ಜಗತ್ತಿನ ಅತಿ ಮುದ್ದಾದ ಕರು ನೋಡಿ ವಿಡಿಯೋ

0 3

ಹಿಂದೂ ಧರ್ಮದಲ್ಲಿ ದನಗಳನ್ನು ಗೋಮಾತೆ ಎಂದು ಪೂಜಿಸುತ್ತಾರೆ. ವೇದಗಳ ಕಾಲದಿಂದಲೂ ದನಕರುಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ದನಗಳು ದೊಡ್ಡ ಪಳಗಿಸಿದ ಗೊರಸುಳ್ಳ ಪ್ರಾಣಿಗಳ ಅತಿ ಸಾಮಾನ್ಯ ವಿಧವಾಗಿದೆ. ಅವು ಬೋವಿನಿ ಉಪಕುಟುಂಬದ ಒಂದು ಪ್ರಮುಖ ಆಧುನಿಕ ಸದಸ್ಯವಾಗಿವೆ. ಬೋಸ್ ಪ್ರಜಾತಿಯ ಅತಿ ವ್ಯಾಪಕ ಜಾತಿಯಾಗಿವೆ, ಮತ್ತು ಅತಿ ಸಾಮಾನ್ಯವಾಗಿ ಒಟ್ಟಾರೆಯಾಗಿ ಬೋಸ್ ಪ್ರೀಮಿಗೇನ್ಯೂಸ್ ಎಂದು ವರ್ಗೀಕರಿಸಲ್ಪಡುತ್ತವೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜಾನುವಾರುಗಳಾಗಿ, ಹಾಲು ಮತ್ತು ಇತರ ಕ್ಷೀರೋತ್ಪನ್ನಗಳಿಗಾಗಿ ಹೈನು ಪ್ರಾಣಿಗಳಾಗಿ ಮತ್ತು ಭಾರ ಎಳೆಯುವ ಪ್ರಾಣಿಗಳಾಗಿ ಎತ್ತುಗಳು, ಬಂಡಿಗಳು ಹಾಗೂ ನೇಗಿಲುಗಳು ಇತ್ಯಾದಿಗಳನ್ನು ಎಳೆಯುವುದಕ್ಕಾಗಿ ಬಳಸಲಾಗುತ್ತದೆ. ಗೋವನ್ನು ನಮ್ಮ ಭಾಗದಲ್ಲಿ ಪೂಜಿಸುವುದಿಲ್ಲದೆ ಮನೆಯ ಸದಸ್ಯರಂತೆ ನೋಡಿಕೊಳ್ಳಲಾಗುತ್ತದೆ. ಆಕಳನ್ನು ಪಾಲನೆ-ಪೋಷಣೆ ಮಾಡಿ ಜೊತೆಗೆ ಆಕಳು ಕರು ಹಾಕಿದಾಗ ಅದರ ಪಾಲನೆ ಪೋಷಣೆಯನ್ನು ಸಹ ಮಾಡಲಾಗುತ್ತದೆ. ಕರುವಿನ ಪಾಲನೆ ಪ್ರಾಯಶಃ ಹಸು ಗಬ್ಬವಾದೊಡನೆಯೇ ಆರಂಭವಾಗುವುದು. ಗಬ್ಬದ ಹಸುವಿಗೆ ಸಮತೂಕದ ಆಹಾರ ಗರ್ಭಾವಧಿಯಲ್ಲಿ ದೊರೆಯಬೇಕು. ಅದಕ್ಕೆ ವ್ಯಾಧಿಗಳು ಬರದಂತೆ ಎಚ್ಚರ ವಹಿಸಬೇಕು. ಸಾಕಷ್ಟು ವಿಶ್ರಾಂತಿಯೂ ದೊರೆಯಬೇಕು. ಇವುಗಳ ಪರಿಣಾಮವಾಗಿ ಹುಟ್ಟುವ ಎಳೆಗರು ದೃಢಕಾಯದ್ದಾಗಿದ್ದು ಆರೋಗ್ಯ ಪೂರ್ಣವಾಗಿರುವುದು.

ಕರು ಹುಟ್ಟುವುದು ತಾಯಿ ಹಸುವಿಗೆ ಗರ್ಭಮೂಡಿ ಒಂಬತ್ತು ತಿಂಗಳ ತರುವಾಯವಾಗಿರುತ್ತದೆ. ಮನುಷ್ಯರಂತೆ ಕರುಗಳಿಗೂ ಅದರ ತಾಯಿಯ ಹಾಲೇ ಸರ್ವಶ್ರೇಷ್ಠ. ಹುಟ್ಟಿದ ದಿನದಿಂದಲೂ ಕನಿಷ್ಠ 3–4 ತಿಂಗಳಾದರೂ ಕರುಗಳಿಗೆ ಅದರ ಶರೀರದ ತೂಕದ ಶೇ.10ರಷ್ಟು ತಾಯಿಯ ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40ಕೆ.ಜಿ ತೂಕ ಇರುತ್ತದೆ. ಹೀಗೊಂದು ಪುಂಗನೂರು ತಳಿಯ ಹಸು ಇದೆ. ಪುಂಗನೂರು ಹಸುವಿನ ತಳಿ ಶುದ್ಧ ದೇಸಿ ತಳಿಯಾಗಿದೆ. ಪುಂಗನೂರು ಎನ್ನುವುದು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಡಿಸ್ಟ್ರಿಕ್ಟ್ ನ ಪುಂಗನೂರ್ ನ ತಳಿಯಾಗಿದೆ. ಇದೊಂದು ಚಿಕ್ಕ ಪ್ರದೇಶವಾಗಿದ್ದು ಇಲ್ಲಿ ಹೈನುಗಾರಿಕೆಗೆ ಪ್ರಮುಖ ಮಹತ್ವವನ್ನು ನೀಡುತ್ತಾರೆ.

ಜೊತೆಗೆ ಹಸುವನ್ನು ತುಂಬಾ ಚಂದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಈ ತಳಿಯಲ್ಲಿ ಸಿಗುವ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಫ್ಯಾಟ್ ಕಂಟೆಂಟ್ ದೊರೆಯುತ್ತದೆ. ನೋಡಲು ಕೂಡ ಅತ್ಯಂತ ಆಕರ್ಷಕವಾಗಿ ಇರುತ್ತವೆ. ಪುಂಗನೂರು ತಳಿಯ ಹಸುಗಳು ಹೆಚ್ಚಾಗಿ ಬಿಳಿ ಹಾಗೂ ತಿಳಿ ಬೂದುಬಣ್ಣದಲ್ಲಿ ಇರುತ್ತದೆ. ಹಸುಗಳು ಅಜಮಾಸು 115 ರಿಂದ 23 ಕೆಜಿವರೆಗೆ ತೂಕ ಬರುತ್ತದೆ. ಈ ಹಸುಗಳು ದಿನಕ್ಕೆ ಸರಾಸರಿ 3 ರಿಂದ 5 ಲೀಟರ್ ಹಾಲನ್ನು ನೀಡುತ್ತದೆ. ಈ ಪುಂಗನೂರು ಜಾತಿಯ ಕರುಗಳು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತವೆ. ನೋಡಲು ಎಲ್ಲ ಹಸುಗಳಿಗಿಂತ ಸ್ವಲ್ಪ ವಿಭಿನ್ನವಾಗಿ ಕಾಣುತ್ತವೆ. ಇಂತಹದೊಂದು ಪುಂಗನೂರು ತಳಿಯ ಹಸುವಿನ ಕರು ಜನರ ಮನಸ್ಸನ್ನು ಆಕರ್ಷಿಸಿದೆ.

Leave A Reply

Your email address will not be published.