ಮುಕೇಶ್ ಅಂಬಾನಿ ಇವರು ಯಾರಿಗೆ ತಿಳಿದಿಲ್ಲ. ಇವರ ಬಗ್ಗೆ ಎಲ್ಲರಿಗೂ ತಿಳಿದಿದೆ. ರಿಲಯನ್ಸ್ ಇಂಡಸ್ಟ್ರಿಯ ಚೇರ್ಮೆನ್ ಮತ್ತು ಎಂ.ಡಿ. ಆಗಿದ್ದಾರೆ. ಇವರು ದೊಡ್ಡ ಬಿಸನೆಸ್ ಮ್ಯಾನ್ ಆಗಿದ್ದಾರೆ. ಹಾಗೆಯೇ ಇವರು ಅತ್ಯಂತ ಶ್ರೀಮಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವಿಶ್ವದಲ್ಲೆ ಅತಿ ಹೆಚ್ಚು ಬೆಲೆ ಬಾಳುವಂತಹ ಮುಂಬಯಿಯಲ್ಲಿ ಸ್ಥಾಪಿತವಾದ ಬಂಗಲೆ 27 ಅಂತಸ್ತಿನ ಖಾಸಗಿ ಕಟ್ಟಡದಲ್ಲಿ ಮುಕೇಶ್ ಅವರು ಪತ್ನಿಯಾದ ನೀತಾ ಅಂಬಾನಿ ಮಕ್ಕಳಾದ ಅನಂತ್, ಆಕಾಶ್ ಮತ್ತು ಇಶಾ ಜೊತೆಯಲ್ಲಿ ವಾಸಿಸುತ್ತಾರೆ. ಈ ಬಂಗಲೆಯು 11ಸಾವಿರ ಕೋಟಿ ಮೌಲ್ಯವನ್ನು ಹೊಂದಿದೆ. ಇತಿಹಾಸದಲ್ಲೆ ಅತ್ಯಂತ ದುಬಾರಿ ಮನೆಯೆಂದು ಹೇಳಲಾಗಿದೆ. ಇದಕ್ಕೆ ಆಂಟಿಲಿಯಾ ಎಂದು ಹೆಸರಿಡಲಾಗಿದೆ. ಇಲ್ಲಿ 600ಜನ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ.
ಅಂಬಾನಿಯವರ 27 ಅಂತಸ್ತಿನ, 400,000 ಚದರ ಅಡಿ ಮನೆಯನ್ನು ಅಟ್ಲಾನ್ಟಿಕ್ ಪ್ರದೇಶದ ಒಂದು ಪೌರಾಣಿಕ ದ್ವೀಪದ ಮೇರೆಗೆ ಹೆಸರಿಸಲಾಗಿದೆ. ಇದನ್ನು ಶಿಕಾಗೊ ಮೂಲದ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ ಮತ್ತು ವಿಲ್ ಅವರಿಂದ ವಿನ್ಯಾಸಗೊಳಿಸಲಾಗಿದೆ. ಆಸ್ಟ್ರೇಲಿಯಾ ಮೂಲದ ನಿರ್ಮಾಣ ಕಂಪನಿ ಲೇಯ್ಟನ್ ಹೋಲ್ಡಿಂಗ್ಸ್ ನಿರ್ಮಾಣ ಆರಂಭಿಸಿತು. 8 ರಿಕ್ಟರ್ ಪ್ರಮಾಣದ ಭೂಕಂಪನವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಟ್ಟಡ ನಿರ್ಮಾಣವಾಗಿರುವಂತಹ ಸ್ಥಳವು ಅನಾಥಾಶ್ರಮದ ನಿರ್ಮಾಣಕ್ಕೆ ಮೀಸಲಾಗಿತ್ತು ಹಾಗು ಇದನ್ನು ಅಂಬಾನಿ ಅವರು ಅಕ್ರಮವಾಗಿ ಗಳಿಸಿದ್ದಾರೆ ಎಂದು ಹೇಳಲಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದು. ಹಾಗೆಯೇ ಇದು ವಿಮಾನ ನಿಲ್ದಾಣವನ್ನು ಹೊಂದಿದೆ. ಇದರ ಜೊತೆಗೆ ಸಿನೆಮಾ ಟಾಕೀಸ್ ಕೂಡ ಇದೆ. ಹಾಗೆಯೇ ನೂರಕ್ಕಿಂತ ಹೆಚ್ಚು ಕಾರುಗಳನ್ನು ಇಡುವಷ್ಟು ಜಾಗ ಇದೆ. 6,37,240 ಯೂನಿಟ್ ಗಳನ್ನು ದಿನಕ್ಕೆ ಬಳಸಲಾಗುತ್ತದೆ.