ಮಕ್ಕಳೊಂದಿಗೆ ವಿಶೇಷ ಬಾಂಧವ್ಯವುಳ್ಳ ಅನೇಕ ಬಾಲಿವುಡ್ ನಟರು ಮಕ್ಕಳನ್ನು ದತ್ತು ಪಡೆಯುವುದು ಕಾಮನ್. ಬಾಡಿಗೆ ತಾಯಿ ಮೂಲಕ ಕೆಲವು ನಟರು ಅವಿವಾಹಿತರಾದರೂ ಮಕ್ಕಳನ್ನು ಪಡೆದರೆ, ಮತ್ತೆ ಕೆಲವರು ದತ್ತು ಪಡೆದಿದ್ದಾರೆ. ಕರಣ್ ಜೋಹರ್, ತುಷಾರ್ ಕಪೂರ್, ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಸಹ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದವರು. ಆದರೆ, ಸನ್ನಿ ಲಿಯೋನ್, ಸುಷ್ಮಿತಾ ಸೇನ್ ಸೇರಿ ಹಲವಾರು ಬಾಲಿವುಡ್ ಹಾಗೂ ಹಾಲಿವುಡ್ ನಟರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ, 70ರ ದಶಕದ ಡ್ಯಾನ್ಸ್ ಕಿಂಗ್ ಮಿಥುನ್ ಚಕ್ರವರ್ತಿ ನಡೆ ಮಾತ್ರ ಎಲ್ಲರಿಗಿಂತ ವಿಭಿನ್ನವೆನಿಸುತ್ತದೆ. ಚರಂಡಿಯಲ್ಲಿ ಹೆಣ್ಣು ಮಗುವೊಂದು ಸಿಕ್ಕಿರುವ ಸುದ್ದಿ ಓದಿದ ಮಿಥುನ್, ಆ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದರು. ಇದಕ್ಕೆ ಪತ್ನಿ ಯೋಗಿತಾ ಸಹ ಮನಸಾರೆ ಒಪ್ಪಿದರು. ಮುದ್ದಾದ ಹೆಣ್ಣು ಮಗುವನ್ನು ದತ್ತು ಪಡೆದ ನಟ, ಹೆತ್ತ ಮಗುವಿನಂತೆಯೇ ಸಾಕಿದರು. ಹಾಗಿದ್ದರೆ ಮಿಥುನ್ ಚಕ್ರವರ್ತಿ ದತ್ತು ಪಡೆದ ಆ ಹೆಣ್ಣು ಮಗು ಈಗ ಏನು ಮಾಡುತ್ತಿದೆ? ಅವರು ಯಾರು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಯಾರ ಹಣೆಬರಹದಲ್ಲಿ ಏನು ಬರೆದಿರುತ್ತೋ ಯಾರು ಹೇಳು ಸಾಧ್ಯವಿಲ್ಲ. ದೇವರ ಆಶೀರ್ವಾದ ಒಂದಿದ್ದರೆ ಸಾಕು ಇಂದು ಭಿಕ್ಷುಕನಾಗಿರುವನು ಒಂದು ದಿನ ಶ್ರೀಮಂತನಾಗಬಲ್ಲ. ಡಿಸ್ಕೊ ಡ್ಯಾನ್ಸ್ ಮೂಲಕ ಭಾರತವಲ್ಲದೆ ಹೊರ ದೇಶದಲ್ಲಿಯೂ ಕೂಡ ಅಭಿಮಾನಿ ಬಳಗವನ್ನ ಗಳಿಸಿದ ನಟ ಮಿಥುನ್ ಚಕ್ರವರ್ತಿ. ನಟನಾಗಿ ಮಾತ್ರವಲ್ಲದೆ, ಸಿಂಗರ್, ಬ್ಯುಸಿನೆಸ್ ಮೆನ್ ಹಾಗು ರಾಜಕೀಯ ನಾಯಕನಾಗಿಯೂ ಒಳ್ಳೆಯ ಹೆಸರು ಮಾಡಿದವರು. ಇನ್ನು ನಟ ಮಿಥುನ್ ಚಕ್ರವರ್ತಿಗೆ ದಿಶಾನಿ ಚಕ್ರವರ್ತಿ ಎಂಬ ಮುದ್ದಾದ ಮಗಳಿದ್ದಾಳೆ. ಇನ್ನು ಈಗಾಗಲೇ ಬಾಲಿವುಡ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿರುವ ದಿಶಾನಿ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ದಿಶಾನಿ ಚಕ್ರವರ್ತಿಯ ಹಿಂದೆ ಕರುಳು ಹಿಂಡುವ ವಿಷಯವೊಂದಿದೆ. ಅದೇನೇದರೆ ದಿಶಾನಿ ನಟ ಮಿಥುನ್ ಚಕ್ರವರ್ತಿಯ ಹೆತ್ತ ಮಗಳಲ್ಲ. ವಿಪರ್ಯಾಸ ಎಂದರೆ ಕಸದ ತೊಟ್ಟಿಯಲ್ಲಿ ಸಿಕ್ಕಿದ ಹುಡುಗಿ ಈ ದಿಶಾನಿ. ಇನ್ನು ಮೂವರು ಗಂಡು ಮಕ್ಕಳ ತಂದೆಯಾಗಿರುವ ಮಿಥುನ್ ಚಕ್ರವರ್ತಿಗೆ ಹೆಣ್ಣು ಮಗುವಿಲ್ಲ ಎಂಬ ಕೊರಗು ಅವರನ್ನ ಕಾಡುತಿತ್ತು. ಆದರೆ ಹೀಗೊಂದು ದಿನ ರಸ್ತೆ ಪಕ್ಕದಲ್ಲಿದ್ದ ಕಸದ ತೊಟ್ಟಿಯೊಂದರಿಂದ ಮಗುವೊಂದು ಅಳುತ್ತಿರುವುದು ಕೇಳಿಸಿತು. ಅಲ್ಲೇ ಅಕ್ಕ ಪಕ್ಕದಲ್ಲಿದ್ದ ಕೆಲವರು ಆ ಕಸದ ತೊಟ್ಟಿಯ ಬಳಿ ನೋಡಲಾಗಿ ಅದರಲ್ಲಿ ಮುದ್ದಾದ ಹೆಣ್ಣು ಕಂದಮ್ಮ ಇರುವುದು ಕಂಡುಬಂತು. ಆಗ ಅಲ್ಲಿದ್ದವರು NGO ಒಂದಕ್ಕೆ ಕರೆ ಮಾಡಿ ಮಗುವನ್ನ ತಲುಪಿಸುತ್ತಾರೆ.

ಇನ್ನು ಜಾಗಿಂಗ್ ಗೆಂದು ಹೋಗಿದ್ದ ಮಿಥುನ್ ಚಕ್ರವರ್ತಿಯವರಿಗೆ ಈ ಘಟನೆ ಬಗ್ಗೆ ತಿಳಿದು ಆ NGOಗೆ ಹೋಗುತ್ತಾರೆ. ಬಳಿಕ ಆ ಮಗುವನ್ನ ದತ್ತು ಪಡೆದು ಮನೆಗೆ ಕರೆತಂದು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಮುದ್ದಾಗಿ ನೋಡಿಕೊಳ್ಳುತ್ತಾರೆ. ಅದೇ ಹುಡುಗಿಯೇ ಈಗ ನಟಿಯಾಗಿರುವ ದಿಶಾನಿ ಚಕ್ರವರ್ತಿ. ಇನ್ನು ದಿಶಾನಿ ಎಂದರೆ ನಟ ಮಿಥುನ್ ಅವರಿಗೆ ತುಂಬಾ ಪ್ರೀತಿ. ಈಗಾಗಲೇ ದಿಶಾನಿಯನ್ನ ಬಾಲಿವುಡ್ ಗೆ ನಟಿಯನ್ನಾಗಿ ಪರಿಚಯಿಸಿದ್ದಾರೆ. ಒಟ್ಟಿನಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಬಿಸಾಡುವಂತಹ, ಅಸಡ್ಡೆಯಿಂದ ನೋಡುವಂತಹ ನೀಚರಿರುವ ಇಂತಹ ಕಾಲದಲ್ಲಿ ಎಲ್ಲೋ ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಹೆಣ್ಣು ಮಗುವನ್ನ ಮನೆಗೆ ತಂದು ಆಕೆಗೆ ಬಂಗಾರದ ಬದುಕನ್ನ ಕಲ್ಪಿಸಿಕೊಟ್ಟ ನಟ ಮಿಥುನ್ ಚಕ್ರವರ್ತಿ ದೇವತಾ ಮನುಷ್ಯ ಎಂದರೆ ತಪ್ಪಾಗಲಾರದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!