ಕೆಮ್ಮು ನಿವಾರಣೆಗೆ ನಿಮಿಷದಲ್ಲೇ ಪರಿಹರಿಸುತ್ತೆ ಈ ಹಳ್ಳಿ ಮದ್ದು

0 8

ವಾತವರಣದಲ್ಲಿ ಸ್ವಲ್ಪ ಏರುಪೇರಾದರೂ ಸಾಕು ಈ ಶೀತ ಕೆಮ್ಮು, ಸಮಸ್ಯೆಗಳು ಜೀವ ಹಿಂಡಿ ಬಿಡುತ್ತವೆ, ಅದರಲ್ಲೂ ಒಣಕೆಮ್ಮಿನ ಸಮಸ್ಯೆಯು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆ ಕೆಲವೊಂದು ವೈರಸ್ ನಿಂದ ಉಂಟಾಗುವುದರಿಂದ ಆಗಾಗ ಗಂಟಲಿನಲ್ಲಿ ಕೆರೆತ ಮತ್ತು ನಿರಂತರ ಕೆಮ್ಮು ಕಂಡು ಬರುವುದು.

ಸಾಮಾನ್ಯವಾಗಿ ಒಣ ಕೆಮ್ಮು ಪದೇ ಪದೇ ಗಂಟಲಿನ ನೋವು ಮತ್ತು ಕಿರಿಕಿರಿ ಉಂಟು ಮಾಡುವುದರಿಂದ ಯಾರ ಮುಂದೆಯೂ ನೀವು ನಿಂತುಕೊಂಡ ವೇಳೆ ಕೆಮ್ಮು ಬಂದರೆ ಆಗ ತುಂಬಾ ಮುಜುಗರ ವಾಗುವುದು ಸಹಜ. ಅಲ್ಲದೇ ಒಣ ಕೆಮ್ಮು ಪರಿಹಾರವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಗಂಟಲಿನ ಕಿರಿಕಿರಿ, ಮಾಲಿನ್ಯ, ಪ್ರೌಢಾವಸ್ಥೆಯ ವೇಳೆ ಹಾರ್ಮೋನ್ ಅಸಮತೋಲನ, ಶ್ವಾಸಕೋಶದ ಸಮಸ್ಯೆ ಮತ್ತು ಉಸಿರಾಟದ ಸೋಂಕಿನಿಂದಾಗಿ ಒಣ ಕೆಮ್ಮಿನ ಸಮಸ್ಯೆಯು ಬರುವುದು. ಆಲ್ಕೋಹಾಲ್ ಸೇವನೆ, ಮಾಲಿನ್ಯಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದು ಇತ್ಯಾದಿಗಳು ಕೂಡ ಒಣ ಕೆಮ್ಮಿಗೆ ಕಾರಣವಾಗಿರುವುದು. ಒಣ ಕೆಮ್ಮು ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ಇಲ್ಲಿವೆ. ನಿಮ್ಮ ಗಂಟಲು ತೆರವುಗೊಳಿಸಲು ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿಯಬೇಕೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಮೊದಲಿಗೆ ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಿ. ಒಂದುವೇಳೆ ಹಾಲು ಈಗಾಗಲೇ ನೀವು ಬಿಸಿ ಮಾಡಿದ್ದರೆ ಉಗುರು ಬೆಚ್ಚ ಮಾಡಿಕೊಂಡು ಇಟ್ಟಿರಿ ತದನಂತರ ಖಾಲಿ ಗ್ಲಾಸ್ಗೆ ಈ ಹಾಲು ಹಾಕಿ.ಇನ್ನು ಅರಿಶಿನ ಹುಡಿ ಮತ್ತು ಜಜ್ಜಿರುವ ಕರಿಮೆಣಸಿನ ಕಾಳು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಕುಡಿಯುವಾಗ ಹಾಲು ಉಗುರುಬೆಚ್ಚಗೆ ಇರಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ. ರಾತ್ರಿ ಮಲಗುವ ಮೊದಲು ಇದನ್ನು ಒಂದು ವಾರಗಳ ಕಾಲ ಸೇವಿಸುತ್ತಾ ಬಂದರೆ, ಆರೋಗ್ಯಕ್ಕೂ ಒಳ್ಳೆಯದು, ಕೆಮ್ಮು ಕೂಡ ಕೂಡಲೇ ಕಡಿಮೆ ಆಗುವುದು.

2-3 ಈರುಳ್ಳಿ ಜಜ್ಜಿಕೊಳ್ಳಿ ಮತ್ತು ಇದರ ರಸ ತೆಗೆಯಿರಿ. ಇದನ್ನು ಲಿಂಬೆರಸ ಮತ್ತು ಅರ್ಧ ಲೋಟ ನೀರಿನ ಜತೆಗೆ ಮಿಶ್ರಣ ಮಾಡಿ. ಎರಡು ಸಲ ನೀವು ಇದನ್ನು ಕುಡಿಯಿರಿ. ಎದೆ ಕಟ್ಟಿರುವುದನ್ನು ನಿವಾರಣೆ ಮಾಡಲು ಮತ್ತು ಕಫ ಸಡಿಲಗೊಳಿಸಲು ಇದು ತುಂಬಾ ನೆರವಾಗಲಿದೆ. ಅರ್ಧ ಚಮಚ ಶುಂಠಿ ಪೇಸ್ಟ್ ತೆಗೆದುಕೊಳ್ಳಿ ಮತ್ತು ಇದನ್ನು ಕರಿಮೆಣಸಿನ ಹುಡಿ ಮತ್ತು ಜೇಣುತುಪ್ಪದ ಜತೆಗೆ ಮಿಶ್ರಣ ಮಾಡಿ. ಎರಡು ಚಮಚ ನೀರಿನೊಂದಿಗೆ ಇದನ್ನು ಮಿಶ್ರಣ ಮಾಡಿಕೊಂಡು ಕುಡಿಯಿರಿ. ದಿನದಲ್ಲಿ ಎರಡು ಸಲ ಸೇವಿಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ಕರಿಮೆಣಸು,  ಶುಂಠಿ, ಧನಿಯಾ ಕಾಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಹಾಕಿ, ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಅದನ್ನು ಕುಡಿದರೆ ಎರಡೇ ದಿನದಲ್ಲಿ ಕೆಮ್ಮು ಕಡಿಮೆಯಾಗುತ್ತದೆ.  ನೆಗಡಿ, ಕೆಮ್ಮು ಇಲ್ಲದ ಸಂದರ್ಭದಲ್ಲಿಯೂ ಕನಿಷ್ಠ ವಾರಕ್ಕೆರಡು ಬಾರಿ ಈ ಕಷಾಯ ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಸಹ ಹೆಚ್ಚುತ್ತದೆ.

Leave A Reply

Your email address will not be published.