ನೋವುಗಳು ದೇಹದಲ್ಲಿ ಕಾಣುವುದು ಸಾಮಾನ್ಯವಾಗಿದೆ. ಅದರಲ್ಲೂ ಮಂಡಿನೋವು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಇದರಿಂದ ಬಹಳ ತೊಂದರೆ ಉಂಟಾಗುತ್ತದೆ. ಹೆಚ್ಚಾಗಿ ಯಾವುದೇ ಕೆಲಸಗಳನ್ನು ಮಾಡಲು ಆಗುವುದಿಲ್ಲ ಮತ್ತು ಭಾರವಾದ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಹಾಗೆಯೇ ಬಗ್ಗಿ ಕೆಲಸಗಳನ್ನು ಮಾಡುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ನಾವು ಇಲ್ಲಿ ಮಂಡಿನೋವಿಗೆ ಸರಳವಾಗಿ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹಾಗೆಯೇ ಇದು ವಯಸ್ಸಾದವರಲ್ಲಿ ಮಾತ್ರ ಕಂಡುಬರುವುದಿಲ್ಲ. ಯಾರಿಗೆ ಯಾವಾಗ ಬೇಕಾದರೂ ಇದು ಉಂಟಾಗಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೆ ಇದು ಉಂಟಾಗುತ್ತದೆ. ಕೆಲವೊಮ್ಮೆ ಸಣ್ಣ ನೋವುಗಳು ಬೇಗ ಕಡಿಮೆಯಾಗುತ್ತದೆ. ಆದರೆ ಕೆಲವೊಮ್ಮೆ ಈ ಸಣ್ಣ ನೋವುಗಳೇ ಮುಂದೆ ದೊಡ್ಡ ನೋವುಗಳು ಉಂಟಾಗಿ ಬಹಳ ನೋವನ್ನು ಉಂಟುಮಾಡುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಸಹ ಮಂಡಿ ನೋವು ಉಂಟಾಗುತ್ತದೆ. ಹಾಗೆಯೇ ಕಬ್ಬಿಣದ ಕೊರತೆಯಿಂದ ಸಹ ಉಂಟಾಗಬಹುದು.
ಹಾಗೆಯೇ ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಕ್ಯಾಲ್ಸಿಯಂ ಗಳು ಕಡಿಮೆ ಇರುವುದರಿಂದ ಸಹ ಉಂಟಾಗುತ್ತದೆ. ಸಾಮಾನ್ಯವಾಗಿ ಮೂಳೆಗಳ ಸವೆತದಿಂದ ಇದು ಕಾಣಿಸಿಕೊಳ್ಳುತ್ತದೆ. ಇದಕ್ಕೆ ವೈದ್ಯರ ಬಳಿ ಹೋದರೆ ಸ್ವಲ್ಪ ದಿನಗಳವರೆಗೆ ಕಡಿಮೆ ಆಗುತ್ತದೆ. ಆದರೆ ನಂತರದಲ್ಲಿ ಮತ್ತೆ ಉಂಟಾಗುತ್ತದೆ. ಏಕೆಂದರೆ ಇಂಗ್ಲಿಷ್ ಮಾತ್ರೆಗಳು ಮಂಡಿನೋವಿನ ಮೇಲೆ ಪರಿಣಾಮ ಬೀರುವುದು ಬಹಳ ಕಷ್ಟ. ಒಂದರಿಂದ ಎರಡು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಇದನ್ನು ಜಜ್ಜಿ ಒಂದು ಚಮಚ ಜೇನುತುಪ್ಪದಲ್ಲಿ ಬೆರೆಸಿ ರಾತ್ರಿ ಇದನ್ನು ಸೇವನೆ ಮಾಡಿದರೆ ಮಂಡಿ ನೋವು ಕಡಿಮೆಯಾಗುತ್ತದೆ.
ಬೇಲದ ಎಲೆಗಳನ್ನು ತೆಗೆದುಕೊಂಡು ಅದನ್ನು ಜಜ್ಜಿ ಪೇಸ್ಟ್ ಮಾಡಿ ಮಂಡಿಯ ಮೇಲೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಹಾಗೆಯೇ ಹಿಪ್ಪಲಿಯನ್ನು ತೆಗೆದುಕೊಂಡು ಅದು ಕರಕಲು ಆಗುವವರೆಗೆ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ ನಂತರ ಆ ಎಣ್ಣೆಯನ್ನು ಹಚ್ಚುವುದರಿಂದ ಸಹ ಮಂಡಿ ನೋವು ಕಡಿಮೆಯಾಗುತ್ತದೆ. ದೇಹ ಮತ್ತು ದೇಹದ ಯಾವುದೇ ಸಂಧಿಗಳಲ್ಲಿ ನೋವು ಮತ್ತು ಊತ ಇದ್ದರೆ ಒಂದು ಚಮಚ ಚಕ್ಕೆ ಪುಡಿಗೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಸೇವನೆ ಮಾಡಬೇಕು. ಹಾಗೆಯೇ ಕರ್ಪೂರದ ಎಣ್ಣೆಯನ್ನು ಸಹ ಮಂಡಿಗೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.