ಬೆಳ್ಳುಳ್ಳಿ, ಈರುಳ್ಳಿಯನ್ನು ಸಂಪ್ರದಾಯಸ್ಥರು ತಿನ್ನಬಾರದು ಎಂದು ಹೇಳುತ್ತಾರೆ ಆದರೆ ಅವುಗಳಿಂದ ಅನೇಕ ಆರೋಗ್ಯಕರ ಲಾಭಗಳಿವೆ, ಅಲ್ಲದೇ ಪ್ರತಿದಿನ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಸಂಸಾರ ಜೀವನ ಸುಖಕರವಾಗಿರುತ್ತದೆ. ಬೆಳ್ಳುಳ್ಳಿ, ಈರುಳ್ಳಿ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಬೆಳ್ಳುಳ್ಳಿ, ಈರುಳ್ಳಿಯನ್ನು ಹೆಚ್ಚು ಸೇವಿಸಬೇಕು, ಇವುಗಳಿಂದ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಪ್ರಯೋಜನಗಳಿವೆ. ಧಾರ್ಮಿಕ ಚಿಂತಕರು, ಆಧ್ಯಾತ್ಮ ಚಿಂತಕರು ಹೋಮ, ಹವನ ಮಾಡುವಾಗ ಬೆಳ್ಳುಳ್ಳಿ, ಈರುಳ್ಳಿಯನ್ನು ತಿನ್ನಬಾರದು ಎಂದು ಹೇಳುತ್ತಾರೆ. ಸನ್ಯಾಸಿಗಳು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ ಏಕೆಂದರೆ ಬೆಳ್ಳುಳ್ಳಿ ಸತಿ, ಪತಿಯರಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತದೆ. ಲೈಂ ಗಿಕ ಮನೋಭಾವನೆಯನ್ನು ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ಗಂಡ ಹೆಂಡತಿಯರು ಅನ್ಯೋನ್ಯವಾಗಿದ್ದಾಗ ಮಾತ್ರ ಜೀವನ ಸುಖಕರವಾಗಿರುತ್ತದೆ ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸದಿದ್ದರೆ ಲೈಂಗಿಕ ಆಸಕ್ತಿ ಕಡಿಮೆಯಾಗಿ ಇಬ್ಬರ ನಡುವೆ ಜಗಳ, ವೈಮನಸ್ಸು ಉಂಟಾಗುತ್ತದೆ ಇದು ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ.
ಯಾವ ರೀತಿಯ ಆಹಾರ ತಿನ್ನುತ್ತೇವೆಯೋ, ಅದೇ ರೀತಿ ಮನಸ್ಸು ಇರುತ್ತದೆ, ಮನಸ್ಸು ಯಾವ ರೀತಿ ಇರುತ್ತದೆಯೋ ಅದಕ್ಕೆ ಅನುಗುಣವಾಗಿ ದೇಹ ಪ್ರತಿಕ್ರಿಯಿಸುತ್ತದೆ. ಸನ್ಯಾಸಿ ಆಗುವುದಾದರೆ ಬೆಳ್ಳುಳ್ಳಿ, ಈರುಳ್ಳಿ ತಿನ್ನಬಾರದು ಸಂಸಾರಿ ಆದ ಮೇಲೆ ಬೆಳ್ಳುಳ್ಳಿ, ಈರುಳ್ಳಿಯನ್ನು ತಿನ್ನದೆ ಇದ್ದರೆ ಸಂಸಾರ ಜೀವನ ಸುಖಕರವಾಗಿರುವುದಿಲ್ಲ. ಸನ್ಯಾಸಿಯಾದವರು ಮೋಕ್ಷ ಸಾಧಿಸಬಲ್ಲರು, ಸಂಸಾರಿಯಾದವರು ಸಹ ಮೋಕ್ಷ ಸಾಧಿಸಬಲ್ಲರು. ಸಂಸಾರದಲ್ಲಿ ಸಂತೋಷವಾಗಿ ಇರದಿದ್ದರೆ ಜಗಳ ಸಂಭವಿಸಿ ಮನೆಯ ನೆಮ್ಮದಿ ಹಾಳಾಗುತ್ತದೆ. ಸತಿ, ಪತಿಯರು ನೂರ್ಕಾಲ ಸುಖವಾಗಿ ಜೀವನ ನಡೆಸಲು ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸಬೇಕು. ಇಷ್ಟೇ ಅಲ್ಲದೆ ಬೆಳ್ಳುಳ್ಳಿ, ಈರುಳ್ಳಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ವೈರಸ್ ನಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಬೆಳ್ಳುಳ್ಳಿ, ಈರುಳ್ಳಿಯನ್ನು ಹೆಚ್ಚು ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿರಿ.