ಸಾಧನೆಯ ಹಾದಿ ಹಿಡಿಯುವ ಮನಸ್ಸಿದ್ದರೆ ಸಾಧನೆಯತ್ತ ಗುರಿ ತಲುಪಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾದವರು ಮಿಸ್ ಇಂಡಿಯಾ 2020ರ ರನ್ನರ್ ಅಪ್ ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿ ಮಾನ್ಯಾ ಸಿಂಗ್. ಮಿಸ್ ಇಂಡಿಯಾ ಎಂಬ ಹಿರಿಮೆಗೆ ಪಾತ್ರರಾದರೂ ಕೂಡಾ ತಮ್ಮ ಕಾಲೇಜಿನ ಸನ್ಮಾನ ಕಾರ್ಯಕ್ರಮದಲ್ಲಿ ತಂದೆಯ ಆಟೋದಲ್ಲೇ ತೆರಳಿ ಸರಳ ಜೀವನವನ್ನು ತೋರ್ಪಡಿಸಿದ್ದಾರೆ ಮಾನ್ಯಾ ಸಿಂಗ್. ಹಾಗೂ ಸಮಾರಂಭದಲ್ಲಿ ತನ್ನ ಮುಡಿಗೇರಿದ್ದ ಕಿರೀಟವನ್ನು ಅಮ್ಮನ ಮುಡಿಗೇರಿಸಿದರು. ಆನಂದ ಪರವಶರಾಗಿ ಮಾನ್ಯಾ ಸಿಂಗ್ ಅಮ್ಮ ತನ್ನ ಮಗಳ ಸಾಧನೆಯ ಬಗ್ಗೆ ಹೆಮ್ಮೆಪಟ್ಟರು. ಬಹುತೇಕರು ತಾವು ಜೀವನದಲ್ಲಿ ಅತ್ತ್ಯನ್ನತ ಮಟ್ಟಕ್ಕೆ ಹೋದಾಗ ಹಣ ಹೆಸರು ಬಂದಾಗ ತಾವು ಬಂದ ದಾರಿಯನ್ನೇ ಮರೆತುಬಿಡುತ್ತಾರೆ. ಆದರೆ ಯಾವತ್ತು ಕೂಡ ನಾವು ಬೆಳೆದು ಬಂದ ದಾರಿಯನ್ನ ಮರೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಈಗ ಈ ಮಾತಿಗೆ ತಕ್ಕ ನಿದರ್ಶನವಾಗಿದವರು ೨೦೨೦ರ ಮಿಸ್ ಇಂಡಿಯಾ ರನ್ನರ್ ಆಪ್ ಆಗಿರುವ ಮಾನ್ಯ ಸಿಂಗ್. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಾನ್ಯ ಅವರ ತಂದೆ ಆಟೋ ಚಾಲಕ ವೃತ್ತಿಯನ್ನ ಮಾಡುತ್ತಿದ್ದು ಸನ್ಮಾನ ಕಾರ್ಯಕ್ರಮವೊಂದಕ್ಕೆ ತನ್ನ ತಂದೆಯ ಆಟೋದಲ್ಲಿಯೇ ಬಂದ ಮಾನ್ಯ ಸಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಿಸ್ ಇಂಡಿಯಾ ರನ್ನರ್ ಅಪ್ ಖ್ಯಾತಿಗೆ ಹೆಸರಾದ ಮಾನ್ಯಾಳನ್ನು ಮಂಗಳವಾರ ಠಾಕೂರ್ ವಿಜ್ಞಾನ ಮತ್ತು ವಾಣಿಜ್ಯ ವಿಶ್ವವಿದ್ಯಾಲಯ ಸನ್ಮಾನ ಸಮಾರಂಭಕ್ಕೆ ಕರೆ ನೀಡಿತ್ತು. ಆ ಸಂದರ್ಭದಲ್ಲಿ ಮಾನ್ಯಾ ಕಿರೀಟ ಧರಿಸಿ ತನ್ನ ತಂದೆಯ ಆಟೋದಲ್ಲಿ ಕುಟುಂಬ ಸಮೇತವಾಗಿ ಆಗಮಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಿಸ್ ಇಂಡಿಯಾ ರನ್ನರ್ ಅಪ್ ಆದರೂ ತಮ್ಮ ಹಳೆಯ ಕಷ್ಟದ ದಿನಗಳನ್ನು ಮರೆಯದೆ ಎಂದಿನಂತೆ ಇದ್ದಾರೆ. ಇದು ಮಾನ್ಯಾಳ ಸರಳ ಜೀವನವನ್ನು ತೋರ್ಪಡಿಸುತ್ತದೆ. ಉತ್ತರಪ್ರದೇಶದ ಕುಶಿನಗರದಲ್ಲಿ ಹುಟ್ಟಿದ ಈಕೆಯ ವಯಸ್ಸು ಈಗಿನ್ನು ಕೇವಲ ೧೯ ವರ್ಷ. ಇವರ ತಂದೆ ಓಂ ಪ್ರಕಾಶ್ ಸಿಂಗ್ ಆಟೋ ಚಾಲಕರಾಗಿದ್ದು ಇವರ ತಾಯಿ ಮನೋರಮಾ ಸಿಂಗ್ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಾರೆ.
ಮಾನ್ಯ ಸಿಂಗ್ ಗೆ ಸಹೋದರ ಕೂಡ ಇದ್ದಾನೆ. ಇನ್ನು ೨೦೨೦ರ VLCC ಫೆಮಿನಾ ಮಿಸ್ ಇಂಡಿಯಾ ರನ್ನರ್ ಆಪ್ ಆಗಿ ಆಯ್ಕೆಯಾಗಿರುವ ಮಾನ್ಯ ಸಿಂಗ್ ಮುಂಬೈನ ಠಾಕೂರ್ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಸನ್ಮಾನ ಕಾರ್ಯಕ್ರಮದ ಸಮಾರಂಭಕ್ಕೆ ತನ್ನ ತಂದೆಯ ಆಟೋದಲ್ಲಿಯೇ ತಾಯಿಯ ಜೊತೆಯಾಗಿ ಬಂದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಾವು ಜೀವನದಲ್ಲಿ ಎಷ್ಟೇ ಎತ್ತರದ ಮಟ್ಟಕ್ಕೆ ಹೋದರೂ ಕೂಡ ತಾವು ನಡೆದು ಬಂದ ಹಾದಿಯನ್ನ ಮರೆಯಲೇಬಾರದು ಎಂಬುದನ್ನ ಪೂರಕವಾಗಿ ಮಾಡಿ ತೋರಿಸಿದ್ದಾರೆ ಮಿಸ್ ಇಂಡಿಯಾ ರನ್ನರ್ ಆಪ್ ಆಗಿರುವ ಮಾನ್ಯ ಸಿಂಗ್. ಹ್ಯೂಮನ್ಸ್ ಆಫ್ ಬಾಂಬೆ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಮಾನ್ಯಾ ತನ್ನ ಜೀವನದ ಕಥೆಯನ್ನು ಹಂಚಿಕೊಂಡರು.
ತನ್ನ 14ನೇ ವಯಸ್ಸಿಗೆ ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಹಳ್ಳಿಯಿಂದ ರೈಲು ಹತ್ತಿ ಮುಂಬೈಗೆ ಬಂದೆ. ನಾನು ರೈಲು ಇಳಿದ ತಕ್ಷಣ ನನಗೆ ಎದುರು ಕಂಡಿದ್ದು ಪಿಜ್ಜಾ ಹಟ್. ಅಲ್ಲಿ ನಾನು ಪಾರ್ಟ್ಟೈಮ್ ಉದ್ಯೋಗಕ್ಕೆ ಸೇರಿಕೊಂಡೆ. 2 ದಿನಗಳ ನಂತರ ನಾನು ನನ್ನ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದೆ. ನಾನು ಪಿಜ್ಜಾ ಹಟ್ನಲ್ಲಿ ಕೆಲಸ ಮಾಡುತ್ತೇನೆ ಎಂಬ ವಿಷಯ ನನ್ನ ತಂದೆಗೆ ಆಗ ನೋವುಂಟು ಮಾಡಿತು. ಮರು ದಿನವೇ ನನ್ನ ತಂದೆ ಮತ್ತು ತಾಯಿ ನನ್ನನ್ನು ನೋಡಲು ಮುಂಬೈಗೆ ಬಂದಿಳಿದಿದ್ದರು ಎಂದು ಕಷ್ಟದ ಜೀವನವನ್ನು ಹಂಚಿಕೊಂಡರು. ಈ ಕುರಿತಂತೆ ಮಾತನಾಡುತ್ತ, ನನ್ನ 15ನೇ ವಯಸ್ಸಿನಲ್ಲಿ ನಾನು ಮೊದಲು ಮಿಸ್ ಇಂಡಿಯಾ ಸ್ಪರ್ಧೆಯನ್ನು ನೋಡಿದ್ದು. ಆಗಲೇ ನಾನೂ ಅವರಂತೆ ಆಗಬೇಕೆಂದು ಕನಸು ಹೊತ್ತು, ಅವರಂತೆ ಬಹುಮಾನಕ್ಕೆ ಪಾತ್ರಳಾಗುತ್ತೇನೆ ಎಂದು ಭಾವಿಸಿದೆ. ಆದರೆ ಪಿತೃ ಪ್ರಧಾನ ಕುಟುಂಬದಲ್ಲಿ ಬೆಳೆದ ನನಗೆ ಮಹಿಳೆಯರಿಗಿಂತ ಪುರುಷರೇ ಮೇಲು ಎಂಬ ಭಾವನೆಯಲ್ಲಿದ್ದೆ. ನಾನು ಈ ಕುರಿತಂತೆ ನನ್ನ ತಂದೆಯ ಬಳಿ ಮಾತನಾಡಿದಾಗ, ನಿನ್ನ ಪದವಿ ಶಿಕ್ಷಣದಲ್ಲಿ ಕಷ್ಟಪಟ್ಟರೆ ನೀನು ಸಾಧನೆಯತ್ತ ತಲುಪುತ್ತೀಯಾ ಎಂದು ಹುರಿದುಂಬಿಸಿದರು.
ಇದೀಗ ನನ್ನ ಸಾಧನೆಯತ್ತ ನಾನು ತಲುಪಿದ್ದೇನೆ. ಈಗ ನಾನು ನನ್ನ ಕುಟುಂಬಕ್ಕೆ ನೀಡಬೇಕಾದುದನ್ನು ನೀಡಬಹುದು. ಆ ಅವಕಾಶ ನನ್ನಲ್ಲೀಗ ಇದೆ. ನಾನು ಮನೆ ಖರೀದಿಸಿ ನನ್ನ ತಂದೆಗೆ ನೀಡಬೇಕೆಂದು ಇದ್ದೇನೆ. ಮೊದಲಿನಿಂದಲೂ ನನ್ನ ಆಸೆಗೆ ಅವರು ಬೆಂಬಲಿಸುತ್ತ ಬಂದಿದ್ದಾರೆ ಎಂದು ಮಾನ್ಯ ಅವರು ಮಾತನಾಡಿದರು. ಆಟೋ ಚಾಲಕರೊಬ್ಬರ ಮಗಳು ಮಿಸ್ ಇಂಡಿಯಾ ಆಗುವುದು ಎಂದರೆ ಅದು ಅಷ್ಟೊಂದು ಸುಲಭದ ಮಾತಲ್ಲ. ಇನ್ನು ಕಪ್ಪು ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದ ಮಾನ್ಯ ಸಿಂಗ್ ತಂದೆಯ ಆಟೋದಲ್ಲಿ ಬಂದು ಸನ್ಮಾನ ಸಮಾರಂಭಕ್ಕೆ ಹೋಗಿದ್ದಾರೆ. ಇನ್ನು ಇದೆ ಸಮಾರಂಭದಲ್ಲಿ ಮಾನ್ಯ ಅವರ ತಂದೆ ತಾಯಿಯನ್ನು ಕೂಡ ಸನ್ಮಾನಿಸಿ ಗೌರವಿಸಲಾಗಿದೆ.
ಸಾಧನೆಯ ಕಥೆಗಳು ಹಾಗೂ ಸ್ಫೂರ್ತಿಧಾಯಕ ಸ್ಟೋರಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ, ಹಲವು ಬಗೆಯ ವಿಚಾರ ಧಾರೆಗಳನ್ನು ತಿಳಿಯಲು ಮರೆಯದೆ ನಮ್ಮ ಫೇಸ್ಬುಕ್ ನ News Media ಪೇಜ್ ಅನ್ನು ಮರೆಯದೆ ಲೈಕ್ ಮಾಡಿ ನಿಮ್ಮ ಆತ್ಮೀಯರಿಗೂ ಕೂಡ ಈ ವಿಚಾರಗಳನ್ನು ಹಂಚಿಕೊಳ್ಳಿ ಶುಭವಾಗಲಿ