ಹಿಂದೂ ಧರ್ಮದಲ್ಲಿ ರುದ್ರಾಕ್ಷ ಪ್ರಮುಖ ಸ್ಥಾನವನ್ನು ಪಡೆದಿದೆ. ಪ್ರತಿದಿನ ರುದ್ರಾಕ್ಷವನ್ನು ಧರಿಸುವುದರಿಂದ ವಿಶಿಷ್ಟ ಶಕ್ತಿ ನಮಗೆ ದೊರೆಯುತ್ತದೆ. ಇಂತಹ ರುದ್ರಾಕ್ಷವು ಎಲ್ಲಿ, ಹೇಗೆ ಸಿಗುತ್ತದೆ, ರುದ್ರಾಕ್ಷವನ್ನು ಧರಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು, ರುದ್ರಾಕ್ಷವನ್ನು ಯಾರು ಧರಿಸಬಹುದು, ರುದ್ರಾಕ್ಷವನ್ನು ಹೇಗೆ ಸ್ವಚ್ಛಗೊಳಿಸಬಹುದು, ಮಹಿಳೆಯರು ರುದ್ರಾಕ್ಷವನ್ನು ಧರಿಸಬಹುದೇ, ರುದ್ರಾಕ್ಷದಲ್ಲಿ ಎಷ್ಟು ವಿಧಗಳಿವೆ ಹಾಗೂ ರುದ್ರಾಕ್ಷವನ್ನು ಧರಿಸುವ ಅವಧಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ರುದ್ರಾಕ್ಷವನ್ನು ಶಿವನ ಮೂರನೇ ಕಣ್ಣು ಎಂದು ಪರಿಗಣಿಸಲಾಗಿದೆ. ಪೂಜೆ, ಪುನಸ್ಕಾರಗಳಲ್ಲಿ ರುದ್ರಾಕ್ಷ ವಿಶೇಷ ಸ್ಥಾನಮಾನ ಹೊಂದಿದೆ. ರುದ್ರಾಕ್ಷವನ್ನು ಹತ್ತಿಯ ನೂಲು ಅಥವಾ ರೇಷ್ಮೆ ನೂಲಿನಿಂದ ಪೋಣಿಸಿ ಕೊರಳ ಮಣಿಯಾಗಿ, ಜಪ ಮಾಲೆಯಾಗಿ ಉಪಯೋಗಿಸುತ್ತಾರೆ. ಇಂತಹ ರುದ್ರಾಕ್ಷವು ಎಲಿಯೋ ಕಾರ್ಪಸ್ ಗ್ರಾಮಟ್ರಸ್ ಎಂಬ ಮರದ ಬೀಜವಾಗಿದೆ ಅದನ್ನು ಒಣಗಿಸಿದಾಗ ರುದ್ರಾಕ್ಷವಾಗುತ್ತದೆ. ಈ ಮರವು ಪರ್ವತ ಪ್ರದೇಶಗಳಲ್ಲಿ ಮಾತ್ರ ಬೆಳೆಯುತ್ತದೆ, ಹಿಮಾಲಯ, ನೇಪಾಳ, ಬರ್ಮಾ, ಇಂಡೋನೇಷಿಯಾಗಳಲ್ಲಿ ರುದ್ರಾಕ್ಷ ಹೆಚ್ಚಾಗಿ ಕಂಡುಬರುತ್ತದೆ. ಸಾಮಾನ್ಯವಾಗಿ ರುದ್ರಾಕ್ಷವನ್ನು ಸನ್ಯಾಸಿಗಳು, ಋಷಿಗಳು ಧರಿಸುತ್ತಾರೆ. ರುದ್ರಾಕ್ಷ ಮನಸನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಅಲ್ಲದೆ ರುದ್ರಾಕ್ಷ ಧರಿಸುವುದರಿಂದ ಹೆಚ್ಚು ಏಕಾಗ್ರತೆಯನ್ನು ಪಡೆದುಕೊಳ್ಳಬಹುದು. ಯಾವುದೇ ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ರುದ್ರಾಕ್ಷವನ್ನು ಧರಿಸಬಹುದು. ರುದ್ರಾಕ್ಷದ ಬಗ್ಗೆ ನಂಬಿಕೆ ಇರುವವರು ಯಾರು ಬೇಕಾದರೂ ಧರಿಸಬಹುದು. ರುದ್ರಾಕ್ಷ ಹೊರಗಿನ ಶಕ್ತಿಗಳಿಂದ ದೇಹವನ್ನು ರಕ್ಷಿಸುತ್ತದೆ ಮತ್ತು ದೇಹದಲ್ಲಿ ಸಮತೋಲನವನ್ನು ಕಾಪಾಡುತ್ತದೆ. ಇದರಿಂದ ಬೇರೆ ಪ್ರದೇಶಗಳಿಗೆ ಹೋದಾಗ ಅಲ್ಲಿನ ಆಹಾರಗಳಿಂದ ತೊಂದರೆ ಆಗಲು ಸಾಧ್ಯವಿಲ್ಲ. ಸನ್ಯಾಸಿಗಳು, ಋಷಿಗಳು ಹಿಂದಿನಿಂದಲೂ ರುದ್ರಾಕ್ಷವನ್ನು ಧರಿಸುತ್ತಾರೆ ಇದಕ್ಕೆ ಕಾರಣ ಅವರು ಯಾವಾಗಲೂ ಪ್ರಯಾಣ ಮಾಡುತ್ತಿರುವುದರಿಂದ ರುದ್ರಾಕ್ಷವನ್ನು ಧರಿಸುತ್ತಾರೆ. ಯಾವಾಗಲೂ ಪ್ರಯಾಣ ಮಾಡುವವರು ರುದ್ರಾಕ್ಷವನ್ನು ತಪ್ಪದೆ ಧರಿಸಬೇಕು ಇದರಿಂದ ಪ್ರಯಾಣದ ಆಯಾಸ ಮತ್ತು ಅನಾರೋಗ್ಯವು ದೂರವಾಗುತ್ತದೆ. ರುದ್ರಾಕ್ಷ ಧರಿಸುವುದರಿಂದ ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತದೆ ಎಂಬ ಮಾತುಗಳಿವೆ ಅದು ನಿಜವಾಗಿದೆ. ರುದ್ರಾಕ್ಷ ಧರಿಸುವುದರಿಂದ ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತದೆ ಎಂಬುದು ಕೆಲವರ ಅನುಭವದ ಮಾತಾಗಿದೆ. ರುದ್ರಾಕ್ಷವನ್ನು ಕೆಲವು ಚಿಕಿತ್ಸೆಗಳಲ್ಲಿ ಕೂಡ ಬಳಸಲಾಗುತ್ತದೆ. ಮೂರು ಮುಖ ಅಥವಾ ಐದು ಮುಖದ ರುದ್ರಾಕ್ಷವನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿಡಬೇಕು ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಹಲ್ಲುಜ್ಜದೆ ಆ ನೀರನ್ನು ಕುಡಿಯಬೇಕು ಹೀಗೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಗೆ ಸಹಾಯಕಾರಿಯಾಗುತ್ತದೆ. ರುದ್ರಾಕ್ಷವನ್ನು ಧರಿಸುವುದರಿಂದ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಅಲ್ಲದೆ ಇದು ಅಕಾಲಿಕ ಮುಪ್ಪನ್ನು ತಡೆಯುತ್ತದೆ ಹಾಗೂ ಪಿತ್ತ ಮತ್ತು ಕಫವನ್ನು ಕೂಡ ನಿಯಂತ್ರಿಸುತ್ತದೆ.
ರುದ್ರಾಕ್ಷದಲ್ಲಿ ಅನೇಕ ವಿಧಗಳಿವೆ ಏಕಮುಖದ ರುದ್ರಾಕ್ಷದಿಂದ ಹಿಡಿದು 21 ಮುಖದ ರುದ್ರಾಕ್ಷಗಳಿವೆ. ಬೇರೆಬೇರೆ ಮುಖದ ರುದ್ರಾಕ್ಷವನ್ನು ಧರಿಸಬಹುದು ಚಿನ್ನ, ತಾಮ್ರ ಅಥವಾ ಬೆಳ್ಳಿ ಇವುಗಳಲ್ಲಿ ಯಾವುದಾದರೂ ಒಂದರಲ್ಲಿ ಸರ ಮಾಡಿ ಧರಿಸಬಹುದು. ಐದು ಮುಖದ ರುದ್ರಾಕ್ಷವನ್ನು 14 ವರ್ಷದ ಮೇಲ್ಪಟ್ಟವರು ಧರಿಸಬಹುದು ಇದು ಆಂತರಿಕ ಶುದ್ಧತೆಯನ್ನು ಹೆಚ್ಚಿಸುತ್ತದೆ. ಎರಡು ಮುಖದ ರುದ್ರಾಕ್ಷವನ್ನು ವಿವಾಹವಾದವರು ಧರಿಸಬಹುದು ಇದರಿಂದ ಗಂಡ-ಹೆಂಡತಿಯ ಸಂಬಂಧ ಅನ್ಯೋನ್ಯವಾಗಿರುತ್ತದೆ. ಆರು ಮುಖದ ರುದ್ರಾಕ್ಷವನ್ನು 14 ವರ್ಷದ ಒಳಗಿನ ಮಕ್ಕಳು ಧರಿಸಬೇಕು ಇದರಿಂದ ಅವರ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ರುದ್ರಾಕ್ಷ ಸರವನ್ನು ಆರು ತಿಂಗಳಿಗೊಮ್ಮೆ ಸ್ವಚ್ಛಮಾಡಬೇಕು ರುದ್ರಾಕ್ಷ ಮಣಿಯನ್ನು ಶುದ್ಧ ತುಪ್ಪದಲ್ಲಿ 24 ಗಂಟೆ ನೆನೆಸಿಡಬೇಕು ನಂತರ ಶುದ್ದ ಹಾಲಿನಲ್ಲಿ 24 ಗಂಟೆ ನೆನೆಸಿಡಬೇಕು ನಂತರ ಶುದ್ಧವಾದ ನೀರಿನಲ್ಲಿ ತೊಳೆದು ಮೃದುವಾದ ಮತ್ತು ಶುದ್ಧವಾದ ಬಟ್ಟೆಯಲ್ಲಿ ವರೆಸಬೇಕು ಯಾವುದೇ ಕಾರಣಕ್ಕೂ ಸೋಪ್ ಅಥವಾ ಇತರೆ ಸಾಮಗ್ರಿಗಳನ್ನು ಬಳಸಿ ರುದ್ರಾಕ್ಷವನ್ನು ತೊಳೆಯಬಾರದು. ರುದ್ರಾಕ್ಷ ಪ್ರಭಾವವು ದೇಹದ ಮೇಲೆ ಬೀಳಲು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ರುದ್ರಾಕ್ಷದ ಪ್ರಭಾವ ತಿಳಿಯಲು ರುದ್ರಾಕ್ಷ ಧರಿಸಿ 45ರಿಂದ 60 ದಿನಗಳವರೆಗೆ ಕಾಯಬೇಕಾಗುತ್ತದೆ. ಮಹಿಳೆಯರು ಸಹ ರುದ್ರಾಕ್ಷ ಮಾಲೆಯನ್ನು ಧರಿಸಬಹುದು ಆದರೆ ಮುಟ್ಟಿನ ಸಮಯದಲ್ಲಿ ಧರಿಸಬಾರದು ಮತ್ತು ಸಾವಿನ ಮನೆಗೆ ಹೋಗುವಾಗ ಧರಿಸಬಾರದು. ರುದ್ರಾಕ್ಷ ಮಾಲೆಯನ್ನು ವರ್ಷಾನುಗಟ್ಟಲೆ ಧರಿಸಬಹುದು. ರುದ್ರಾಕ್ಷದ ಬಗ್ಗೆ ಇನ್ನೂ ಅನೇಕ ಮಾಹಿತಿಗಳಿವೆ. ಇಷ್ಟೆಲ್ಲಾ ಪ್ರಯೋಜನವಿರುವ ರುದ್ರಾಕ್ಷವನ್ನು ಪ್ರತಿಯೊಬ್ಬರು ಧರಿಸಲೇಬೇಕು.
ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287