15ರೂ ಸಂಬಳದಿಂದ 40 ಕೋಟಿ ಆಸ್ತಿಯ ಒಡೆಯರಾದ, ಬಡತನದಿಂದ ಬಂದು ಪ್ರಾಮಾಣಿಕವಾಗಿ ಕೋಟಿಗಳಿಸಿದ ಶ್ರೀಧರ್ ಅವರ ಜೀವನ ಹೇಗಿತ್ತು ಎನ್ನುವುದರ ಬಗ್ಗೆ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಸನ್ ಡ್ರಾಪ್ ಕಂಪನಿಯ ಮಾಲೀಕರಾದ ಶ್ರೀಧರ್ ಅವರ ಮೊದಲ ಸಂಬಳ ದಿನಕ್ಕೆ 15 ರೂಪಾಯಿ. ಕೆಲಸ ಮಾಡುತ್ತಾ ಶಿಕ್ಷಣ ಪಡೆಯುತ್ತಾ ಒಂದು ಯೂನಿಯನ್ ಗೆ ಸೇರುತ್ತಾರೆ. ಬರುತ್ತಿರುವ ಸಂಬಳದಲ್ಲಿ ಮನೆಯನ್ನು ನಿಭಾಯಿಸುವುದು ಕಷ್ಟವಾಯಿತು. ಕೆಲಸದ ಜೊತೆಗೆ ಪಾರ್ಟ್ ಟೈಮ್ ಕೆಲಸವಾಗಿ ಊರಿನಿಂದ ತೆಂಗಿನಕಾಯಿಗಳನ್ನು ತಂದು ಮಾರುತ್ತಿದ್ದರು. ಯೂನಿಯನ್ ನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಅವರು ಅನ್ಯ ಮಾರ್ಗದಲ್ಲಿ ಹಣ ಮಾಡಲಿಲ್ಲ, ಬೇರೆಯವರಿಗೂ ಹಣ ಮಾಡಲು ಬಿಡಲಿಲ್ಲ ಇದರಿಂದ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಆಗ ಅವರು ನನ್ನಿಂದ ಸಾಧನೆ ಮಾಡಲು ಸಾಧ್ಯವಿಲ್ಲವೇ ಎಂದು ಸವಾಲಾಗಿ ತೆಗೆದುಕೊಂಡರು. ಸವಾಲನ್ನು ಸ್ವೀಕರಿಸಿದಾಗ ನಾವು ಸಾಧನೆಯನ್ನು ಮಾಡುತ್ತೇವೆ ಎಂದು ಅವರು ಹೇಳಿದರು. ನಂತರ ಸೋಲಾರ್ ವಾಟರ್ ಹೀಟರ್ ಕಂಪನಿಯಲ್ಲಿ ಕೆಲಸ ಮಾಡಿದರು ಅಲ್ಲಿಯೂ ಸರಿಯಾಗಿ ಹಣ ಸಿಗದೆ ಅದನ್ನು ಬಿಟ್ಟರು. ಅವರಿಗೆ ಬಿಸಿನೆಸ್ ಮಾಡಲು ಮನಸಿತ್ತು ಆದರೆ ಹಣವಿರಲಿಲ್ಲ.

ತಮ್ಮ ಬಳಿ ಇರುವ ಕಡಿಮೆ ದುಡ್ಡಿನಲ್ಲಿ ಬಿಸಿನೆಸ್ ಪ್ರಾರಂಭಿಸಿದರು, ಪ್ರಾರಂಭದಲ್ಲಿ ಕಷ್ಟವಾಯಿತು, ಸಾಲ ಮಾಡಿದರು. ಒಂದು ವರ್ಷಕ್ಕೆ ಸಾಲ ತೀರಿಸಿದರು, ಸ್ವಲ್ಪ ಹಣ ಗಳಿಸಿದರು. ಅವರು ಕಡಿಮೆ ಸಂಬಳ ಬರುವ ಸಮಯದಲ್ಲಿ ಲೆಕ್ಕಾಚಾರ ಇಡುತ್ತಿದ್ದರು, ಹಣದ ಬಗ್ಗೆ ಲೆಕ್ಕಾಚಾರ ಇಟ್ಟರೆ ನಾವು ಮುಂದೆ ಬರಲು ಸಾಧ್ಯ ಎನ್ನುವುದು ಶ್ರೀಧರ್ ಅವರ ಅಭಿಪ್ರಾಯ. ಅವರು ಪ್ರತಿದಿನ ಹಣದ ಲೆಕ್ಕಾಚಾರವನ್ನು ಬರೆದಿಡುತ್ತಿದ್ದರು. ಜೀವನದಲ್ಲಿ ಮುಂದೆ ಬರಬೇಕೆಂದರೆ ಹಾರ್ಡ್ ವರ್ಕ್ ಮಾಡಬೇಕು ನಂತರ ಬಿಸಿನೆಸ್ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು, ಸ್ಮಾರ್ಟ್ ವರ್ಕ್ ಮಾಡಬೇಕು. ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು ಎಂದು ಅವರು ಹೇಳಿದರು. ನ್ಯಾಯವಾದ ರೀತಿಯಲ್ಲಿ ಹಣ ಮಾಡಲು ಆಗುವುದಿಲ್ಲ ಎಂಬ ಬೇಜಾರು ಅವರಿಗೆ ಕಾಡುತಿತ್ತು. ಜೀವನದಲ್ಲಿ ಹಣವೂ ಬೇಕು, ಎಂಜಾಯ್ ಮಾಡಬೇಕು, ಆರೋಗ್ಯವು ಬೇಕು, ಕೇವಲ ಹಣವೊಂದೇ ಜೀವನವಲ್ಲ, ನಾವು ಬೇರೆಯವರಿಗೆ ಸಹಾಯ ಮಾಡಬೇಕು ಎಂದು ಅವರು ಜೀವನದ ಬಗ್ಗೆ ಅಮೂಲ್ಯ ಮಾತುಗಳನ್ನು ಹಂಚಿಕೊಂಡರು.

ತಮ್ಮ ಅನುಭವಗಳನ್ನು ಬೇರೆಯವರಿಗೆ ಹೇಳಬೇಕು ಎಂದು ಹೇಳಿದರು. ನಮಗೆ ಸಹಾಯ ಮಾಡಿದವರಿಗೆ ನಾವು ಸಹಾಯ ಮಾಡಬೇಕು ಮತ್ತು ಸರಿಯಾದ ಸಮಯದಲ್ಲಿ ಸರಿಯಾಗಿ ಇನ್ವೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ. ಅವರು 70 ಲಕ್ಷದ ಭೂಮಿಯನ್ನು ಪರ್ಚೇಸ್ ಮಾಡುತ್ತಾರೆ. ಸೋಲಾರ್ ಬಿಸಿನೆಸ್ ನಲ್ಲಿ ಸರ್ಕಾರದಿಂದ ಸಿಗುವ ಸಬ್ಸಿಡಿಯನ್ನು ಬಹಳಷ್ಟು ಜನರು ದುರುಪಯೋಗ ಮಾಡಿಕೊಳ್ಳುತ್ತಿದ್ದರು ಆಗ ಶ್ರೀಧರ್ ಅವರು ಮಿನಿಸ್ಟರ್ ಗೆ ಪತ್ರ ಬರೆದು ಸಬ್ಸಿಡಿಯನ್ನು ನಿಲ್ಲಿಸಿದರು ಇದರಿಂದ ಎರಡೂವರೆ ಕೋಟಿಯಷ್ಟು ಹಣವನ್ನು ದೇಶಕ್ಕೆ ಉಳಿಸಿದ್ದಾರೆ. ಅವರು ದುಡ್ಡನ್ನು ನ್ಯಾಯವಾಗಿ ಸಂಪಾದಿಸಬೇಕು ಎಂದು ಹೇಳಿದ್ದಾರೆ. ನಮ್ಮ ಬಳಿ ಹಣವಿರಲಿ, ಇಲ್ಲದೆ ಇರಲಿ ನಮ್ಮ ವ್ಯಕ್ತಿತ್ವ ಬದಲಾಗಬಾರದು ಶ್ರೀಧರ್ ಅವರ ವ್ಯಕ್ತಿತ್ವ ಬದಲಾಗಿಲ್ಲ, ಜೀವನ ಶೈಲಿ ಬದಲಾಗಿದೆ.

ಬಿಸಿನೆಸ್ ಮಾಡಲು ಪ್ರಾರಂಭಿಸಿ ಕೆಲವರು ಸೋಲನ್ನು ಅನುಭವಿಸುತ್ತಾರೆ ಇದಕ್ಕೆ ಮುಖ್ಯವಾದ ಕಾರಣವೆಂದರೆ ಸರಿಯಾದ ಲೆಕ್ಕಚಾರ ಇಟ್ಟಿರುವುದಿಲ್ಲ ಹಣ ಖರ್ಚು ಮಾಡುತ್ತಾರೆ. ಬಿಸಿನೆಸ್ ಯಶಸ್ವಿಯಾಗಲು ಟೀಮ್ ಸಹಕಾರವೂ ಮುಖ್ಯವಾಗಿರುತ್ತದೆ ಕೆಲಸ ಮಾಡುವವರೊಂದಿಗೆ ಸ್ನೇಹದಿಂದ ಇರಬೇಕು ಎಂದು ಶ್ರೀಧರ್ ಅವರು ಹೇಳಿದ್ದಾರೆ. ಕೊರೋನವೈರಸ್ ಹಾವಳಿಯಿಂದ ಶ್ರೀಧರ್ ಅವರು ನಷ್ಟವನ್ನು ಅನುಭವಿಸಿದರು ಆದರೆ ಅವರು ಧೈರ್ಯಗೆಡಲಿಲ್ಲ ಜೊತೆಗೆ ಆರೋಗ್ಯದ ಕಡೆ ಹೆಚ್ಚು ಗಮನವನ್ನು ನೀಡಿದ್ದಾರೆ. ಶ್ರೀಧರ್ ಅವರು ತಮ್ಮ ಮಗನಿಗಾಗಿ ಒಂದು ರೆಸ್ಟೋರೆಂಟ್ ಓಪನ್ ಮಾಡಿದರು ಅದರಿಂದ ಹೆಚ್ಚು ಲಾಭವಾಗಲಿಲ್ಲ ಆದರೆ ಕೊರೋನಾದಿಂದ ಪೂರ್ತಿ ನಷ್ಟವನ್ನು ಅನುಭವಿಸುವಂತಾಯಿತು. ನಾವು ನಷ್ಟವನ್ನು ಅನುಭವಿಸಿದಾಗ ಧೈರ್ಯ ಗೆಡಬಾರದು ಎಂದು ಶ್ರೀಧರ್ ಅವರು ಹೇಳಿದರು. ಅವರು ಪ್ರಾಮಾಣಿಕವಾಗಿರಬೇಕು, ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು, ಹಾರ್ಡ್ ವರ್ಕ್ ಮಾಡಬೇಕು, ಲೆಕ್ಕಾಚಾರ ಸರಿಯಾಗಿ ನೋಡಿಕೊಳ್ಳಬೇಕು ಈ 4 ಬದುಕಿನ ಯಶಸ್ಸಿನ ನಿಯಮಗಳನ್ನು ಸಾಮಾನ್ಯ ಜನರಿಗೆ ತಿಳಿಸಿದ್ದಾರೆ.

ಯೂನಿಯನ್ ನಲ್ಲಿ ಕೆಲಸ ಮಾಡಿರುವುದು ಒಳ್ಳೆಯ ಅನುಭವ ಕೊಟ್ಟಿದೆ ಎಂದು ಹೇಳಿದರು. ನಂಬಿಸಿ ಮೋಸ ಮಾಡುವವರು ಬಹಳಷ್ಟು ಜನರು ಸಿಗುತ್ತಾರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು, ನಮಗೆ ಧೈರ್ಯ ಇರಬೇಕು, ಭಂಡ ಧೈರ್ಯ ಇರಬಾರದು ಎಂದು ಹೇಳಿದರು. ಶ್ರೀಧರ್ ಅವರು ರಾತ್ರಿ 4 ತಾಸು ನಿದ್ರೆ ಮಾಡುತ್ತಾರೆ, ಅವರು ಟ್ಯಾಬ್ಲೆಟ್ ತೆಗೆದುಕೊಳ್ಳುವುದಿಲ್ಲ. ಅವರು ಮನೆಯಲ್ಲಿ ನೆಮ್ಮದಿ ಇದ್ದರೆ ಏನಾದರೂ ಸಾಧನೆ ಮಾಡಬಹುದು, ಕುಟುಂಬದಲ್ಲಿ ಜಗಳ ಇರುತ್ತದೆ ಅದು ಸಹಜ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಮಸ್ಯೆ ಬಂದಾಗ ಕೋಪ ಮಾಡಿಕೊಳ್ಳುವುದು, ದುಃಖ ಪಟ್ಟರೆ ಸಮಸ್ಯೆ ದೂರವಾಗುವುದಿಲ್ಲ. ನಾವು ನಗಬೇಕು, ಬೇರೆಯವರನ್ನು ನಗಿಸಬೇಕು. ಒಂದೇ ಸಮಯದಲ್ಲಿ ಹಲವು ಕೆಲಸ ಮಾಡಬೇಕು. ಯಾವುದೇ ಕೆಲಸವಾದರೂ ಶ್ರದ್ಧೆ, ಭಕ್ತಿಯಿಂದ, ಪ್ರಾಮಾಣಿಕತೆಯಿಂದ ಮಾಡಿದರೆ ಸಾಧನೆ ಮಾಡಲು ಸಾಧ್ಯ ಎಂದು ಜನಸಾಮಾನ್ಯರಿಗೆ ಶ್ರೀಧರ್ ಅವರು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!