ದೇವರಾಜ್ ಅವರು ಕನ್ನಡ ಚಿತ್ರರಂಗದ ಪ್ರಖ್ಯಾತ ನಟರಾಗಿದ್ದಾರೆ. ಅವರಿಗೆ ಪ್ರಜ್ವಲ್ ದೇವರಾಜ್ ಎಂಬ ಪುತ್ರನಿದ್ದಾನೆ. ಪ್ರಜ್ವಲ್ ದೇವರಾಜ್ ಅವರು ಸಹ ಸಿನೆಮಾದಲ್ಲಿ ನಟನೆ ಮಾಡಿದ್ದಾರೆ. ಅವರಿಗೆ ಮದುವೆ ಆಗಿದೆ. ರಾಗಿಣಿ ಅವರನ್ನು ಪ್ರಜ್ವಲ್ ದೇವರಾಜ್ ಅವರು ವಿವಾಹವಾಗಿದ್ದಾರೆ. ಆದ್ದರಿಂದ ನಾವು ಇಲ್ಲಿ ರಾಗಿಣಿ ಪ್ರಜ್ವಲ್ ದೇವರಾಜ್ ಅವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಥಕ್ ನೃತ್ಯಗಾರ್ತಿ ಕಮ್ ಮಾಡೆಲ್ ಆಗಿರುವ ರಾಗಿಣಿ ಅವರದ್ದು ಪ್ರಜ್ವಲ್ ದೇವರಾಜ್ ಜೊತೆ ಅರೆಂಜ್ ಜೊತೆ ಲವ್  ಮ್ಯಾರೇಜ್ ಆಗಿದೆ. ಪ್ರಜ್ವಲ್ ದೇವರಾಜ್ ಅವರು ಒಂಬತ್ತನೇ ಕ್ಲಾಸಿನಲ್ಲಿ ರಾಗಿಣಿ ಅವರನ್ನು ನೋಡಿದರು. ಪ್ರಜ್ವಲ್ ದೇವರಾಜ್ ಅವರು ಮೊದಲ ಇವರನ್ನು ನೋಡಿದಾಗ ರಾಗಿಣಿ ಅವರು ಆರನೇ ತರಗತಿ ಇದ್ದರು. ಮೊದಲಿನಿಂದಲೇ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಅವರು ಒಳ್ಳೆಯ ಸ್ನೇಹಿತರಾಗಿದ್ದರು.

ಒಳ್ಳೆ ಫ್ರೆಂಡ್ಸ್ ಗ್ರೂಪ್ ನಲ್ಲಿರುವ ಇವರ ಅತಿಯಾದ ಸ್ನೇಹ ಪ್ರೀತಿಗೆ ತಿರುಗಿ ಹಸೆಮಣೆಗೆ ಬಂದಿದೆ. ಕಾಲೇಜು ಮುಗಿದ ಬಳಿಕ ಪ್ರಜ್ವಲ್ ದೇವರಾಜ್ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಹಾಗೆ ರಾಗಿಣಿ ಅವರು ಮಾಡಲಿಂಗ್ ಜಗತ್ತಿಗೆ ಕಾಲಿಟ್ಟರು. ಇಮ್ರಾನ್ ಸರ್ದಾರಿಯಾ ಡಾನ್ಸ್ ಕ್ಲಾಸಿನಲ್ಲಿ ಫ್ರೀಸ್ಟೈಲ್ ನೃತ್ಯ ಕಲಿಯುತ್ತಿರುವಾಗ ರಾಗಿಣಿ ಸರಿಯಾಗಿ ಪರಿಚಯವಾಯಿತು. ವೃತ್ತಿಬದುಕಲ್ಲಿ ಯಶಸ್ಸು  ಹೊಂದಿದ ಬಳಿಕ ಇಬ್ಬರ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆಯಿತು.

ಆದರೆ ಯಾರೂ ಪ್ರಪೋಸ್ ಮಾಡಿಕೊಂಡಿರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನುಬಂಧ ಹೊಂದಿದ್ದರು. ಆದ್ದರಿಂದ ಮದುವೆ ಸಂಬಂಧಕ್ಕೆ ಒಪ್ಪಿದರು. ಸ್ಕೂಲ್ ಡೇಸ್ ಇಂದಲೇ ಇಬ್ಬರೂ ಸ್ನೇಹಿತರಾಗಿದ್ದ ಕಾರಣ ಮನೆಯಲ್ಲಿ ಸಮ್ಮತಿ ಕೊಟ್ಟರು. ಆದ್ದರಿಂದ ಇಬ್ಬರಿಗೂ ಯಾವುದೇ ರೀತಿಯ ಅಡೆತಡೆ ಉಂಟಾಗಲಿಲ್ಲ. ದೇವರಾಜ್ ಅವರು ಖುಷಿಯಿಂದಲೇ ಸಮ್ಮತಿ ನೀಡಿದರು. ಪ್ರಜ್ವಲ್ ದೇವರಾಜ್ ಅವರ ಮದುವೆ ಬಹಳ ಅದ್ದೂರಿಯಾಗಿ ನಡೆಯಿತು. ರಾಗಿಣಿ ಅವರು ತುಂಬಾ ಒಳ್ಳೆಯ ಡ್ಯಾನ್ಸರ್ ಆಗಿದ್ದಾರೆ. ಡ್ಯಾನ್ಸ್ ಇದು ಎಲ್ಲರಲ್ಲೂ ಇರುವ ಕಲೆಯಾಗಿರುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!