ನೈಸರ್ಗಿಕವಾಗಿ, ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರಗಳು ಹೆಚ್ಚಾಗಿ ಮಾಂಸಾಹಾರವಾಗಿರುತ್ತದೆ. ಆದರೂ ಸಸ್ಯಾಹಾರಿಗಳೂ ಮಾಂಸಾಹಾರಿಗಳಂತೆ ಕೂಡ ಶಕ್ತಿಯುತ ಮತ್ತು ಬಲಯುತವಾಗಿರುತ್ತಾರೆ. ಕೆಲವೊಮ್ಮೆ ಮೀನು ಮಾಂಸ ಒದಗಿಸದ ಪ್ರೊಟೀನ್ ಅನ್ನು ಸಸ್ಯಾಹಾರಿ ಆಹಾರಗಳು ಮಾಡುತ್ತವೆ. ಅಗತ್ಯವಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಒದಗಿಸಲು ಸಸ್ಯಾಹಾರ ಸಹಕಾರಿ. ನಮಗೆ ಅಗತ್ಯವಿರುವ ಪ್ರೋಟೀನ್ ವಿಟಮಿನ್ಗಳ ಸಾಕಷ್ಟು ಪ್ರಮಾಣವನ್ನು ಒದಗಿಸುವಲ್ಲಿ ದೈನಂದಿನ ಜೀವನದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಬಳಸಲೇಬೇಕು. ಆದ್ದರಿಂದ ನಾವು ಇಲ್ಲಿ ಹೆಚ್ಚು ಪೌಷ್ಟಿಕತೆ ನೀಡುವ ಆಹಾರಪದಾರ್ಥಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುವ ಹಣ್ಣು ತರಕಾರಿಗಳು ಮನೆಯಲ್ಲೇ ಇದೆ. ಅವುಗಳ ಸರಿಯಾದ ಪ್ರಮಾಣದ ಬಳಕೆ ಮತ್ತು ಸೇವನೆಯನ್ನು ನಾವು ಮಾಡಬೇಕು. ಬೀಟ್ರೋಟ್ ಜ್ಯೂಸ್ ಅನ್ನು “ಕೊಬ್ಬು ಕೊಲ್ಲವಂಥದ್ದು” ಎಂದೂ ಸಹ ಕರೆಯಲಾಗುತ್ತದೆ. ವರ್ಕ್ಔಟ್ ಮಾಡುವ ಮುನ್ನ ಈ ಜ್ಯೂಸ್ ಅನ್ನು ಸೇವಿಸುವುದರಿಂದ ದೈಹಿಕ ವ್ಯಾಯಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೀಟ್ರೋಟ್ ವಿಟಮಿನ್ ಎ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಇವುಗಳು ದೇಹದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಕುಂಬಳಕಾಯಿ ಸಂಪೂರ್ಣ ಆರೋಗ್ಯವನ್ನು ಕೊಡುವ ಒಂದು ತರಕಾರಿಯಾಗಿದೆ.
ಇದು ಕ್ಯಾಲೋರಿ ಭರಿತವಾಗಿಲ್ಲದಿದ್ದರೂ ಮನುಷ್ಯನ ಹೊಟ್ಟೆಯನ್ನು ಭರ್ತಿಗೊಳಿಸುತ್ತದೆ ಮತ್ತು ಹಾರ್ಮೋನ್ಗಳನ್ನು ನಿಯಂತ್ರಿಸುತ್ತದೆ. ಇದರಿಂದ ಅಸಮರ್ಥರು ಸಾಮರ್ಥ್ಯವುಳ್ಳವರಾಗಿ ಪರಿವರ್ತಿತರಾಗುತ್ತಾರೆ. ಬಾದಾಮಿಯು ವಿಟಮಿನ್ ಇ ಮತ್ತು ಒಮೇಗಾ – 3 ಕೊಬ್ಬು ಏಸಿಡ್ ಅನ್ನು ಒಳಗೊಂಡಿದೆ. ಈ ಕೊಬ್ಬು ಸುಲಭವಾಗಿ ಜೀರ್ಣವಾಗುವಂತಿದ್ದು ಶಕ್ತಿಯನ್ನು ನೀಡುತ್ತದೆ. ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಬಿ ಅಂಶಗಳನ್ನು ಒಳಗೊಂಡಿರುವ ಕಾರ್ಬೊಹೈಡ್ರೇಟ್ ಅನ್ನು ಒದಗಿಸುವಲ್ಲಿ ಬ್ರೌನ್ ರೈಸ್ ಸಹಕಾರಿ. ಇದು ನಿಧಾನವಾಗಿ ಜೀರ್ಣವಾಗುತ್ತದೆ.
ಸಿಟ್ರಸ್ ಹಣ್ಣುಗಳು ಮನುಷ್ಯನ ಸಾಮರ್ಥ್ಯ ಮಟ್ಟಗಳನ್ನು ಏರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಳೆಹಣ್ಣು ಫೈಬರ್ ಮತ್ತು ಸರಳ ಫ್ರುಕ್ಟೋಸ್ ಅಥವಾ ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿದೆ. ಇದು ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ನಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ. ಕೆಂಪು ದ್ರಾಕ್ಷಿಯು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು ಇದನ್ನು ತ್ವರಿತವಾಗಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೀರ್ಘ ಕಾಲದವರೆಗೆ ಸಾಮರ್ಥ್ಯವನ್ನು ರಚಿಸುವ ರಿಸರ್ವಟೋಲ್ ರಾಸಾಯನಿಕವನ್ನು ದ್ರಾಕ್ಷಿ ಒಳಗೊಂಡಿದೆ.
ಹಾಗೆಯೇ ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿ ನಾರಿನಂಶ, ಪ್ರೋಟಿನ್ಗಳು ಇವೆ. ಮುಖ್ಯವಾಗಿ ಇದರಲ್ಲಿ ಕಬ್ಬಿಣಾಂಶ ಇದೆ. ಪಾಲಕ್ ಸೊಪ್ಪನ್ನು ವಾರಕ್ಕೆ 3ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೇಗೆ ಇದು ಆರೋಗ್ಯಕ್ಕೆ ಒಳ್ಳೆಯದೋ ಹಾಗೆಯೇ ಇದು ತ್ವಚೆಗೆ ಕೂಡ ಒಳ್ಳೆಯದು. ಹಾಗೆಯೇ ಸೇಬುಹಣ್ಣು ಕೂಡ ದೇಹಕ್ಕೆ ಅತ್ಯುತ್ತಮ ಶಕ್ತಿಯನ್ನು ನೀಡುತ್ತದೆ. ಕಡಲೆಕಾಯಿ ಇದು ಕೂಡ ಒಂದು ಅತ್ಯುತ್ತಮ ಆಹಾರವಾಗಿದೆ. ಮನುಷ್ಯನ ದೇಹಕ್ಕೆ ಅತ್ಯಂತ ಉಪಯುಕ್ತ ಕ್ಯಾಲೋರಿಗಳನ್ನು ಇದು ನೀಡುತ್ತದೆ. ಮನುಷ್ಯನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.