ನಾವು ನಮಗಾಗಿ ವಸ್ತುವನ್ನು ಕೊಂಡು ಕೊಳ್ಳುವುದಕ್ಕಿಂತ ನಮಗಾಗಿ ಮಿಡಿಯುವ ನಮ್ಮ ತಂದೆ ತಾಯಿಗೆ ಅವರಿಗೆ ಇಷ್ಟವಾದ ವಸ್ತುಗಳನ್ನು ತಂದು ಕೊಡುವುದರಿಂದ ಅವರಿಗೆ ಬಹಳ ಖುಷಿಯಾಗುತ್ತದೆ. ತಂದೆ ತಾಯಿಯನ್ನು ಖುಷಿ ಪಡಿಸುವುದು ಮಕ್ಕಳ ಕರ್ತವ್ಯವಾಗಿರುತ್ತದೆ. ಅದೇ ರೀತಿ ಸಿನಿಮಾ ನಟರೊಬ್ಬರು ತಮ್ಮ ತಾಯಿಗೆ ಹೊಸ ಮನೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ ಅವರು ಯಾರು, ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ದೊಡ್ಡವರಾದ ನಂತರ ಮನೆಯಿಂದ ಹೊರಗೆ ಬರುವ ನಾವು ಹೊಸದಾಗಿ ಪರಿಚಯವಾಗಿರುವವರಿಗೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಗಿಫ್ಟ್ ಕೊಡುತ್ತೇವೆ. ನಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ-ತಾಯಿಯರಿಗೆ ಒಮ್ಮೆಯೂ ಅವರಿಗೆ ಇಷ್ಟವಾದ ವಸ್ತುವನ್ನು ಕೊಂಡುಕೊಳ್ಳುವ ಆಲೋಚನೆ ಬರುವುದೇ ಇಲ್ಲ. ಪ್ರೇಯಸಿ ಮನಸ್ಸಿಗೆ ಬಂದಂತೆ ಸುತ್ತಾಡಿಸುವುದು, ಶಾಪಿಂಗ್ ಮಾಡಿಸುವ ಅದೆಷ್ಟೋ ಜನರು ತಾಯಿಗೆ ಒಂದು ಸೀರೆಯನ್ನು ಸಹ ಕೊಡಿಸುವುದಿಲ್ಲ. ನಾವು ಏನಾದರೂ ಉಡುಗೊರೆಯಾಗಿ ನಮ್ಮ ಪೋಷಕರಿಗೆ ಕೊಟ್ಟರೆ ಅವರಿಗೆ ಬಹಳ ಖುಷಿಯಾಗುತ್ತದೆ, ಎಲ್ಲಿಲ್ಲದ ಸಂತೋಷ ಪಡುತ್ತಾರೆ. ಸಿನಿಮಾದಲ್ಲಿ ನಟಿಸಿ ಜನರ ಮನಗೆದ್ದ ನಟ ಪ್ರಭುದೇವ್ ಅವರು ತಾವು ಎಷ್ಟೇ ಬ್ಯೂಸಿ ಇದ್ದರೂ ತಮ್ಮ ತಾಯಿಗೆ ಉಡುಗೊರೆ ನೀಡಿದ್ದಾರೆ.
ಪ್ರಭುದೇವ್ ಅವರ ತಂದೆ ಸುಂದರ ಮಾಸ್ಟರ್ ತಾಯಿ ಮಹದೇವಮ್ಮ ಅವರು ಮೈಸೂರಿನಲ್ಲಿ ನೆಲೆಸಿದ್ದಾರೆ. ಪ್ರಭುದೇವ್ ಅವರು ಸಿನಿಮಾ ಶೂಟಿಂಗ್ ನಲ್ಲಿ ಎಷ್ಟೇ ಬ್ಯೂಸಿ ಇದ್ದರೂ ಮೈಸೂರಿಗೆ ಬರುತ್ತಾರೆ, ಅವರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಾರೆ. ಅವರ ತಾಯಿಗೆ ಸುಂದರವಾದ ಮನೆಯನ್ನು ಕಟ್ಟಿಸಿಕೊಳ್ಳಬೇಕು ಎಂಬ ಆಸೆ ಇತ್ತು ಅದನ್ನು ತಿಳಿದ ಪ್ರಭುದೇವ್ ಅವರು ತಾಯಿಯ ಆಸೆಯಂತೆ ಅವರ ಕನಸಿನ ಮನೆಯನ್ನು ಬಹಳಷ್ಟು ಖರ್ಚು ಮಾಡಿ ಮೈಸೂರಿನಲ್ಲಿ ಕಟ್ಟಿಸಿದ್ದಾರೆ. ಮನೆ ವಿಶಾಲವಾಗಿದ್ದು ಬೆಡ್ ರೂಮ್, ಕಿಚನ್ ವಿಶಾಲವಾದ ಹಾಲ್ ತಾವು ಬಂದಾಗ ಉಳಿದುಕೊಳ್ಳಲು ಒಂದು ರೂಮು ಇದೆ. ಅವರ ತಾಯಿಯ ಅಭಿರುಚಿಯಂತೆ ಅವರಿಗೆ ಇಷ್ಟವಾಗುವಂತೆ ಅವರ ಕನಸಿನ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ.
ಮಹದೇವಮ್ಮ ಅವರಿಗೆ ತಮ್ಮ ಮಗ ಕಟ್ಟಿಸಿಕೊಟ್ಟ ಸುಂದರವಾದ ಮನೆ ಪ್ರವೇಶ ಮಾಡುವಾಗ ತಾಯಿಯ ಸಂತೋಷಕ್ಕೆ ಪರಿವೆ ಇರಲಿಲ್ಲ. ಅವರಿಗೆ ದೊಡ್ಡಮನೆ, ಸುಂದರವಾದ ಮನೆ ಎನ್ನುವ ಮನೋಭಾವನೆಗಿಂತ ತಮ್ಮ ಮಗ ಪ್ರೀತಿಯಿಂದ ಕಟ್ಟಿಕೊಟ್ಟಿದ್ದಾನೆ ಎನ್ನುವುದೇ ಬಹಳ ಸಂತೋಷ. ಮಹದೇವಮ್ಮ ಅವರು ಬೇರೆ ಬೇರೆ ರಾಜ್ಯದಲ್ಲಿ ಇದ್ದರೂ ಬೇರೆ ಬೇರೆ ಭಾಷೆಗಳು ಬರುತ್ತಿದ್ದರು ಸಮಾರಂಭದಲ್ಲಿ ಕನ್ನಡವನ್ನು ಮಾತನಾಡುತ್ತಾರೆ ಎನ್ನುವುದು ವಿಶೇಷ. ಮೈಸೂರಿನಲ್ಲಿ ತಾಯಿಗಾಗಿ ಮನೆ ಕಟ್ಟಿಸಿದ ಪ್ರಭುದೇವ್ ಅವರ ಈ ಕಾರ್ಯವನ್ನು ಮೆಚ್ಚಲೇ ಬೇಕು. ನಾವು ಸಹ ನಮ್ಮ ಪೋಷಕರಿಗೆ ಅವರಿಗೆ ಇಷ್ಟವಾದ ವಸ್ತು ಅಥವಾ ಅವರ ಆಸೆಯನ್ನು ತಿಳಿದು ಪೂರೈಸಲು ಇಂದೇ ಯೋಚಿಸೋಣ.