ಪ್ರತಿ ಹೆಣ್ಣು, ಜಗತ್ತಿನ ಕಣ್ಣು ಎಂಬ ಮಾತಿನಂತೆ ಮಹಿಳೆಯರಿಗಾಗಿ ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ ತಿಂಗಳ 8 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲು ಕಾರಣವೇನು ಹಾಗೂ ಈ ವರ್ಷದ ಮಹಿಳಾ ದಿನಾಚರಣೆಯ ಥೀಮ್ ಏನು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಹೆಣ್ಣು ಮಗಳಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ತನ್ನ ಎಲ್ಲ ಪಾತ್ರಗಳನ್ನು ಅನೇಕ ಕಷ್ಟದಿಂದಲೆ ನಿರ್ವಹಿಸುತ್ತಾಳೆ. ಹೆಣ್ಣು ತನ್ನ ಜೀವನದಲ್ಲಿ ತನ್ನವರಿಗಾಗಿ ಹಲವು ರೀತಿಯಲ್ಲಿ ತನ್ನ ಸುಖವನ್ನು ತ್ಯಾಗ ಮಾಡಿರುತ್ತಾಳೆ. ಇಂತಹ ತ್ಯಾಗಮಯಿ, ಸಹನಾಮಯಿ ಹೆಣ್ಣಿಗೆ ಪ್ರತಿವರ್ಷ ಮಾರ್ಚ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜಗತ್ತಿನಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಮೊಟ್ಟ ಮದಲಿಗೆ 1909 ರಲ್ಲಿ ಆಚರಿಸಲಾಯಿತು. 1975 ರಿಂದ ವಿಶ್ವಸಂಸ್ಥೆಯು ಈ ದಿನವನ್ನು ಮಹಿಳೆಯರಿಗಾಗಿ ಆಚರಿಸುವ ಪದ್ದತಿಯನ್ನು ಪ್ರಾರಂಭಿಸಿತು. ವಿಶ್ವದ ವಿವಿಧ ಕ್ಷೇತ್ರಗಳಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ, ರಾಜಕೀಯವಾಗಿ ಉನ್ನತಿ ಸಾಧಿಸುವ ಉತ್ಸವ ಎಂದು ಈ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮ ದೇಶದ ರಾಷ್ಟ್ರಪತಿಗಳು ಶುಭ ಕೋರಿದ್ದಾರೆ ಅಷ್ಟೆ ಅಲ್ಲದೆ ಮಹಿಳೆಯರ ರಕ್ಷಣೆ, ಭದ್ರತೆಗೆ ನಮ್ಮ ಧ್ಯೇಯವನ್ನು ಮರುನವೀಕರಿಸಲು ಇದು ಒಂದು ಉತ್ತಮ ಅವಕಾಶ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾನೂನು, ಕಾಯಿದೆಗಳಿಂದ ಮಾತ್ರ ಮಹಿಳೆಯರನ್ನು ಬಂಧ ಮುಕ್ತಗೊಳಿಸಲು ಸಾಧ್ಯವಿಲ್ಲ. ನಮ್ಮ ನೈತಿಕ ನಿಯಮಾವಳಿಗಳನ್ನು ಬದಲಾಯಿಸಿಕೊಳ್ಳಬೇಕು, ಸಾಮಾಜಿಕ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ಎಲ್ಲ ಸಮಯದಲ್ಲಿ ಮಹಿಳೆಯರಿಗೆ ಗೌರವ, ಮನ್ನಣೆ ನೀಡಲು ಕಂಕಣವನ್ನು ತೊಡಬೇಕು ಎಂದು ರಾಷ್ಟ್ರಪತಿಗಳು ರಾಷ್ಟ್ರಕ್ಕೆ ಸಂದೇಶವನ್ನು ನೀಡಿದ್ದಾರೆ. ಪ್ರತಿವರ್ಷ ಮಹಿಳಾ ದಿನಾಚರಣೆಗೆ ಒಂದು ಥೀಮ್ ಇಡಲಾಗುತ್ತದೆ ಅದರಂತೆ ಈ ವರ್ಷದ ಮಹಿಳಾ ದಿನಾಚರಣೆಯನ್ನು ಬದಲಾವಣೆಗಾಗಿ ಸಬಲರಾಗಿ ಎಂಬ ಥೀಮ್ ನೊಂದಿಗೆ ಆಚರಿಸಲಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ,
ಹೆಣ್ಣನ್ನು ಗೌರವಿಸಲು ಮರೆಯದಿರಿ.