ಪ್ರಶಾಂತ ಇವರು ಸಿನಿಮಾ ಕ್ಷೇತ್ರದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರು. ಪ್ರಶಾಂತ್ ನೀಲ್ ಹೆಸರು ಕೇಳಿದರೆ ಮೊದಲು ನೆನಪಾಗುವ ಸಿನಿಮಾ ಶ್ರೀಮುರಳಿ ಅಭಿನಯದ ಉಗ್ರಂ. ಇದು ಇವರ ಮೊದಲ ಸಿನಿಮಾ ಕೂಡ ಹೌದು. ಈ ಸಿನೆಮಾದ ನಂತರ ಕೆಜಿಎಫ್ ಚಿತ್ರವನ್ನು ನಿರ್ದೇಶಿಸಿ ದೇಶದಾದ್ಯಂತ ಒಂದು ಅತ್ಯುತ್ತಮ ಹೆಸರನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ ಮತ್ತು ಕೆಜಿಎಫ್ 2 ಚಿತ್ರವನ್ನು ನಿರ್ದೇಶಿಸಿದ್ದಾರೆ. ಆದ್ದರಿಂದ ನಾವು ಇಲ್ಲಿ ಪ್ರಶಾಂತ್ ನೀಲ್ ಅವರ ಬಗೆಗಿನ ವಿಚಾರವನ್ನು ತಿಳಿದುಕೊಳ್ಳೋಣ.

ಪ್ರಶಾಂತ್ ನೀಲ್ 1980 ರ ಜೂನ್ 4 ರಂದು ಹಾಸನದಲ್ಲಿ ಜನಿಸುತ್ತಾರೆ. ಇವರು ಹುಟ್ಟಿನಿಂದಲೂ ಬಡತನವನ್ನು ನೋಡದೆ ಸಿರಿತನದಲ್ಲಿ ಬದುಕಿದವರು. ಪ್ರಶಾಂತ್ ನೀಲ್ ಅವರು ಎಂ.ಬಿ.ಎ. ಪದವೀಧರರಾಗಿದ್ದಾರೆ. ಪ್ರಶಾಂತ್ ನೀಲ್ ಅವರು ಮೊದಲಿನಿಂದಲೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯನ್ನು ಹೊಂದಿರುವುದಿಲ್ಲ. ಮೂಲತಹ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಅವರು ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಪ್ರಶಾಂತ್ ನೀಲ್ ಅವರ ಸೋದರಿಯನ್ನು ಶ್ರೀಮುರಳಿ ಅವರು ಪ್ರೇಮಿಸಿ ವಿವಾಹವಾಗುತ್ತಾರೆ. ಇದರ ಮೂಲಕ ಇವರಿಬ್ಬರು ಸಂಬಂಧಿಕರಾಗುತ್ತಾರೆ.

ತದನಂತರ ಪ್ರಶಾಂತ ಅವರಿಗೆ ಸಿನಿಮಾವನ್ನು ನಿರ್ದೇಶನ ಮಾಡುವ ಹಂಬಲವನ್ನು ಹೊಂದಿ ಅದರ ವಿಚಾರವನ್ನು ತಿಳಿಯಲು ಅದರ ಆಳ ಅಂತರವನ್ನು ತಿಳಿಯಲು ತರಬೇತಿಯನ್ನು ಪಡೆಯುತ್ತಾರೆ. ತರಬೇತಿ ಮುಗಿದ ನಂತರ ಪ್ರಶಾಂತ್ ನೀಲ್ ಅವರು ಸಿನಿಮಾವನ್ನು ನಿರ್ದೇಶಿಸುವ ಹಂಬಲ ಹೊಂದಿ ಇವರ ಮೊದಲ ಸಿನಿಮಾಕ್ಕೆ ಶ್ರೀ ಮುರಳಿಯವರನ್ನು  ನಾಯಕನಟರನ್ನಾಗಿ ಮಾಡುವ ಉದ್ದೇಶದಿಂದ ಅವರಿಗಾಗಿ ಒಂದು ಕಥೆಯನ್ನು ರಚಿಸಲು ಮುಂದಾಗುತ್ತಾರೆ. ಪ್ರಶಾಂತ್ ನೀಲ್ ಅವರು ಶ್ರೀಮುರಳಿ ಅವರನ್ನು ಗೆಲ್ಲಿಸುವ ಭರವಸೆ ನೀಡಿ ಸಿನಿಮಾಕ್ಕಾಗಿ ತನ್ನದೇ ಆದ ಹೊಸ ತಂಡವನ್ನು ರಚಿಸಲು ಮುಂದಾಗುತ್ತಾರೆ. ಎಲ್ಲಾ ಸೆಟ್ ಆದ ಬಳಿಕ ಈ ಸಿನಿಮಾಕ್ಕೆ ‘ನಂದೇ’ ಎಂಬ ಹೆಸರನ್ನು ಇಟ್ಟು ತದನಂತರ ‘ಉಗ್ರಂ’ ಎಂದು ಸಿನಿಮಾದ ಹೆಸರನ್ನು ಬದಲಾಯಿಸುತ್ತಾರೆ.

‘ಉಗ್ರಂ’ ಸಿನಿಮಾ 2014ರಲ್ಲಿ ತೆರೆಕಾಣುತ್ತದೆ ಮತ್ತು ಈ ಸಿನೆಮಾ ಅತ್ಯುತ್ತಮ ಯಶಸ್ಸನ್ನು ಕಂಡು ಶ್ರೀಮುರಳಿಗೆ ಮತ್ತು ಪ್ರಶಾಂತ್ ನೀಲ್ ಅವರಿಗೆ ಉತ್ತಮ ಹೆಸರನ್ನು ತಂದುಕೊಡುತ್ತದೆ. ಇದಾದ ಬಳಿಕ ಪ್ರಶಾಂತ್ ನೀಲ್ ಅವರು ‘ಉಗ್ರಂ’ ನ ಇನ್ನೊಂದು ಭಾಗವಾದ ‘ಉಗ್ರಂ ವೀರಂ’ ಚಿತ್ರವನ್ನು ನಿರ್ದೇಶಿಸಿ ಯಶಸ್ಸನ್ನು ಕಾಣುತ್ತಾರೆ. ತದನಂತರ ಸ್ವಲ್ಪ ಸಮಯವನ್ನು ತೆಗೆದುಕೊಂಡು 79,80 ರ ದಶಕದ ಕಥಾನಕವನ್ನು ಬಳಸಬೇಕೆಂದು ನಿರ್ಧರಿಸಿ ಕೆಜಿಎಫ್ ನ ಕಥೆಯನ್ನಾಧರಿಸಿ ಸಿನಿಮಾವನ್ನು ನಿರ್ಮಿಸಲು ಮುಂದಾಗುತ್ತಾರೆ. ಅದೇ ಸಿನೆಮಾ ಕೆಜಿಎಫ್.

ಈ ಸಿನಿಮಾದಲ್ಲಿ ಯಶ್ ಅವರು ಮುಖ್ಯಪಾತ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಈ ಸಿನೆಮಾ ದೇಶವು ಕನ್ನಡ ಸಿನಿಮಾವನ್ನು ತಿರುಗು ನೋಡುವಂತೆ ಮಾಡುತ್ತದೆ. 2018 ರಲ್ಲಿ ಈ  ಚಿತ್ರ ತೆರೆಕಂಡು  ಬಾಕ್ಸಾಫೀಸನಲ್ಲಿ ಧೂಳೆಬ್ಬಿಸುತ್ತದೆ. 2021 ರ ಜನವರಿ 8 ರಂದು ತೆರೆಕಂಡ ಕೆ.ಜಿ.ಎಫ್.- 2 ಚಿತ್ರದ ಟೀಸರ ಕೋಟಿಗಟ್ಟಲೆ ವೀಕ್ಷಣೆಯನ್ನು ಕಂಡು ಮುನ್ನುಗ್ಗುತ್ತಿದೆ. ಪ್ರಶಾಂತ್ ನೀಲ್ ಅವರು ತಮ್ಮ ನಿರ್ದೇಶನದ ಎರಡೇ ಚಿತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ದೇಶದಾದ್ಯಂತ ಹೆಸರನ್ನು ಮಾಡಿದ್ದಾರೆ. ಸೈಮಾ ಅವಾರ್ಡ್ ನಲ್ಲಿ ಇವರಿಗೆ ಅತ್ಯುತ್ತಮ ಡೆಬ್ಯು ನಿರ್ದೇಶಕ ಎಂಬ ಪ್ರಶಸ್ತಿಯನ್ನು ಪಡೆಯುತ್ತಾರೆ. ಹೀಗೆ ಇವರು ತಮ್ಮ ಸಿನಿಮಾ ಜರ್ನಿಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!