ಶುಗರ್, ಬಿಪಿ, ನಿಶ್ಯಕ್ತಿ ಸಮಸ್ಯೆಗಳು ಬರುವುದು ಸಹಜ. ಒಂದೊಂದು ಸಮಸ್ಯೆಗೆ ಬೇರೆ ಬೇರೆ ಔಷಧಿ ಮಾಡಬೇಕಾಗುತ್ತದೆ ಆದರೆ ಈ ಎಲ್ಲ ಸಮಸ್ಯೆಗಳಿಗೆ ಒಂದೇ ಔಷಧಿ ಇದ್ದರೆ ಚೆನ್ನಾಗಿರುತ್ತದೆ. ಮನೆಯಲ್ಲೇ ತಯಾರಿಸಿದ ಜೀನಿ ಸಿರಿಧಾನ್ಯ ಪೌಡರ್ ಅನ್ನು ಪ್ರತಿದಿನ ಸೇವಿಸುವುದರಿಂದ ಎಲ್ಲ ಸಮಸ್ಯೆಗಳು ಹತೋಟಿಗೆ ಬರುತ್ತದೆ. ಹಾಗಾದರೆ ಈ ಪೌಡರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದ ದಿಲೀಪ್ ಕುಮಾರ್ ಅವರು ಕೃಷಿಯಿಂದ ಉದ್ಯಮಿಯಾಗಿದ್ದಾರೆ. ದಿಲೀಪ್ ಕುಮಾರ್ ಅವರು ಮೊದಲು ಬಿಸಿನೆಸ್, ಕೃಷಿ ಮಾಡಿದರು ಆದರೆ ಅದರಲ್ಲಿ ನಷ್ಟ ಅನುಭವಿಸಿದ ನಂತರ ಸಾಲ ಹೆಚ್ಚಾಗಿ ಬೇಸರವಾಗಿ ದಿಲೀಪ್ ಕುಮಾರ್ ಅವರು ಅವರ ಅತ್ತೆ ಮನೆಗೆ ಹೋಗಿದ್ದರು ಸಿರಿಧಾನ್ಯವನ್ನು ಅವರ ಮನೆಯಲ್ಲಿ ತಯಾರಿಸಿ ಬಳಸುತ್ತಿದ್ದರು ಆದರೆ ಹೊರಗಡೆ ಗೊತ್ತಾಗಿರಲಿಲ್ಲ. ದಿಲೀಪ್ ಕುಮಾರ್ ಅವರು ಅದರ ರುಚಿಯನ್ನು ನೋಡಿ ಈ ಪ್ರಾಡಕ್ಟ್ ಅನ್ನು ಜನರಿಗೆ ತಲುಪಿಸಬೇಕು ಎಂದು ನಿರ್ಧರಿಸುತ್ತಾರೆ.

ಮೊದಲು ಮನೆಯಲ್ಲೇ ತಯಾರಿಸುತ್ತಾರೆ ಅವರಿಗೆ ಪರಿಚಯ ಇರುವ ವೈದ್ಯರು ಸಿರಿಧಾನ್ಯವನ್ನು ಕೇಳಿ ಪಡೆಯುತ್ತಿದ್ದರು ನಂತರದ ದಿನಗಳಲ್ಲಿ ಹೆಚ್ಚಿನ ಜನರು ಕೇಳುತ್ತಿದ್ದರು. ಜೀನಿ ಸಿರಿಧಾನ್ಯದ ಪ್ರಯೋಜನಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ ಆದ್ದರಿಂದ ದಿಲೀಪ್ ಕುಮಾರ್ ಅವರು ಪೇಪರ್ ಗಳಲ್ಲಿ ಸಿರಿಧಾನ್ಯದ ಬಗ್ಗೆ ಜಾಹೀರಾತು ಹಾಕುತ್ತಿದ್ದರು. ನಂತರ ವೈದ್ಯರ ಸಹಾಯದಿಂದ ಸಿರಿಧಾನ್ಯ ಪ್ರೊಡಕ್ಟಗೆ ಹೆಸರು, ಲೈಸೆನ್ಸ್ ಪಡೆದರು. ಈ ಪ್ರಾಡಕ್ಟ್ ಕೆಲಸಗಾರರಿಂದಲೇ ತಯಾರಿ ಆಗುತ್ತದೆ. ದಿಲೀಪ್ ಕುಮಾರ್ ಅವರು ಈ ಉದ್ಯಮ ಪ್ರಾರಂಭಿಸಿ ಐದು ವರ್ಷವಾಯಿತು. ಪ್ರಾರಂಭದಲ್ಲಿ ಮನೆಗಳಿಗೆ ಅವರೆ ಹೋಗಿ ಸಿರಿಧಾನ್ಯ ಪೌಡರ್ ತಲುಪಿಸುತ್ತಿದ್ದರು ಯೂಸ್ ಮಾಡಿದ ನಂತರ ಸರಿ ಎನಿಸಿದರೆ ಅಮೌಂಟ್ ಕೊಡಿರಿ ಎಂದು ದಿಲೀಪ್ ಅವರು ಹೇಳುತ್ತಿದ್ದರು.

ಜೀನಿ ಎಂಬ ಸಿರಿಧಾನ್ಯ ಪೌಡರ್ ಕುಡಿದರೆ ಒಂದು ತಿಂಗಳಲ್ಲಿ ನಿಶಕ್ತಿ ಆದವರಿಗೆ ಶಕ್ತಿ ದೊರೆಯುತ್ತದೆ. ದಿಲೀಪ್ ಕುಮಾರ್ ಅವರು ಸಿರಿಧಾನ್ಯ ಪೌಡರ್ ತಯಾರಿಸಲು ಬೇಕಾದ ಕಾಳುಗಳನ್ನು ರಾಜ್ಯದ ಮೂಲೆ ಮೂಲೆಗಳಿಂದ ರೈತರಿಂದ ನೇರವಾಗಿ ಖರೀದಿಸುತ್ತಾರೆ. ಒಂದು ಗ್ಲಾಸ್ ನೀರಿಗೆ 2 ಸ್ಪೂನ್ ಜೀನಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಪೌಡರನ್ನು 5-10 ನಿಮಿಷ ಕುದಿಸಿ ಕುಡಿಯಬೇಕು, ಬೇಕಾದರೆ ಉಪ್ಪು ಅಥವಾ ಬೆಲ್ಲವನ್ನು ಸೇರಿಸಬಹುದು. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಕುಡಿಯಬೇಕು. 12 ವರ್ಷ ನಂತರದ ಮಕ್ಕಳಿಂದ ಹಿಡಿದು ವೃದ್ದರವರೆಗೂ ಸಿರಿಧಾನ್ಯ ಪೌಡರ್ ಕುಡಿಯಬಹುದು.‌ ಒಟ್ಟು 24 ಧಾನ್ಯಗಳನ್ನು ಬಳಸಿ ಈ ಪೌಡರನ್ನು ತಯಾರಿಸಲಾಗುತ್ತದೆ.

ದಿಲೀಪ್ ಕುಮಾರ್ ಅವರು ಇಂದು ಪ್ರತಿದಿನ ಎರಡೂವರೆ ಸಾವಿರ ಕೆಜಿ ಸಿರಿಧಾನ್ಯ ಪೌಡರ್ ಅನ್ನು ವಿತರಣೆ ಮಾಡುತ್ತಾರೆ, ಇದರಿಂದ ಪ್ರತಿ ತಿಂಗಳು 1ರಿಂದ 2 ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ಇದನ್ನು ತಯಾರಿಸಲು 110 ಜನ ಕೆಲಸಗಾರರು ದಿಲೀಪ್ ಕುಮಾರ್ ಅವರೊಂದಿಗೆ ಕೈಜೋಡಿಸುತ್ತಾರೆ, ಮಷೀನ್ ಗಳಲ್ಲಿ ಪೌಡರ್ ತಯಾರಿಸುವುದರಿಂದ ಅದರಲ್ಲಿರುವ ಸತ್ವ ಹೋಗುತ್ತದೆ ಹಾಗೂ ಜನರಿಗೆ ಕೆಲಸ ಸಿಕ್ಕಂತಾಗುತ್ತದೆ. ರೈತರಿಂದ ಖರೀದಿಸಿದ ಧಾನ್ಯಗಳನ್ನು ಕ್ಲೀನ್ ಮಾಡಿ ಮಣ್ಣಿನ ಮಡಕೆಯಲ್ಲಿ ಹುರಿದು ಸಿರಿಧಾನ್ಯ ಪೌಡರ್ ತಯಾರಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಜೀನಿ ಸಿರಿಧಾನ್ಯ ಸಿಗುತ್ತದೆ. ಕರ್ನಾಟಕ ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳಲ್ಲೂ ಸಿರಿಧಾನ್ಯ ಪ್ರೊಡಕ್ಟ್ ಸಿಗುತ್ತದೆ. ಈ ಉದ್ಯಮಕ್ಕೆ ದಿಲೀಪ್ ಕುಮಾರ್ ಅವರ ಮನೆಯವರು ಬಹಳ ಸಹಕಾರಿಯಾಗಿದ್ದಾರೆ. ಕಂಪನಿಯವರಿಗೆ ವಸ್ತು ಬೇಕಾದರೆ ರೈತರ ಮನೆಗೆ ಹೋಗಿ ವಸ್ತುಗಳನ್ನು ಖರೀದಿಸುವಂತಾಗಬೇಕು ಎಂಬುದು ದಿಲೀಪ್ ಕುಮಾರ್ ಅವರ ಮಹದಾಸೆ ಆಗಿದೆ.

ಸಿರಿಧಾನ್ಯ ಪ್ರೊಡಕ್ಟ್ ಬಿಸಿನೆಸ್ ಮಾಡಲು ಹಲವು ಸವಾಲುಗಳು ಎದುರಾಗುತ್ತವೆ ಬೇರೆ ಬೇರೆ ಕಂಪನಿಗಳು ದಿಲೀಪ್ ಕುಮಾರ್ ಅವರು ಮಾಡಿದಂತೆ ಕಾಪಿ ಹೊಡೆಯುತ್ತಾರೆ ಅಲ್ಲದೆ ಕೋಟಿಗಟ್ಟಲೆ ಹಣದ ಆಸೆ ತೋರಿಸುತ್ತಾರೆ ಈ ಸವಾಲುಗಳಿಗೆ ಹೆದರದೆ ದಿಲೀಪ್ ಕುಮಾರ್ ಅವರು ಕ್ವಾಲಿಟಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು ಸಿರಿಧಾನ್ಯ ಪ್ರೊಡಕ್ಟ್ ಅನ್ನು ಮಾರ್ಕೆಟಿಗೆ ತಂದಿದ್ದಾರೆ. ಜೀನಿ ಸಿರಿಧಾನ್ಯ ಪ್ರೊಡಕ್ಟನಲ್ಲಿ ಮಕ್ಕಳಿಗೆ ಮತ್ತು ದೊಡ್ಡವರಿಗೆ ಬೇರೆಬೇರೆ ಪ್ರೊಡಕ್ಟ್ ಇದೆ. ಹಳ್ಳಿಯಲ್ಲಿ ತಯಾರಿಸಿ ಪೇಟೆಗಳಿಗೆ ಮಾರುವಂತ ದಿಲೀಪ್ ಕುಮಾರ್ ಅವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಅಲ್ಲದೆ ದಿಲೀಪ್ ಅವರು ರೈತರು ಹಳ್ಳಿ ಬಿಟ್ಟು ಪೇಟೆಗೆ ಹೋಗಬಾರದು ಹಳ್ಳಿಯಲ್ಲಿ ಅವರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈತರು ಒಂದೇ ಬೆಳೆಯನ್ನು ಬೆಳೆಯದೆ ಹಲವು ರೀತಿಯ ಬೆಳೆಯನ್ನು ಬೆಳೆದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ದಿಲೀಪ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಜೀನಿ ಸಿರಿಧಾನ್ಯ ಪೌಡರ್ ಒಂದು ಕೆಜಿಗೆ 369 ರೂಪಾಯಿ. ಶುಗರ್, ಬಿಪಿ, ಕೈ ಕಾಲು ನೋವು, ಮಂಡಿ ನೋವು ಮುಂತಾದ ಸಮಸ್ಯೆಗಳು ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಅನ್ನು ಒಂದು ತಿಂಗಳು ಕುಡಿಯುವುದರಿಂದ ನಿವಾರಣೆಯಾಗುತ್ತದೆ. ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಪೌಡರ್ ಆರೋಗ್ಯಕರವಾಗಿದ್ದು ಪ್ರತಿಯೊಬ್ಬರೂ ಕುಡಿಯಲೇ ಬೇಕು. ಆರೋಗ್ಯ ಹಾಗೂ ಕೆಲಸ ಇವೆರಡನ್ನು ಕೊಡುತ್ತಿರುವ ದಿಲೀಪ್ ಕುಮಾರ್ ಅವರಿಗೆ ಈ ಮೂಲಕ ಧನ್ಯವಾದ ತಿಳಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!