ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು, ಮೂಗು, ಕೂದಲು, ಹಲ್ಲುಗಳು ಮತ್ತು ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ಹಾಗೆಯೇ ಅದರಲ್ಲಿ ಮುಖ ಕೂಡ ಒಂದು. ಮುಖ ಸುಂದರವಾಗಿ ಇರಬೇಕು ಎಂದರೆ ಯಾವುದೇ ರೀತಿಯ ಕಲೆಗಳು ಇರಬಾರದು. ಕಲೆಗಳು ಇದ್ದರೆ ಮುಖದಲ್ಲಿ ಅವು ಎದ್ದು ಕಾಣುತ್ತವೆ. ಆದ್ದರಿಂದ ನಾವು ಇಲ್ಲಿ ಮುಖದ ಅಂದವನ್ನು ಹೆಚ್ಚಿಸುವ ಹಾಗೂ ಬೊಜ್ಜನ್ನು ಕರಗಿಸುವ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೋ ಬಗೆಯ ಕ್ರೀಮ್ ಗಳು ಮತ್ತು ಫೇಸ್ ವಾಷ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಆದರೆ ಅವುಗಳಿಂದ ಒಳ್ಳೆಯ ಪರಿಣಾಮಗಳಿಗಿಂತ ಅಡ್ಡ ಪರಿಣಾಮಗಳು ಉಂಟಾಗುವುದು ಹೆಚ್ಚು. ಏಕೆಂದರೆ ಅದಕ್ಕೆ ರಾಸಾಯನಿಕಗಳನ್ನು ಬಳಸಿರುತ್ತಾರೆ. ಮನೆಯಲ್ಲಿ ಬೇಕಾದಷ್ಟು ವಸ್ತುಗಳನ್ನು ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಮುಖ ಒಂದು ಸರಿಯಾದ ಅಳತೆಯಲ್ಲಿ ಇರಬೇಕು ಅಥವಾ ಬೊಜ್ಜಿನಿಂದ ಕೂಡಿರಬಾರದು.

ಹಾಗೆಯೇ ಕೆಲವರಿಗೆ ಕೊಲೆಸ್ಟ್ರಾಲ್ ಒಂದೊಂದು ಭಾಗದಲ್ಲಿ ಸಂಗ್ರಹವಾಗುತ್ತದೆ. ಕೆಲವರಿಗೆ ಕೈ ಭಾಗದಲ್ಲಿ ಹೆಚ್ಚು ಬೊಜ್ಜು ಇರುತ್ತದೆ. ಹಾಗೆಯೇ ಕೆಲವರಿಗೆ ತೊಡೆಯ ಭಾಗದಲ್ಲಿ ಹೆಚ್ಚಿನ ಬೊಜ್ಜು ಇರುತ್ತದೆ. ಹಾಗೆಯೇ ಇನ್ನೂ ಕೆಲವರಿಗೆ ಹೊಟ್ಟೆಯ ಭಾಗದಲ್ಲಿ ಬೊಜ್ಜು ಸಂಗ್ರಹವಾಗುತ್ತದೆ. ಆದರೆ ಕೆಲವರಿಗೆ ಮುಖದಲ್ಲಿ ಕೂಡ ಬೊಜ್ಜು ಸಂಗ್ರಹವಾಗುತ್ತದೆ. ಇದರಿಂದ ಮುಖದ ಅಂದ ಹಾಳಾಗುತ್ತದೆ. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಮುಖದ ವ್ಯಾಯಾಮವನ್ನು ಮಾಡಬೇಕು.

ಅಂದರೆ ಮುಖವನ್ನು ಮೇಲೆ ಮಾಡಿಕೊಂಡು ಅಗಿದಂತೆ ಮಾಡಿ ಬಾಯಿ ಮುಚ್ಚುವುದು ಮತ್ತು ಕಳೆಯುವುದು ಹೀಗೆ ದಿನನಿತ್ಯ10ಬಾರಿ ಮಾಡಬೇಕು. ನಂತರದಲ್ಲಿ ನಾಲಿಗೆಯನ್ನು10ಸೆಕೆಂಡ್ ಗಳ ಕಾಲ ತೆರೆದು ಇಟ್ಟುಕೊಳ್ಳುವುದು. ಹಾಗೆಯೇ ಪ್ರಾಣಿಗಳು ದೊಡ್ಡದಾಗಿ ಬಾಯಿ ತೆರೆದಂತೆ ಮಾಡುವುದು. ನಂತರದಲ್ಲಿ ಬಾಯಿಯಲ್ಲಿ ಗಾಳಿಯನ್ನು ತುಂಬಿಕೊಂಡು ಆಕಡೆ ಈಕಡೆ ಮಾಡುವುದು. ಈ ಎಲ್ಲಾ ವ್ಯಾಯಾಮಗಳನ್ನು ಮಾಡುವುದರಿಂದ ಮುಖದಲ್ಲಿ ಇರುವ ಬೊಜ್ಜನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!