ಉದ್ಯೋಗ ಖಾತರಿ ಯೋಜನೆ ಇದು ಸರ್ಕಾರವು ತಂದಿರುವ ಹಲವಾರು ಯೋಜನೆಗಳಲ್ಲಿ ಒಂದು. ಪ್ರತಿಯೊಂದು ಯೋಜನೆಯು ಬೇರೆ ಬೇರೆ ಉದ್ದೇಶಗಳನ್ನು ಹೊಂದಿರುತ್ತದೆ. ಆದರೆ ಎಲ್ಲಾ ಯೋಜನೆಗಳು ಸಫಲತೆಯನ್ನು ಕಾಣುವುದಿಲ್ಲ. ಕೆಲವು ಯೋಜನೆಗಳು ಹೆಚ್ಚು ವಿಫಲತೆಯನ್ನು ಕಾಣುತ್ತವೆ. ಎಲ್ಲಾ ಯೋಜನೆಗಳು ಜನರನ್ನು ಮುಟ್ಟುವುದಿಲ್ಲ. ಏಕೆಂದರೆ ಮಧ್ಯದಲ್ಲಿ ಹಣವನ್ನು ಕಬಳಿಸುವವರೇ ಜಾಸ್ತಿ. ಆದರೆ ನಾವು ಇಲ್ಲಿ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಹಲವಾರು ಉದ್ದೇಶಗಳು ಇವೆ. ಮೊದಲನೆಯದಾಗಿ ಗಿಡಗಳನ್ನು ನೆಡುವುದು. ಇದರ ಉದ್ದೇಶ ಅರಣ್ಯಗಳನ್ನು ಹೆಚ್ಚಿಸಬೇಕು ಎನ್ನುವುದು. ಎರಡನೆಯದಾಗಿ ಆಟದ ಮೈದಾನ ಅಭಿವೃದ್ಧಿ ಮಾಡುವುದು ಆಗಿದೆ. ಇದರಿಂದ ಜನರಲ್ಲಿ ಕ್ರೀಡಾ ಮನೋಭಾವನೆ ಹೆಚ್ಚಾಗುತ್ತದೆ. ಮೂರನೆಯದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂತೆಕಟ್ಟೆ ನಿರ್ಮಾಣ ಮಾಡುವುದು. ಇದರಿಂದ ರೈತರಿಗೆ ಬಹಳ ಸಹಾಯವಾಗುತ್ತದೆ. ರೈತರು ಕಷ್ಟಪಟ್ಟು ಬೆಳೆಯುವುದರಿಂದ ಅವರಿಗೆ ಲಾಭ ದೊರೆಯಬೇಕು.

ಬೆಳೆಗಳನ್ನು ಬೆಳೆದ ರೈತರಿಗೆ ಒಂದು ಸರಿಯಾದ ಜಾಗದ ಅವಶ್ಯಕತೆ ಇರುತ್ತದೆ. ನಾಲ್ಕನೆಯದಾಗಿ ಸ್ಮಶಾನ ಅಭಿವೃದ್ಧಿ ಮಾಡುವುದು. ಇದರಿಂದ ಜನರು ಹೆಣಗಳನ್ನು ಒಂದೇ ಕಡೆ ಸುಡಲು ಸಹಾಯವಾಗುತ್ತದೆ. ಐದನೆಯದಾಗಿ ನಮ್ಮ ಹೊಲ ನಮ್ಮ ದಾರಿ. ಇದರಿಂದ ರೈತರಿಗೆ ಹೊಲಗಳಿಗೆ ಹೋಗಲು ದಾರಿಯನ್ನು ನೀಡಲಾಗುತ್ತದೆ. ಆರನೆಯದಾಗಿ ಗ್ರಾಮೀಣದಲ್ಲಿ ಸಣ್ಣದಾದ ಗೋದಾಮುಗಳನ್ನು ನಿರ್ಮಾಣ ಮಾಡುವುದು ಆಗಿದೆ. ಏಳನೆಯದಾಗಿ ಜಾನುವಾರುಗಳಿಗೆ ನೀರು ಕುಡಿಯಲು ತೊಟ್ಟಿಗಳ ನಿರ್ಮಾಣ ಮಾಡುವುದು ಆಗಿದೆ.

ಎಂಟನೆಯದಾಗಿ ಕೊಳವೆ ಬಾವಿಗಳ ಮರುಪೂರ್ಣ ಘಟಕಗಳ ನಿರ್ಮಾಣ ಮಾಡುವುದು ಆಗಿದೆ. ಒಂಭತ್ತನೆಯದಾಗಿ ಗ್ರಾಮೀಣ ಶಾಲೆಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಆಗಿದೆ. ಹತ್ತನೆಯದಾಗಿ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿ ಮಾಡುವುದು ಆಗಿದೆ.

ಹನ್ನೊಂದನೆಯದಾಗಿ ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವುದು ಆಗಿದೆ. ಹನ್ನೆರಡನೆಯದಾಗಿ ಸ್ವಸಹಾಯ ಸಂಘಗಳಿಗೆ ಸಂಜೀವಿನಿ ಶೆಡ್ ನಿರ್ಮಾಣ ಮಾಡುವುದು ಆಗಿದೆ. ಇನ್ನೂ ಹಲವಾರು ಉದ್ದೇಶಗಳನ್ನು ಇದು ಹೊಂದಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!