ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಕೆಲವು ವೆಬ್ ಸೈಟ್ ಇರುತ್ತವೆ ಅವುಗಳು ಇಂಟರೆಸ್ಟಿಂಗ್ ಹಾಗೂ ಮಾಹಿತಿಯುಳ್ಳದ್ದಾಗಿರುತ್ತದೆ. ಈ ವೆಬ್ ಸೈಟ್ ಗಳ ಮೂಲಕ ಬ್ರಹ್ಮಾಂಡದಲ್ಲಿರುವ ಅತಿದೊಡ್ಡ ವಸ್ತುವಿನಿಂದ ಅತ್ಯಂತ ಸೂಕ್ಷ್ಮ ವಸ್ತುವಿನವರೆಗೆ ನೋಡಬಹುದಾಗಿದೆ ಆ ವೆಬ್ ಸೈಟ್ ಯಾವುದು ಹಾಗೂ ಇತರೆ ಮುಖ್ಯವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕೋಟ್ಯಾಂತರ ಜನರು ಪ್ರತಿದಿನ ಗೂಗಲ್ ನಲ್ಲಿ ಹಲವಾರು ವಿಷಯಗಳ ಬಗ್ಗೆ ಸರ್ಚ್ ಮಾಡುತ್ತಿರುತ್ತಾರೆ ಅಥವಾ ಗೂಗಲ್ ಗೆ ಸಂಬಂಧಿಸಿದ ಯೂಟ್ಯೂಬ್, ಜಿಮೇಲ್ ಹೀಗೆ ಅನೇಕ ವೆಬ್ ಸೈಟ್ ಗಳನ್ನು ನೋಡುತ್ತಾರೆ. ಗೂಗಲ್ ನಲ್ಲಿ ಅಟಾರಿ ಬ್ರೇಕ್ ಔಟ್ ಎಂದು ಸರ್ಚ್ ಮಾಡಿ ಮೊದಲನೇ ವೆಬ್ಸೈಟ್ ಓಪನ್ ಮಾಡಿದರೆ ಒಂದು ಗೇಮ್ ಓಪನ್ ಆಗುತ್ತದೆ. ಕಂಪ್ಯೂಟರ್ ನಲ್ಲಿ ಕೆಲಸ ಮಾಡಿ ಬೇಸರವಾದಾಗ ಈ ಗೇಮ್ ಆಡಬಹುದು. ಗೂಗಲ್ ಸ್ಪೇರ್ ಎಂದು ಸರ್ಚ್ ಮಾಡಿ ಮೊದಲನೇ ಲಿಂಕನ್ನು ಕ್ಲಿಕ್ ಮಾಡಿದರೆ ಅಲ್ಲಿರುವ ಲಿಂಕ್ಸ್ ಎಲ್ಲಾ ಭೂಮಿಯ ರೀತಿ ಸುತ್ತುತ್ತಿರುತ್ತದೆ. ಗೂಗಲ್ ಸ್ಪೇಸ್ ಎಂದು ಸರ್ಚ್ ಮಾಡಿದರೆ ಅಂತರಿಕ್ಷದಲ್ಲಿ ಗುರುತ್ವಾಕರ್ಷಣಬಲ ಇಲ್ಲದೆ ಇರುವುದರಿಂದ ಅಲ್ಲಿ ವಸ್ತುಗಳು ತೇಲಾಡಿದಂತೆ ಕಂಪ್ಯೂಟರ್ ನಲ್ಲಿ ಲಿಂಕ್ ಗಳು ತೇಲಾಡುವಂತೆ ಕಾಣುತ್ತದೆ. ಗೂಗಲ್ ಗ್ರ್ಯಾವಿಟಿ ಎಂದು ಸರ್ಚ್ ಮಾಡಿದರೆ ಮೇಲೆ ಇರುವ ಲಿಂಕ್ಸ್ ಕೆಳಗೆ ಬಂದು ಬಿದ್ದು ಹೋಗುತ್ತದೆ ಅದರ ಜೊತೆ ಆಟ ಆಡಬಹುದು. ಗೂಗಲ್ ಸ್ಕೈ ಎಂದು ಸರ್ಚ್ ಮಾಡಿದರೆ ಅಂತರಿಕ್ಷಕ್ಕೆ ಸಂಬಂಧಿಸಿದ ಮ್ಯಾಪ್ ಓಪನ್ ಆಗುತ್ತದೆ. ಅದರಲ್ಲಿ ಗ್ಯಾಲಕ್ಸಿಗಳಿವೆ, ಸ್ಟಾರ್, ಮೂನ್ ಗೆ ಸಂಬಂಧಿಸಿದ ಮ್ಯಾಪ್ ಇವೆ. ಮಿಲ್ಕಿವೇ ಗ್ಯಾಲೆಕ್ಸಿ ಎಷ್ಟು ದೊಡ್ಡದು ಅದರಲ್ಲಿ ಸೂರ್ಯನ ಸ್ಥಾನ ಎಷ್ಟು ಎಂದು ತಿಳಿಯಲು ವೆಬ್ ಸೈಟ್ ಇದೆ ಅದನ್ನು ಓಪನ್ ಮಾಡಿದರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದರಲ್ಲಿ ನಮ್ಮ ಸೋಲಾರ್ ಸಿಸ್ಟಮ್ ಇಂದ ಹಿಡಿದು ಸೂರ್ಯನವರೆಗೆ ಜೂಮ್ ಮಾಡಿ ನೋಡಬಹುದು.
ಬ್ರೌಸರ್ ನಲ್ಲಿ ಜೂಮ್ ಕ್ವಯ್ಟ್ 2ಡಾಟ್ ಕಾಮ್ ಎಂಬ ವೆಬ್ ಸೈಟ್ ಓಪನ್ ಮಾಡಿದರೆ ಒಂದು ಇಮೇಜ್ ಓಪನ್ ಆಗುತ್ತದೆ ಇದು ಗಂಟೆಗಳ ಕಾಲ ಜೂಮ್ ಆಗುತ್ತಲೇ ಇರುತ್ತದೆ ಇದು ನೋಡಲು ಅಮೇಜಿಂಗ್, ಇಂಟ್ರೆಸ್ಟಿಂಗ್ ಆಗಿರುತ್ತದೆ. ಕಂಪ್ಯೂಟರ್ ನಲ್ಲಿ ಬ್ರೌಸರ್ ಗೆ ಹೋಗಿ ದ ಸ್ಕೇಲ್ ಆಫ್ ದ ಯೂನಿವರ್ಸ್ ಎಂದು ಸರ್ಚ್ ಮಾಡಿ ಸ್ಟಾರ್ಟ್ ಬಟನ್ ಅನ್ನು ಕ್ಲಿಕ್ ಮಾಡಿದರೆ ಒಂದು ಸ್ಕೇಲ್ ಓಪನ್ ಆಗುತ್ತದೆ ಅದನ್ನು ಲೆಫ್ಟ್ ಸೈಡಿಗೆ ಟರ್ನ್ ಮಾಡಿದರೆ ಜೂಮ್ ಆಗುತ್ತದೆ ರೈಟ್ ಸೈಡ್ ಟರ್ನ್ ಮಾಡಿದರೆ ಜೂಮ್ ಔಟ್ ಆಗುತ್ತದೆ ಇದರಿಂದ ಬ್ರಹ್ಮಾಂಡದಲ್ಲಿರುವ ಅತಿದೊಡ್ಡ ವಸ್ತುವಿನಿಂದ ನಮ್ಮ ಬರಿಗಣ್ಣಿಗೆ ಕಾಣಲಾಗದ ಅತಿಸಣ್ಣ ವಸ್ತುವಿನವರೆಗೆ ನೋಡಬಹುದು. ಅಲ್ಲಿ ಕಾಣುವ ವಸ್ತುವಿನ ಮೇಲೆ ಕ್ಲಿಕ್ ಮಾಡಿದರೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು. ಒಂದು ವೆಬ್ ಸೈಟ್ ನಲ್ಲಿ ಬ್ರಹ್ಮಾಂಡದ ಬಗೆಗಿನ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಬಿಡುವಿದ್ದಾಗ ವೆಬ್ ಸೈಟ್ ನೋಡಿದರೆ ಹಲವು ಮಾಹಿತಿ ಸಿಗುತ್ತದೆ.