ನಿಂಬೆಹಣ್ಣು ಇದು ಅತ್ಯವಶ್ಯಕ. ಇದನ್ನು ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಹಾಗೆಯೇ ಇದು ಎಷ್ಟೋ ಔಷಧೀಯ ಗುಣಗಳನ್ನು ಹೊಂದಿದೆ. ಇದು ವಿಟಮಿನ್ ಸಿ ಯನ್ನು ಹೊಂದಿದೆ. ಹಾಗೆಯೇ ಹೋಟೆಲ್ಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಎಂದರೂ ತಪ್ಪಿಲ್ಲ. ಇದು ಎಲ್ಲರ ಮನೆಯಲ್ಲೂ ಬೆಳೆಯುವುದಿಲ್ಲ. ಆದ್ದರಿಂದ ಮಾರುಕಟ್ಟೆಯಿಂದ ತರುವವರೇ ಜಾಸ್ತಿ. ಆದರೆ ಹೆಚ್ಚು ತಂದರೆ ಬೇಗ ಹಾಳಾಗುತ್ತದೆ. ಆದ್ದರಿಂದ ನಾವು ಇಲ್ಲಿ ಹೆಚ್ಚು ನಿಂಬೆಹಣ್ಣನ್ನು ತಂದಾಗ ಮೂರು ತಿಂಗಳುಗಳು ಕಳೆದರೂ ಫ್ರೆಶ್ ಆಗಿರುವಂತೆ ಏನು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ.
ಮೊದಲೊಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು. ನಂತರ ಅದಕ್ಕೆ ನೀರನ್ನು ಹಾಕಿ ನಿಂಬೆಹಣ್ಣನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಿಂಬೆಹಣ್ಣಿನ ಮೇಲೆ ಯಾವುದೇ ರೀತಿಯ ಕೊಳೆಗಳು ಇರಬಾರದು. ಆದ್ದರಿಂದ ಇದನ್ನು ಚೆನ್ನಾಗಿ ತಿಕ್ಕಿ ತೊಳೆಯಬೇಕು. ನಂತರ ಒಂದೊಂದೇ ಲಿಂಬೆಹಣ್ಣನ್ನು ತೆಗೆದುಕೊಂಡು ಒಣಗಿದ ಬಟ್ಟೆಯಲ್ಲಿ ಚೆನ್ನಾಗಿ ಉದ್ದಬೇಕು. ನಂತರ ಉದ್ದಿದ ನಿಂಬೆಹಣ್ಣನ್ನು ಒಂದು ಒಣಗಿದ ಪಾತ್ರೆಗೆ ಹಾಕಿಕೊಳ್ಳಬೇಕು.
ಎಲ್ಲಾ ನಿಂಬೆಹಣ್ಣುಗಳನ್ನು ಹುಟ್ಟಿದ ನಂತರ ಅದರ ಮೇಲೆ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಬೇಕು. ನಂತರದಲ್ಲಿ ಅದನ್ನು ಫ್ರಿಜ್ ನಲ್ಲಿಡಬೇಕು. ನಿಂಬೆಹಣ್ಣಿನ ಮೇಲೆ ಕೊಬ್ಬರಿ ಎಣ್ಣೆ ಒಣಗಿದ ನಂತರ ಒಂದು ಪ್ಲಾಸ್ಟಿಕ್ ಕರಡಿಗೆ ಅಥವಾ ಸ್ಟೀಲ್ ಪಾತ್ರೆಯಲ್ಲಿ ಟಿಶ್ಯೂ ಪೇಪರ್ ಅನ್ನು ಹಾಕಿ ಅದರ ಮೇಲೆ ನಿಂಬೆಹಣ್ಣುಗಳನ್ನು ಇಟ್ಟು ಅದರ ಮೇಲೆ ಮತ್ತೆ ಟಿಶ್ಯೂ ಪೇಪರ್ ಅನ್ನು ಹಾಕಿ ಹಾಗೆ ಎಷ್ಟು ಸ್ಟೆಪ್ ಬೇಕಾದರೂ ಮಾಡಬಹುದು.
ಹೀಗೆ ಇದ್ದರೆ ಮೂರು ತಿಂಗಳು ಕಾಲ ನಿಂಬೆಹಣ್ಣು ಫ್ರೆಶ್ ಆಗಿರುತ್ತದೆ. ಹಾಗೆಯೇ ಒಂದು ಒಣಗಿದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನಿಂಬೆಹಣ್ಣುಗಳನ್ನು ಪೇಪರ್ ನಲ್ಲಿ ಸುತ್ತಿ ಉಂಡೆಮಾಡಿ ಹಾಕಿದರೂ ನಿಂಬೆಹಣ್ಣು ಬಹಳ ದಿನಗಳ ಕಾಲ ತಾಜಾ ಇರುತ್ತದೆ. ಆದರೆ ಎರಡೂ ವಿಧಾನಗಳಲ್ಲಿ ಮುಚ್ಚಳವನ್ನು ಮುಚ್ಚಿರಬೇಕು. ಆದ್ದರಿಂದ ಈಗಿನ ಹಾಡುಗಳನ್ನು ಅನುಸರಣೆ ಮಾಡುವುದರಿಂದ ಯಾವಾಗ ಬೇಕಾದರೂ ತಾಜಾ ಜ್ಯೂಸ್ ಮಾಡಿ ಕುಡಿಯಬಹುದು.