ಅಡಿಕೆ ತಟ್ಟೆ ತಯಾರಿಸಿ ಯಶಸ್ಸು ಗಳಿಸಿದ ಗ್ರಾಮೀಣ ಯುವಕ

0 15

ಅಡಕೆಗೆ ಹೋದ ಮಾನ, ಆನೆ ಕೊಟ್ಟರೂ ಬರಲ್ಲ’ ಎಂಬ ಗಾದೆ ಮಾತು ಅಡಕೆಗೆ ಇರುವ ಸ್ಥಾನ ಸಾರುತ್ತದೆ. ರಾಜ್ಯದಲ್ಲಿ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸರಬರಾಜು ಹಾಗೂ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಅಡಕೆ ಹಾಳೆಯಿಂದ ತಯಾರಿಸುವ ತಟ್ಟೆಗಳಿಗೆ ತುಂಬಾ ಬೇಡಿಕೆಯಿದೆ. ಹೀಗಾಗಿ, ಸ್ವಂತ ಉದ್ದಿಮೆ ಆರಂಭಿಸಲು ಗ್ರಾಮೀಣ ಭಾಗದ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶ ಲಭಿಸಿದೆ. ದೇಶದ ಇತರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಅಡಕೆ ತೋಟಗಳಿವೆ.ರಾಜ್ಯದಲ್ಲಿ 500 ಲಕ್ಷ ಎಕರೆ ಪ್ರದೇಶಗಳಲ್ಲಿ ಅಡಕೆ ಮರಗಳಿವೆ.

ಅಡಕೆ ಹಾಳೆಯಿಂದ ತಯಾರಿಸಿದ್ದ ತಟ್ಟೆಗಳಿಗೆ ಅಮೆರಿಕಾ, ಇಂಗ್ಲೆಂಡ್, ಸಿಂಗಪುರ, ಆಸ್ಟ್ರೇಲಿಯಾ, ಸ್ವಿಜರ್‌ಲ್ಯಾಂಡ್ ಸೇರಿ ಇನ್ನಿತರ ದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಅಮೆರಿಕಾದಲ್ಲಿ ಅಡಕೆ ತಟ್ಟೆಗಳನ್ನು ಡಾಲರ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ನಮ್ಮ ದೇಶದಲ್ಲೂ ಬೇಡಿಕೆ ಕೂಡ ಇದೆ. ಪ್ರತಿ ತಿಂಗಳು 15 ಲಕ್ಷ ಅಡಕೆ ತಟ್ಟೆಗಳಿಗೆ ಕರ್ನಾಟಕದಲ್ಲಿ ಬೇಡಿಕೆಯಿದೆ.

ತಟ್ಟೆ ತಯಾರಿಕೆ: ವಿದ್ಯುತ್‌ ಹಾಗೂ ಗ್ಯಾಸ್‌ನ ವೆಚ್ಚವಿಲ್ಲದೇ ಅಡಕೆ ಹಾಳೆಯ ತಟ್ಟೆ ತಯಾರಿಸಲು ಸ್ವಂತ ತಂತ್ರಜ್ಞಾನ 20 ದಿನಗಳವರೆಗೆ ಪ್ರಯೋಗ ನಡೆಸಿ 32 ಬೈ 30 ಇಂಚು ತಟ್ಟೆ ತಯಾರಿಸುವ ಯಂತ್ರವನ್ನು ಸ್ಥಾಪಿಸಿದ್ದಾರೆ. ಈ ಯಂತ್ರಕ್ಕೆ ಅಡಕೆ ಹಾಳೆ ನೀಡಿದಾಗ ತಟ್ಟೆಯಾಕಾರ ಹೊರತು ಪಡಿಸಿ ಉಳಿದ ವೇಸ್ಟ್‌ ಹಾಳೆ ಒಲೆಗೆ ಉರುವಲಾಗುತ್ತದೆ. ಹೆಚ್ಚು ವೆಚ್ಚವಿಲ್ಲದೆ ತಟ್ಟೆ ತಯಾರಿಸುವ ಪ್ರಯೋಗ ಯಶಸ್ವಿಯಾಗಿ ಮಾಡಿದ್ದಾರೆ.

ವೆಚ್ಚದ ಉಳಿತಾಯ: ಒಂದು ತಟ್ಟೆ ತಯಾರಿಕೆಗೆ 30ಪೈಸೆ ಗ್ಯಾಸ್‌, 40ಪೈಸ್‌ ವಿದ್ಯುತ್‌ ವೆಚ್ಚ ಉಳಿತಾಯವಾಗಿದೆ ಎನ್ನುತ್ತಾರೆ. ಮಾರುಕಟ್ಟೆಯಲ್ಲಿ ಒಂದು ತಟ್ಟೆಗೆ 3.50 ರೂ.ಗಳಿಂದ 2.50 ರೂ. ದರ ದೊರೆಯುತ್ತಿದೆ. ಈ ಉದ್ದಿಮೆ ಸ್ಥಾಪನೆಗೆ 10 ಬೈ 10 ಅಳತೆಯ ಜಾಗವಿದ್ದರೆ ಸಾಕು. ದಿನಕ್ಕೆ 400 ರಿಂದ 500 ತಟ್ಟೆ ತಯಾರಿಸಬಹುದು.
ಡಬ್ಬಲ್‌ ಆದಾಯ:

ಒಂದು ಎಕರೆಗೆ 600 ಅಡಕೆ ಗಿಡಗಳಲ್ಲಿ ತಿಂಗಳಿಗೆ ಒಂದು ಗಿಡಕ್ಕೆ ಒಂದು ಎಲೆ ಉದುರುತ್ತದೆ. ವರ್ಷಕ್ಕೆ ಒಂದು ಎಕರೆ ಉದುರಿದ ಎಲೆಯಿಂದಲೆ ಹತ್ತು ಸಾವಿರ ರೂ. ಆದಾಯ ದೊರೆಯುತ್ತದೆ.ಇನ್ನೊಬ್ಬರ ಬಳಿ ದುಡಿಯುವ ಬದಲು ನಾವೇ ಸ್ವಂತ ದುಡಿದು ಗಳಿಸುವ ಈ ಉದ್ಯಮ ನನಗೆ ತೃಪ್ತಿ ತಂದಿದೆ.

ಒಂದು ರೂಪಾಯಿ ನೀಡಿ ರೈತರಿಂದ ಖರೀದಿಸಿದ ಪ್ರತಿ ಅಡಕೆ ಹಾಳೆಯನ್ನು 200 ಲೀಟರ್ ನೀರು ಇರುವ ಡ್ರಮ್ ಅಥವಾ ಸಣ್ಣ ತೊಟ್ಟಿಯಲ್ಲಿ ಅರ್ಧ ಗಂಟೆಗಳ ಕಾಲ ನೆನೆಹಾಕಿ ಸೂಕ್ತವಾದ ರೀತಿಯಲ್ಲಿ ಹದ ಮಾಡಬೇಕು. ನಂತರ ನೀರುನಿಂದ ತೆಗೆದು ಒಂದು ಗಂಟೆಗಳ ಕಾಲ ನೆಲದ ಮೇಲೆ ಒಣಗಲು ಹಾಕಿ ಹಾಳೆಯನ್ನು ಮೃದವಾಗಿ ತಯಾರು ಮಾಡಬೇಕು. ಅಡಕೆ ತಯಾರು ಮಾಡುವ ಯಂತ್ರವನ್ನು ಶಾಖ ಬರುವಂತೆ 20 ನಿಮಿಷಗಳ ಕಾಲ ಬಿಡಬೇಕು. ಒಂದೊಂದೇ ಹಾಳೆಯನ್ನು ವೃತ್ತಾಕಾರದ ಯಂತ್ರದ ಮೂಲಕ ಅಚ್ಚು ಹಾಕಬೇಕು.

ಆಗ ಊಟ ಮಾಡಲು ಯೋಗ್ಯವಾದ ಅಡಕೆ ಹಾಳೆಯಿಂದ ತಟ್ಟೆ ತಯಾರಾಗುತ್ತದೆ. 40 ಸೆಕೆಂಡ್‌ಗೆ ಒಂದು ತಟ್ಟೆ ಸಿದ್ಧವಾಗುತ್ತದೆ. ಒಂದು ಅಡಕೆ ಹಾಳೆಯಿಂದ 2 ದೊಡ್ಡ ತಟ್ಟೆ ಮತ್ತು ಒಂದು ಕಪ್ ತಯಾರಿಸಬಹುದು. ಹಾಳೆ ಇದ್ದರೆ ಅದನ್ನು ಅಲ್ಟ್ರಾ ವೈಲೆಂಟ್(ಯುವಿ) ಮೆಷಿನ್‌ನಲ್ಲಿ ಬಪ್ಪಿಂಗ್ ಮಾಡಿದರೆ ಸ್ವಚ್ಛವಾಗುತ್ತದೆ. ಅಚ್ಚು ಹಾಕುವಾಗ ಗುಣಮಟ್ಟ ತಟ್ಟೆ ರೂಪಿತವಾಗದಿದ್ದರೆ ಅದನ್ನು ಎಸೆಯಲಾಗುತ್ತದೆ ಹಾಗೂ ತ್ಯಾಜ್ಯ ಗೊಬ್ಬರ ತಯಾರಿಕೆಗೆ ಬಳಕೆಯಾಗುತ್ತದೆ

ಅಡಕೆ ಹಾಳೆಯನ್ನು ಅಚ್ಚು ಹಾಕುವ ಯಂತ್ರದ ಬೆಲೆ 5 ಲಕ್ಷ ರೂ. ಇದೆ. ಬ್ಯಾಂಕ್‌ಗಳಿಂದ ಶೇ.45 ಸಬ್ಸಿಡಿ ಸಿಗುತ್ತದೆ. ಒಂದು ತಟ್ಟೆ ಹಾಕಲು 25ರಿಂದ 40 ಪೈಸೆಯಂತೆ ಕೂಲಿ ಕೊಡಲಾಗುತ್ತದೆ. ದಿನಕ್ಕೆ ಎಷ್ಟು ತಟ್ಟೆ ಅಚ್ಚು ಹಾಕುತ್ತಾರೋ ಅಷ್ಟು ಹಣವನ್ನು ಅವರು ಸಂಪಾದಿಸಬಹುದು.

ಕೆವಿಐಸಿಯಲ್ಲಿ ಮಹಿಳೆಯರಿಗೆ ಶೇ.35, ಪುರುಷರಿಗೆ ಶೇ.30 ಸಬ್ಸಿಡಿ ಜಿಲ್ಲಾ ವಾಣಿಜ್ಯ ಕೈಗಾರಿಕೆಯಲ್ಲಿ (ಡಿಐಸಿ)ಮಹಿಳೆ ಹಾಗೂ ಪುರುಷರಿಗೆ ತಲಾ ಶೇ.10 ಸಬ್ಸಿಡಿ. ವಿದೇಶಗಳಿಗೆ ರಪ್ತು ಮಾಡುವ ಉದ್ದಿಮೆದಾರರಿಗೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಎಪಿಇಡಿಎ)ಶೇ.25 ಸಬ್ಸಿಡಿ. ದಿನಕ್ಕೆ ಒಂದು ಯೂನಿಟ್‌ನಿಂದ 1500 ತಟ್ಟೆಗಳನ್ನು ತಯಾರಿಸಬಹುದು. ದಿನವೊಂದರಲ್ಲಿ ಆಯಾ ದಿನ ಕೂಲಿ ಸಾಮರ್ಥ್ಯದ ಮೇಲೆ ತಟ್ಟೆಗಳನ್ನು ತಯಾರಿಸಲಾಗುತ್ತಿದೆ. ತಿಂಗಳಿಗೆ ಆಂದಾಜು 50 ಸಾವಿರ ರೂ. ವಹಿವಾಟು ನಡೆಸಬಹುದು. ಎಲ್ಲ ಖರ್ಚು ಕಳೆದರೂ ತಿಂಗಳಿಗೆ 30 ಸಾವಿರ ರೂ. ಲಾಭ ಸಿಗಲಿದೆ. ಉದ್ದಿಮೆ ಆರಂಭಿಸಲು ದೊಡ್ಡ ವಿಸ್ತೀರ್ಣದ ಜಾಗ ಬೇಕಿಲ್ಲ. 10/10 ವಿಸ್ತೀರ್ಣದ ಜಾಗವಿದ್ದರೆ ಸಾಕು. ಸಿಂಗಲ್ ಪೇಸ್ ವಿದ್ಯುತ್‌ನಲ್ಲಿ ಮೆಷಿನ್ ಆಪರೇಟ್ ಮಾಡಬಹುದು. ಅಲ್ಲದೇ ಸರ್ಕಾರದಿಂದ ವಿದ್ಯುತ್‌ಗೆ ಸಬ್ಸಿಡಿ ಸಿಗುತ್ತದೆ. ಸೋ ಇಷ್ಟೇ ಇಷ್ಟು ಜಾಗವಿದ್ದರೇ, ನಿಮ್ಮ ಅಡಕೆ ಹಾಳೆ ತಯಾರಿಕೆಯ ಉದ್ದಿಮೆ ಆರಂಭ.

ನಿರುದ್ಯೋಗಿಗಳೇ ಹಾಗೂ ಸಿಶಕ್ತಿ ಸಂಘದ ಮಹಿಳೆಯರೇ ಚಿಂತೆ ಬಿಡಿ. ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಸಾಲದಿಂದ ಸ್ವಂತ ಉದ್ದಿಮೆ ಆರಂಭಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಿ. ಅಡಕೆ ಹಾಳೆಯಿಂದ ತಟ್ಟೆ ಹಾಗೂ ಲೋಟ ತಯಾರಿಸುವ ಸ್ವಂತ ಉದ್ದಿಮೆ ಆರಂಭಿಸಿಕೊಂಡು ಪ್ರತಿ ತಿಂಗಳು 50 ಸಾವಿರ ರೂ. ವಹಿವಾಟು ನಡೆಸಬಹುದು.

Leave A Reply

Your email address will not be published.