ಇತ್ತೀಚಿನ ದಿನಗಳಲ್ಲಿ ಹೊರಗಡೆ ಔತಣ ಕೂಟಗಳಲ್ಲಿ ಪ್ಲಾಸ್ಟಿಕ ಪ್ಲೇಟುಗಳ ಬಳಕೆಯೇ ಹೆಚ್ಚು. ಕೈಗೆಟುಕುವ ಬೆಲೆಯಲ್ಲಿ ಸಿಗುವ ಉಂಡು ಬೀಸಾಡಬಹುದಾದ ಪ್ಲಾಸ್ಟಿಕ ಪ್ಲೇಟುಗಳ ಬಳಕೆಯೇ ಹೆಚ್ಚು. ಈ ಪ್ಲಾಸ್ಟಿಕ್ ಪ್ಲೇಟು , ಲೋಟಗಳು ನಾವು ಒಮ್ಮೆ ಬಳಸಿ ಹಾಗೆಯೇ ಒಗೆಯಬಹುದೆ ವಿನಃ ಅವುಗಳನ್ನುವರುಬಳಕೆ ಮಾಡಲು ಸಾಧ್ಯವಿಲ್ಲ. ಇನ್ನು ಮಣ್ಣಿನಲ್ಲಿ ಹಾಕಿದರೆ ಸುಲಭವಾಗಿ ನಾಶ ಆಗುತ್ತದೆ ಎಂದುಕೊಂಡರೆ ಅದೂ ಕೂಡಾ ಇಲ್ಲಾ. ಎಷ್ಟೋ ವರ್ಷಗಳು ಭೂಮಿಯ ಅಡಿಯಲ್ಲಿ ಹಾಗೆಯೇ ಇದ್ದು ಮಾಲಿನ್ಯ ಮಾಡುತ್ತಲೇ ಇರುತ್ತವೆ ಈ ಪ್ಲಾಸ್ಟಿಕ್ ವಸ್ತುಗಳು. ಹಾಗಿದ್ದರೆ ಮಣ್ಣಿನಲ್ಲಿ ಸುಲಭವಾಗಿ ನಾಶವಾಗದ, ಬೆಂಕಿ ಹಚ್ಚಿ ಸುಟ್ಟರೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ ಪ್ಲೇಟುಗಳಿಗೆ ಬದಲಿ ಉತ್ಪನ್ನ ಬೇರೆ ಯಾವುದೂ ಇಲ್ಲವಾ? ಅಥವಾ ಇದ್ದರೂ ಅವುಗಳಿಗೆ ಬೇಡಿಕೆಯೂ ಇಲ್ಲವಾ ಅಂತಾ ನೋಡುವುದಾದರೆ , ಇದಕ್ಕೆ ಬದಲಿ ಉತ್ಪನ್ನವಾಗಿ ಮಾರುಕಟ್ಟೆಯಲ್ಲಿ ಅಡಿಕೆಹಾಳೆಯ ತಟ್ಟೆಗಳು ಲಭ್ಯ ಇವೆ. ಆದರೆ ತಯಾರಕರು ಅವುಗಳನ್ನು ಮಾರಾಟ ಮಾಡಲು ಎಷ್ಟೋ ಜನರು ಹೆಣಗಾಡುತ್ತಾರೆ. ಈ ಲೇಖನದ ಮೂಲಕ ನಾವು ಅಡಿಕೆ ಹಾಳೆಯ ತಟ್ಟೆಗಳು ಮತ್ತು ಅವುಗಳ ಪ್ರಯೋಜನ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.
ಪರಿಸರ ಸ್ನೇಹಿ ತಟ್ಟೆಗಳ ತಯಾರಿಕೆಗೆ ಬೇಕಾಗುವ ಕಚ್ಚಾವಸ್ತು ಸುಲಭದಲ್ಲಿ ಸಿಕ್ಕರೆ, ಪ್ಲಾಸ್ಟಿಕ ಸರಕುಗಳಿಗೆ ಬದಲಿ ವ್ಯವಸ್ಥೆ ಆಗುವುದಾದರೆ ಅಡಿಕೆ ಹಾಳೆಯ ತಟ್ಟೆಗಳನ್ನೇ ತಯಾರಿಸಿ ಅವುಗಳನ್ನೇ ಬಳಸುವುದು ಉತ್ತಮ. ಇದೊಂದು ಗೃಹ ಕೈಗಾರಿಕೆ ಆಗಿದ್ದು, ಇದಕ್ಕೆ ಬೇಕಾಗಿರುವ ಮೂಲ ವಸ್ತು ಅಥವಾ ಕಚ್ಚಾವಸ್ತುವಾದ ಅಡಿಕೆ ಹಾಳೆಯನ್ನು ವಿಶಾಲವಾದ ಅಡಿಕೆ ತೋಟಗಳಿಂದ ಸಂಗ್ರಹಿಸಿ ತರಲಾಗುತ್ತದೆ. ಹಾಗೂ ಕೆಲವು ಯಂತ್ರಗಳೂ ಸಹ ಇದಕ್ಕೆ ಬೇಕಾಗುತ್ತದೆ. ಇನ್ನು ಅಡಿಕೆ ಹಾಳೆಗಳನ್ನು ಬಳಸಿಕೊಂಡು ತಟ್ಟೆ ಮತ್ತು ಬಟ್ಟಲುಗಳನ್ನು ಹೇಗೆ ತಯಾರಿಸುವುದು ಅಂತಾ ನೋಡುವುದಾದರೆ , ತಯಾರಿಕೆಯ ವಿಧಾನವನ್ನು ಈ ರೀತಿಯಾಗಿ ಇರುವುದು. ಮೊದಲು ತೋಟಗಳಿಂದ ಅಡಿಕೆಯ ಹಾಳೆಗಳನ್ನು ಹೆಕ್ಕಿ ತಂದು ಅದನ್ನು 15 ರಿಂದ 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು ಆಮೇಲೆ ಬ್ರಷ್‌ನಿಂದ ತಿಕ್ಕಿ ತೊಳೆದು ಸುಮಾರು ಅರ್ಧ ಗಂಟೆಗಳ ಕಾಲ ಒಣಗಿಸಬೇಕು. ಈ ರೀತಿಯಾಗಿ ಅರ್ಧ ಒಣಗಿದ ಹಾಳೆಯನ್ನು ನಮಗೆ ಬೇಕಾದ ನಿರ್ದಿಷ್ಟ ಆಕಾರ ಕೊಡುವ ಯಂತ್ರದಲ್ಲಿಟ್ಟಾಗ ತಟ್ಟೆ ಮತ್ತು ಬಟ್ಟಲುಗಳು ತಯಾರಾಗುತ್ತವೆ. ಅವುಗಳನ್ನು ಸ್ವಲ್ಪ ಹೊತ್ತು ಒಣಗಲು ಬಿಟ್ಟು ಪ್ಯಾಕ್ ಮಾಡಿದರೆ ಉತ್ಪನ್ನವು ಮಾರುಕಟ್ಟೆಗೆ ಹೋಗಲು ಸಿದ್ಧವಾಗಿರುತ್ತದೆ.
ಅಡಿಕೆ ಹಾಳೆಯ ತಟ್ಟೆಗಳನ್ನು ತಯಾರಿಸುವಾಗ ಯಾವುದೇ ಯಾವುದೇ ರಾಸಾಯನಿಕ ಪದಾರ್ಥಗಳನ್ನೂ ಬಳಸಲಾಗುವುದಿಲ್ಲ. ಮೊದ ಮೊದಲು ಅಡಿಕೆ ಹಾಳೆಯೊಂದಕ್ಕೆ 25 ಪೈಸೆಯಂತೆ ಸಿಗುತ್ತಿತ್ತು ಆದರೆ ಈಗ ಹಾಳೆಯ ಉಪಯೋಗ ಗೊತ್ತಾಗುತ್ತಿದ್ದಂತೆ ಬೆಲೆ ಎರಡು ರೂಪಾಯಿಗಳಿಗೆ ಏರಿದೆ ಈ ಮೂಲಕ ಇದು ರೈತರಿಗೆ ಕೂಡಾ ಅಷ್ಟೊಂದು ಲಾಭ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಆದರೂ ಲಾಭದಾಯಕ ಎನ್ನಬಹುದು. ಇನ್ನೂ ಸಾಮಾನ್ಯವಾಗಿ ಎಲ್ಲಾ ಕೈಗಾರಿಕೆಯಲ್ಲೂ ಕಸದ ವಿಲೆವಾರಿ ಒಂದು ದೊಡ್ಡ ತಲೆನೋವಾಗಿರುತ್ತದೆ ಆದರೆ ಇಲ್ಲಿ ಕೈಗಾರಿಕೆಯ ಕಸ ಯಾವುದೇ ರೀತಿ ಅನುಪಯುಕ್ತ ಎಂದು ಎಸೆಯಲ್ಪಡದೆ ಅದು ಹಸುಗಳಿಗೆ ಉತ್ತಮ ಆಹಾರವಾಗಿರುವುದರಿಂದ ಅದರ ವಿಲೇವಾರಿ ಸಮಸ್ಯೆಯೂ ಇಲ್ಲಿ ಎದುರಾಗುವುದಿಲ್ಲ. ಅಡಿಕೆ ಹಾಳೆಯಿಂದ ಸದ್ಯಕ್ಕೆ ತಟ್ಟೆ ಮತ್ತು ಬಟ್ಟಲುಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಚಿಕ್ಕ ಪುಟ್ಟ ಪಾತ್ರೆ, ಚಮಚ, ಸೌಟುಗಳಿಗೆ ಕೂಡಾ ಈ ತಯಾರಿಕೆ ವಿಸ್ತರಿಸಿ ತಯಾರಿಸಿ ಮಾರಾಟ ಮಾಡಬಹುದು. ಸಾಧ್ಯ ಆದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆ ತ್ಯಜಿಸಿ ಪರಿಸರ ಸ್ನೇಹಿ ಅಡಿಕೆ ಹಾಳೆಯ ತಟ್ಟೆಗಳನ್ನು ಮತ್ತು ಬಟ್ಟಲುಗಳು ಬಳಕೆ ಮಾಡೋಣ.
ಸಾಧನೆಯ ಕಥೆಗಳು ಹಾಗೂ ಸ್ಫೂರ್ತಿಧಾಯಕ ಸ್ಟೋರಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ, ಹಲವು ಬಗೆಯ ವಿಚಾರ ಧಾರೆಗಳನ್ನು ತಿಳಿಯಲು ಮರೆಯದೆ ನಮ್ಮ ಫೇಸ್ಬುಕ್ ನ News Media ಪೇಜ್ ಅನ್ನು ಮರೆಯದೆ ಲೈಕ್ ಮಾಡಿ ನಿಮ್ಮ ಆತ್ಮೀಯರಿಗೂ ಕೂಡ ಈ ವಿಚಾರಗಳನ್ನು ಹಂಚಿಕೊಳ್ಳಿ ಶುಭವಾಗಲಿ