ಕೆಲವರಿಗೆ ಕೆಲವೊಂದು ಪ್ರಶ್ನೆಗಳು ಹುಟ್ಟುವುದು ಸಹಜವಾಗಿದೆ. ವಯಸ್ಸಿಗೆ ತಕ್ಕಂತೆ ಮನುಷ್ಯನ ಬುದ್ಧಿ ಕೂಡ ಬದಲಾವಣೆ ಆಗುತ್ತಾ ಹೋಗುತ್ತದೆ. ಹಾಗೆಯೇ ಭೂಮಿಯಲ್ಲಿ ಎಷ್ಟೋ ಆಶ್ಚರ್ಯಕರ ಸಂಗತಿಗಳು ಇರುತ್ತವೆ. ಅಂತಹವುಗಳ ಬಗ್ಗೆ ಅಂದರೆ ಕೆಲವು ಆಸಕ್ತಿಕರ ವಿಷಯಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಬ್ಬ ವ್ಯಕ್ತಿ ಇದ್ದಾನೆ. ಅವನ ಹೆಸರು ಮೋಹನ್. ಅವನ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತಲೇ ಇರುತ್ತದೆ. ಡ್ರಿಲ್ ಮಷೀನ್, ಮಿಕ್ಸಿ ಹಾಗೂ ಇನ್ನೂ ಅನೇಕ ಮಿಷನ್ ಗಳು ಇವನ ದೇಹದಲ್ಲಿ ಇರುವ ಕರೆಂಟ್ ನಿಂದ ಕೆಲಸವನ್ನು ಮಾಡುತ್ತವೆ. ಇನ್ನೂ ವಿಸ್ಮಯಕಾರಿ ವಿಷಯವೇನೆಂದರೆ ಸಣ್ಣದಾಗಿ ಕರೆಂಟ್ ಹೊಡೆದರೆ ಕೆಲವರು ಸಾಯುತ್ತಾರೆ. ಆದರೆ ಈತ ಇನ್ನೂ ಸತ್ತಿಲ್ಲ ಇನ್ನೂ ಬದುಕಿದ್ದಾನೆ. ಗಾಳಿಯನ್ನು ನೋಡಲು ಸಾಧ್ಯವಿಲ್ಲ. ಆದರೆ ಕೈಯಲ್ಲಿ ಹಿಡಿಯಬಹುದು. ಇಂದಿನ ವಿಜ್ಞಾನ ಒಂದು ವ್ಯವಸ್ಥೆಯ ಮೂಲಕ ಗಾಳಿಯನ್ನು ಸಹ ನೋಡುವಂತೆ ಮಾಡಿದೆ. ಕೆರೆಬಿಯನ್ ಎಂಬ ಒಂದು ದೇಶ ಇದೆ. ಇಲ್ಲಿ ತಿನ್ನಲು ಆಹಾರ ಸಹಿತ ಸಿಗುವುದಿಲ್ಲ. ಆದ್ದರಿಂದ ಇಲ್ಲಿಯ ಜನರು ಮಣ್ಣನ್ನೇ ರೊಟ್ಟಿಯನ್ನು ಆಗಿ ಮಾಡಿಕೊಂಡು ತಿನ್ನುತ್ತಾರೆ.
ಪ್ರಪಂಚದಲ್ಲಿ ಅತಿ ದೊಡ್ಡ ಕಿಚನ್ ಎಂದರೆ ಅಮೃತಸರದ ಗೋಲ್ಡನ್ ಟೆಂಪಲ್ ಹತ್ತಿರ ಇರುವ ಕಿಚನ್ ಆಗಿದೆ. ಇಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತಿನಿತ್ಯ ಊಟ ರೆಡಿ ಮಾಡಲಾಗುತ್ತದೆ.
ಪಿಝಾ ಯಾರು ಇಷ್ಟಪಡುವುದಿಲ್ಲ ಇದನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇದನ್ನು ಎಲ್ಲರೂ ಆರ್ಡರ್ ಮಾಡಿಸಿಕೊಂಡು ಮನೆಗೆ ತರಿಸುತ್ತಾರೆ. ಮೊದಲು ಹೀಗೆ ಆರ್ಡರ್ ಮಾಡಿದ್ದು ಬ್ರಿಟನ್ನಿನ ರಾಣಿ ಮಾರ್ಗರೇಟ್. ಕತ್ತೆಗೂ ಒಂದು ಕಾಲ ಬರುತ್ತದೆ ಎಂದು ಜನರು ಹೇಳುತ್ತಿರುತ್ತಾರೆ. ಹಾಗೆಯೇ ಹರಿಯಾಣದಲ್ಲಿ ಇರುವ ಒಂದು ಕತ್ತೆಯ ಬೆಲೆ ಹತ್ತು ಲಕ್ಷ ರೂಪಾಯಿಗಳು. ಶೇಕ್ಸ್ಪಿಯರ್ ಅವರು ಎಪ್ರಿಲ್ 23ರಂದು ಹುಟ್ಟಿದ್ದರು. ಹಾಗೆಯೇ ಐವತ್ತೆರಡು ವರ್ಷಗಳಾದ ನಂತರ ಏಪ್ರಿಲ್ 23ಕ್ಕೆ ಸತ್ತರು.
ನದಿಗಳು ಸಾಮಾನ್ಯವಾಗಿ ವಿರುದ್ಧ ದಿಕ್ಕಿನಲ್ಲಿ ಹರಿಯುವುದಿಲ್ಲ. ಆದರೆ ಅಮೆರಿಕಾದಲ್ಲಿ ಇರುವ ಒಂದು ನದಿ 24 ಗಂಟೆಗಳ ಕಾಲ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ.ರೋಮನ್ ಭಾಷೆಯಲ್ಲಿ ನಮ್ಮ ಭಾಷೆಯ ಹಾಗೆ ಸೊನ್ನೆ ಇರುವುದೇ ಇಲ್ಲ.ಹಾಗಾಗಿ ಸೊನ್ನೆಯನ್ನು ಎಲ್ಲೂ ಬಳಕೆ ಮಾಡುವುದಿಲ್ಲ.
ಅನಹಿತ ಎಂಬ ಮುದ್ದಾದ ಮಗುವಿನ ನಗುವನ್ನು ಜಗತ್ತಿನಲ್ಲೇ ಮುಗ್ಧವಾದ ನಗು ಎಂದು ಪರಿಗಣಿಸಲಾಗಿದೆ. ಹಾಗೆಯೇ ಪ್ರತಿಯೊಬ್ಬ ಮನುಷ್ಯನ ಮೂಗಿನ ಉದ್ದ ಅವನ ಹೆಬ್ಬೆರಳಿನ ಉದ್ದದಷ್ಟು ಇರುತ್ತದೆ. ಐರಿಷ್ ಭಾಷೆಯಲ್ಲಿ ಹೌದು ಮತ್ತು ಇಲ್ಲ ಎನ್ನುವ ಅರ್ಥಕ್ಕೆ ಪದಗಳೇ ಇಲ್ಲ. ಹೀಗೆ ಹೇಳಬೇಕಾದರೆ ಸನ್ನೆಯನ್ನು ಮಾಡಬೇಕು.