ನೆಗಡಿ ಎಲ್ಲರಿಗೂ ಆಗುವುದು ಸಹಜವಾಗಿದೆ. ಹಾಗೆಯೇ ಚಿಕ್ಕಮಕ್ಕಳಿಗೂ ಸಹ ಆಗುತ್ತದೆ. ಆದರೆ ಕಫ ಆದರೆ ಯಾರಿಗೆ ಆದರೂ ಕಡಿಮೆ ಆಗುವುದಿಲ್ಲ. ಕೆಲವರಿಗೆ ಬೇಗ ಕಡಿಮೆಯಾಗುತ್ತದೆ. ಇದರಿಂದ ಬಹಳ ಕಿರಿ ಕಿರಿ ಅನಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಇಂಗ್ಲೀಷ್ ಮಾತ್ರೆಗಳನ್ನು ತೆಗೆದುಕೊಂಡರೆ ಕಡಿಮೆ ಆಗುವುದಿಲ್ಲ. ಆದ್ದರಿಂದ ನಾವು ಇಲ್ಲಿ ಎದೆಯಲ್ಲಿ ಕಟ್ಟಿರುವ ಕಫ ಕಡಿಮೆ ಮಾಡುವ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಮನೆಮದ್ದಿಗೆ ಯಾವುದೇ ರೀತಿಯ ಹಣದ ಅವಶ್ಯಕತೆ ಇಲ್ಲ. ಮೊದಲು ಅರ್ಧ ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಅದನ್ನು ಕುಟ್ಟಾಣಿಯಲ್ಲಿ ಹಾಕಿಕೊಂಡು ಚೆನ್ನಾಗಿ ಜಜ್ಜಬೇಕು. ಈರುಳ್ಳಿಯಲ್ಲಿ ಚೆನ್ನಾಗಿ ಜಜ್ಜಿದ ನಂತರ ಒಂದು ಬಟ್ಟೆಗೆ ಹಾಕಿ ಅದರ ರಸವನ್ನು ಹಿಂಡುಕೊಳ್ಳಬೇಕು. ಹಾಗೆಯೇ ನಂತರದಲ್ಲಿ ಕುಟ್ಟಾಣಿಯನ್ನು ತೆಗೆದುಕೊಂಡು ಅದನ್ನು ಸಹ ಚೆನ್ನಾಗಿ ಜಜ್ಜಬೇಕು. ಇದನ್ನು ಸಹ ಒಂದು ಬಟ್ಟೆಯಲ್ಲಿ ಹಾಕಿ ಹಿಂಡಿಕೊಂಡು ಅದರ ರಸವನ್ನು ಬೇರೆ ಪಾತ್ರೆಗೆ ಹಾಕಬೇಕು.
ಹಾಗೆಯೇ ತುಳಸಿಯನ್ನು ಸಹ ತೆಗೆದುಕೊಂಡು ಚೆನ್ನಾಗಿ ಜಜ್ಜಿಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು. ಅದರ ರಸವನ್ನು ಈರುಳ್ಳಿ ರಸಕ್ಕೆ ಹಾಕಬೇಕು. ಅದಕ್ಕೆ ಶುಂಠಿ ರಸವನ್ನು ಸೇರಿಸಬೇಕು. ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಬೇಕು. ಅದಕ್ಕೆ ಕಾಲು ಚಮಚ ಅರಿಶಿನ ಪುಡಿಯನ್ನು ಹಾಕಬೇಕು. ಹಾಗೆ ಕೊನೆಯದಾಗಿ ಎರಡು ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಹಾಕಬೇಕು. ಇದನ್ನು ಸಣ್ಣ ಮಕ್ಕಳಿಗೆ ಅರ್ಧ ಚಮಚದಷ್ಟು ಕೊಡಬೇಕು.
ಹಾಗೆಯೇ ದೊಡ್ಡವರಿಗೆ ಆದರೆ ಎರಡರಿಂದ ಮೂರು ಚಮಚ ಕೊಡಬಹುದು. ಇದರಿಂದ ಎದೆಯಲ್ಲಿ ಕಟ್ಟಿರುವ ಕಫ ದೇಹದಿಂದ ಹೊರಗೆ ಬರುತ್ತದೆ. ಹಾಗೆಯೇ ಶೀತ ಇದ್ದರೂ ಕೂಡ ಕಡಿಮೆಯಾಗುತ್ತದೆ. ಕಫ ಕಟ್ಟುವುದರಿಂದ ತಲೆಯಲ್ಲಿ ಸಹ ನೋವು ಉಂಟಾಗುತ್ತದೆ. ಆದ್ದರಿಂದ ಈ ಮನೆಮದ್ದನ್ನು ಮಾಡುವುದರಿಂದ ಇವೆಲ್ಲವುಗಳಿಂದ ಮುಕ್ತಿ ಹೊಂದಬಹುದು. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದ್ದರಿಂದ ಯಾವುದೇ ರೀತಿ ರೋಗವಿದ್ದರೂ ಇಂಗ್ಲಿಷ್ ಮಾತ್ರೆ ಮನೆಯ ಮದ್ದುಗಳನ್ನು ಮಾಡಿ ಪ್ರಯೋಜನ ಪಡೆದುಕೊಳ್ಳುವುದು ಉತ್ತಮ.