ಮನೆ ಮನುಷ್ಯನ ವಾಸಸ್ಥಾನ. ಹುಟ್ಟಿನಿಂದ ಮನುಷ್ಯನ ಜೀವನವನ್ನು ನಿರ್ವಹಿಸುವ ಮತ್ತು ಜೀವನದ ದಾರಿಯನ್ನು ಸಾಗಿಸುವ ವಾಸ್ತವ್ಯದ ಸ್ಥಳವಾಗಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಮನೆ ಇರಲೇಬೇಕು. ಈಗಿನ ದುಬಾರಿ ಕಾಲದಲ್ಲಿ ಒಂದು ಮನೆಯನ್ನು ನಿರ್ಮಿಸುವುದು ತುಂಬಾ ಸಾಹಸಮಯವಾದ ಕೆಲಸವಾಗಿದೆ. ಆದರೆ ಮನೆ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಹೀಗಾಗಿ ಅತಿ ಕಡಿಮೆ ವೆಚ್ಚದಲ್ಲಿ ಒಂದು ಮನೆಯ ನಿರ್ಮಾಣವನ್ನು ಮಾಡುವ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಿಂದಿನ ಕಾಲದಲ್ಲಿ ಒಂದು ಗಾದೆಯನ್ನು ಮಾಡಿದ್ದರು. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂದು. ಒಂದು ಮನೆಯೆಂದರೆ ಅದಕ್ಕೆ ವ್ಯವಸ್ಥಿತವಾದ ಒಂದು ಆಯಾಮವಿರುತ್ತದೆ. ಒಂದು ಸಾಮಾನ್ಯ ಮನೆಯಲ್ಲಿ ಇರಬೇಕಾಗಿರುವ ಸ್ಥಳವೆಂದರೆ ಹೊರ ವಿರಾಮ ಸ್ಥಳ ನಂತರ ಅಡುಗೆ ಮಾಡುವ ಕೊಠಡಿ, ದೇವರ ಕೊಠಡಿ ಹಾಗೂ ಮಲಗುವ ಕೊಠಡಿ ಹೀಗೆ ಇರುವುದು. ಇದು ಒಂದು ಸುವ್ಯವಸ್ಥಿತ ಮನೆಯ ನಿರ್ಮಾಣದ ಕೆಲಸವಾಗಿದೆ. ಇದೇ ರೀತಿಯಲ್ಲಿ ಅಂದಾಜು ಲಕ್ಷ ಮೌಲ್ಯದ ಮನೆಯೇ ಆಗುತ್ತದೆ.
ಸಂಪೂರ್ಣ ಸ್ಲಾಬ್ ನಿಂದ ನಿರ್ಮಿತವಾದ ಮನೆಯೆದುರು ಸಿಟೌಟ್ ಅನ್ನು ಮಾಡಿ ಇದರಿಂದ ಪ್ರವೇಶಮಾಡಿದಾಗ ಮೊದಲು ಸಾಮಾನ್ಯ ವಿಶ್ರಾಂತಿ ಕೊಠಡಿ ದೊರಕುತ್ತದೆ. ಅದಾದ ನಂತರ ರೂಮುಗಳು ಅದಕ್ಕೆ ತಾಗಿಕೊಂಡೆ ವ್ಯವಸ್ಥಿತ ಬಾತ್ರೂಮ್ ಸಂಪೂರ್ಣ ಎಲ್ಲವು ಇರುತ್ತದೆ. ಇದಾದ ನಂತರ ಯುವಸ್ಥಿತ ಹೊಸ ರೀತಿಯಲ್ಲಿರುವ ಅಡುಗೆಮನೆಯ ಜಾಗವಾಗಿರುತ್ತದೆ. ಈ ರೀತಿ ಪ್ರತಿ ಮನೆಯ ನಿರ್ಮಾಣವಾಗುತ್ತದೆ.
ಇದರ ಸಂಪೂರ್ಣ ಸುತ್ತಳತೆ ಅಜಮಾಸು ಐದುನೂರು ಸ್ಕ್ವೆರ್ ಫುಟ್ ಇದ್ದು 2 ರೂಮ್ ಗಳನ್ನು ಒಳಗೊಂದಿರುತ್ತದೆ. ಇಂತಹ ಮನೆಯ ನಿರ್ಮಾಣದ ಅಂದಾಜು ಮೊತ್ತ ಸುಮಾರು 7ಲಕ್ಷ. ಅಂದರೆ ಈಗಿನ ದಿನಮಾನದ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣದ ಮನೆ ಎನ್ನಬಹುದು. ಈಗಿನ ಒಂದು ಸಾಧಾರಣ ಮನೆಯ ನಿರ್ಮಾಣದ ವೆಚ್ಚವೆಂದರೆ ಕನಿಷ್ಟವೆಂದರೂ ಹದಿನೈದು ಲಕ್ಷ ಮೇಲ್ಪಟ್ಟು ಆಗುತ್ತದೆ. ಅಂತಹದರಲ್ಲಿ ಕೇರಳದಲ್ಲಿ ಒಂದು ಮನೆಯನ್ನು 7 ಲಕ್ಷ ರೂಗೆ ನಿರ್ಮಾಣ ಮಾಡಿದ್ದಾರೆ. ಇಂತಹ ಕಡಿಮೆ ವೆಚ್ಚದಲ್ಲಿ ಮನೆಯ ನಿರ್ಮಾಣ ಮಧ್ಯಮವರ್ಗದವರಿಗೆ ತುಂಬಾ ಸಹಕಾರಿಯಾಗುತ್ತದೆ.