ಬಾಳೆಹಣ್ಣು ಇದು ಹಣ್ಣುಗಳಲ್ಲಿ ಒಂದು ಮುಖ್ಯವಾದ ಹಣ್ಣು. ಇದನ್ನು ದಿನನಿತ್ಯ ತಿಂದರೆ ಬಹಳ ಒಳ್ಳೆಯದು. ದಿನವೂ ಒಂದು ಬಾಳೆಹಣ್ಣು ಸೇವನೆ ಮಾಡುವುದರಿಂದ ವೈದ್ಯರಿಂದ ದೂರ ಇರಬಹುದು ಎಂದು ಹೇಳಬಹುದು. ಇದರಲ್ಲಿ ಹಲವಾರು ಜಾತಿಗಳಿವೆ. ಎಲ್ಲಾ ಜಾತಿಯ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ನಾವು ಇಲ್ಲಿ ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಒಂದು ಬಾಳೆಹಣ್ಣಿನಲ್ಲಿ 22.84ಗ್ರಾಮ್ ಕಾರ್ಬೋಹೈಡ್ರೇಟ್ ಇರುತ್ತದೆ. ಬೇರೆ ಬೇರೆ ಜಾತಿಯ ಬಾಳೆಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು ಕಡಿಮೆ ಇರುತ್ತದೆ. ಹಾಗೆಯೇ ಕಾರ್ಬೋಹೈಡ್ರೇಟ್ ಪ್ರಮಾಣ ಕೂಡ ಹೆಚ್ಚು ಇರುತ್ತದೆ. ಹಾಗೆಯೇ ಇದರಲ್ಲಿ ನಾರಿನಂಶ ಕೂಡ ಇದೆ. ಇದು ನಮ್ಮ  ದೇಹದಲ್ಲಿರುವ ಒಳ್ಳೆಯ ಕ್ರಿಮಿಗಳಿಗೆ ತುಂಬಾ ಒಳ್ಳೆಯದು. ಹಾಗೆಯೇ ಇದು ಎಲ್ಲಾ ರೀತಿಯ ವಿಟಮಿನ್ ಗಳನ್ನು ಹೊಂದಿದೆ. ಹೆಚ್ಚಾಗಿ ಪೊಟ್ಯಾಶಿಯಂನ್ನು ದೇಹಕ್ಕೆ ನೀಡುತ್ತದೆ.

ಊಟವಾದ ನಂತರ ಬಾಳೆಹಣ್ಣನ್ನು ತಿನ್ನಬಾರದು. ಹಸಿವಾದಾಗಲೇ ಇದನ್ನು ತಿನ್ನಬೇಕು. ಏಕೆಂದರೆ ಊಟವಾದ ನಂತರ ಇದನ್ನು ತಿಂದರೆ ಬಾಳೆಹಣ್ಣಿನ ಯಾವ ಅಂಶಗಳು ದೇಹಕ್ಕೆ ಸೇರುವುದಿಲ್ಲ. ಆದ್ದರಿಂದ ಹಸಿವು ಇದ್ದಾಗಲೇ ಇದನ್ನು ತಿಂದರೆ ಬಾಳೆಹಣ್ಣಿನಲ್ಲಿ ಇರುವ ಅಗತ್ಯವಾದ ಪೋಷಕಾಂಶಗಳು, ಎಲ್ಲಾ ರೀತಿಯ ವಿಟಮಿನ್ ಗಳು, ಕಾರ್ಬೋಹೈಡ್ರೇಟ್ ಗಳು, ನಾರಿನಾಂಶಗಳು ಎಲ್ಲವೂ ದೇಹಕ್ಕೆ ಸಿಗುತ್ತದೆ. ಇದರಿಂದ ಬಿ.ಪಿ. ಸಹ ಹತೋಟಿಯಲ್ಲಿ ಇರುತ್ತದೆ.

ಹಾಗೆಯೇ ಬಾಳೆಹಣ್ಣು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಕರುಳಿನಲ್ಲಿ ಇದು ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿರುತ್ತದೆ. ಈಗಿನ ಆಹಾರ ಪದ್ಧತಿಯಲ್ಲಿ ಪೊಟ್ಯಾಶಿಯಂ ಪ್ರಮಾಣ ದೇಹಕ್ಕೆ ಕಡಿಮೆ ಆಗಿ ಸೋಡಿಯಂ ಪ್ರಮಾಣ ಹೆಚ್ಚಾಗಿದೆ. ಆದರೆ ದಿನನಿತ್ಯ ಬಾಳೆಹಣ್ಣು ಸೇವನೆ ಮಾಡುವುದರಿಂದ ಇವುಗಳನ್ನು ಸಮತೋಲನದಲ್ಲಿ ಇಡಬಹುದು. ಹಾಗೆಯೇ ರೈತರು ಬಹಳ ಕಷ್ಟಪಟ್ಟು ಬಾಳೆಹಣ್ಣನ್ನು ಬೆಳೆಯುತ್ತಾರೆ. ರೈತರಿಗೂ ಆದಾಯ ಆದ ಹಾಗೆ ಆಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!