ್ಲಿಸುವಾಗ ನೆರಳಿ‌ನಲ್ಲಿ ನಿಲ್ಲಿಸುತ್ತಾರೆ. ಶಾಜಿಲ್ ಅವರನ್ನು ಕೇಳಿದಾಗ ಬಿಸಿಲಿನ ತಾಪ ಹೆಚ್ಚಾದ ಕಾರಣ ಕಾರಿಗೆ ಸಗಣಿಯನ್ನು ಬಳಿದಿದ್ದೇನೆ ಎಂದು ಅವರು ಹೇಳಿದ್ದಾರೆ. ಕಾರಿಗೆ ಸಗಣಿ ಬಳಿಯುವುದರಿಂದ ಕಾರಿ‌ನ ತಾಪಮಾನವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದಿದ್ದಾರೆ.

ಬೇಸಿಗೆಯಲ್ಲಿ ಕಾರು ತಂಪಾಗಿದ್ದರೆ, ಚಳಿಗಾಲದಲ್ಲಿ ಕಾರಿನ ತಾಪಮಾನ ಹೆಚ್ಚಾಗಿರುತ್ತದೆ ಅನ್ನುವುದು ಶಾಜಿಲ್ ಶಾಹಿ ಅವರ ನಂಬಿಕೆ‌. ಅಲ್ಲದೆ ಈ ರೀತಿ ಮಾಡುವುದರಿಂದ ಕಾರಿನ ನಿಜವಾದ ಬಣ್ಣಕ್ಕೆ ಹಾನಿಯಾಗುವುದಿಲ್ಲ, ಗೆರೆಗಳು ಬೀಳುವುದಿಲ್ಲ ಎಂದಿದ್ದಾರೆ. ಅಲ್ಲದೆ ಇನ್ನೊಂದು ಅಚ್ಚರಿ ಸಂಗತಿ ಏನೆಂದರೆ ಶಾಜಿಲ್ ಶಾಹಿ ಅವರು ಕಾರನ್ನು ಖರೀದಿ ಮಾಡಿದ ದಿನದಿಂದ‌ ಇದುವರೆಗೂ ಒಂದು ದಿನವೂ ಕೂಡ ಏಸಿ ಆನ್ ಮಾಡಿಲ್ಲ ಎಂದು ಹೇಳಿದ್ದಾರೆ. ಅಹಮದಾಬಾದ್ ನಲ್ಲಿ ಬೇಸಿಗೆಯಲ್ಲಿ ಹೆಚ್ಚಾದ ತಾಪಮಾನ ಇದ್ದು ಹಲವು ಪ್ರಯಾಣಿಕರು ಕಾರಿನಲ್ಲಿ ಏಸಿ ಹಾಕಿಕೊಂಡು ಪ್ರಯಾಣಿಸುತ್ತಾರೆ. ಆರೋಗ್ಯ ದೃಷ್ಟಿಯಿಂದ ನೋಡಿದರೆ ಏಸಿ ಒಳ್ಳೆಯದಲ್ಲ ಆದ್ದರಿಂದ ನಾನು ಸಗಣಿಯ ಉಪಾಯ ಕಂಡುಕೊಂಡಿದ್ದೇನೆ ಎಂದು ಶಾಜಿಲ್ ಅವರು ಹೇಳಿಕೊಂಡಿದ್ದಾರೆ. ಶಾಜಿಲ್ ಮಾಡಿರುವ ಐಡಿಯಾ ಚೆನ್ನಾಗಿದೆ ಅಲ್ಲವೆ ನಾವು ಅವರ ಐಡಿಯಾ ಪಾಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಕಾರನ್ನು ತಾಪಮಾನದಿಂದ ರಕ್ಷಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!