ರಮೇಶ್ ಅರವಿಂದ್ ಒಳ್ಳೆಯ ನಟ ಮತ್ತು ಕಲಾವಿದರಾಗಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಚೆನ್ನಾಗಿ ಅಭಿನಯ ಮಾಡಿ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಸಹ ಸಿನೆಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಇವರು ನಿರೂಪಣೆ ಸಹ ಮಾಡುತ್ತಾರೆ. ಹಾಗೆಯೇ ಇವರ ನಿರೂಪಣೆ ಬಹಳ ಚೆನ್ನಾಗಿ ಇರುತ್ತದೆ. ಇವರು ಯುವ ಜನತೆಗೆ ಒಳ್ಳೊಳ್ಳೆಯ ಸಂದೇಶಗಳನ್ನು ನೀಡುತ್ತಾರೆ. ಆದರೆ ನಾವು ಇಲ್ಲಿ ರಮೇಶ್ ಅರವಿಂದ್ ಅವರ ಮಗಳ ಮದುವೆಯ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ರಮೇಶ್ ಅರವಿಂದ್ ಅವರು ಸೆಪ್ಟೆಂಬರ್ 11 1964ರಲ್ಲಿ ತಮಿಳುನಾಡಿನ ಕುಂಭಕೋಣಂದಲ್ಲಿ ಜನಿಸಿದರು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 1989ರಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ಹಾಗೂ ನಿರೂಪಕ ಆದರು. ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂ, ಹಿಂದಿ, ತೆಲುಗುಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಕನ್ನಡ ಸಿನೆಮಾಗಳು ಎಂದರೆ ಸತಿ ಲೀಲಾವತಿ, ಡ್ಯುಯೆಟ್, ಅಮೆರಿಕ ಅಮೆರಿಕ, ಆಪ್ತಮಿತ್ರ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ಅಮೃತವಾರ್ಷಿಣಿ, ನಮ್ಮೂರ ಮಂದಾರ ಹೂವೆ ಇನ್ನೂ ಇವೆ.
ಯಾವುದೇ ವ್ಯಕ್ತಿಗಳು ಸಿನಿಮಾಗಳಲ್ಲಿ ಹೆಂಡತಿಯರ ಜೊತೆ ನಟನೆ ಮಾಡಿದರೂ ಮನೆಯಲ್ಲಿ ನಿಜವಾದ ಸಂಗಾತಿ ಇರಲೇಬೇಕು. ಹಾಗೆಯೇ ಇವರ ಪತ್ನಿಯ ಹೆಸರು ಅರ್ಚನಾ. ಇವರಿಗೆ ಎರಡು ಮಕ್ಕಳು ಇದ್ದಾರೆ. ಅವರ ಮಗಳ ಹೆಸರು ನಿಹಾರಿಕಾ. ಡಿಸೆಂಬರ್ 28ರಂದು 2020ರಂದು ವಿವಾಹ ಆಗಿದೆ. ನಿಹಾರಿಕಾ ಅವರ ಗಂಡನ ಹೆಸರು ಅಕ್ಷಯ್. ಇವರು ಮೊದಲು ಸ್ನೇಹಿತರಾಗಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ರಮೇಶ್ ಅರವಿಂದ್ ಅವರ ಮಗಳ ವಿವಾಹವಾಯಿತು. ಇಲ್ಲಿಗೆ ಕುಟುಂಬದವರು ಮತ್ತು ಚಿತ್ರರಂಗದವರು ಸಹ ಬಂದಿದ್ದರು.
ಯಶ್ ಜೋಡಿ, ಸುದೀಪ್ ಜೋಡಿ ಮತ್ತು ಖ್ಯಾತ ಸಂಗೀತ ಮತ್ತು ನಿರ್ದೇಶಕರಾದ ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಸಹ ಬಂದಿದ್ದರು. ಹಾಗೆಯೇ ಸುಮಲತಾ ಅವರು ಕೂಡ ಬಂದಿದ್ದರು. ಇದರಲ್ಲಿ ವಿಶೇಷವೆಂದರೆ ಸುದೀಪ್, ಸುಮಲತಾ ಮತ್ತು ಯಶ್ ಅವರು ಒಂದೇ ಸಮಯಕ್ಕೆ ಆಗಮಿಸಿದ್ದಾರೆ. ರಮೇಶ್ ಅರವಿಂದ್ ಅವರು ಭರ್ಜರಿಯಾಗಿ ತನ್ನ ಮಗಳ ಮದುವೆಯನ್ನು ನಡೆಸಿದ್ದಾರೆ. ಪ್ರತಿಯೊಂದು ತಂದೆಗೂ ಮಗಳು ಎಂದರೆ ಬಹಳ ಪ್ರೀತಿ ಇರುತ್ತದೆ. ಇವರ ಕುಟುಂಬ ನೂರುಕಾಲ ಸುಖವಾಗಿ ಇರಲಿ ಎಂದು ನಾವೆಲ್ಲರೂ ಹಾರೈಸೋಣ.