ಸಿನಿಮಾದಲ್ಲಿ ನಟಿಸುವ ಕಲಾವಿದರಿಗೆ ಮೇಕಪ್ ಮಾಡುವುದು ಸರ್ವೇಸಾಮಾನ್ಯ. ಅದರಲ್ಲೂ ಸಿನಿಮಾ ನಟಿಯರಿಗೆ ಹೆಚ್ಚಾಗಿ ಮೇಕಪ್ ಮಾಡುತ್ತಾರೆ. ಫೇಮಸ್ ಕೆಲವು ನಟಿಯರ ಬಗ್ಗೆ ಹಾಗೂ ಮೇಕಪ್ ಇಲ್ಲದೇ ಹೇಗೆ ಕಾಣುತ್ತಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪುನೀತ್ ರಾಜಕುಮಾರ್ ಅವರ ಜೊತೆ ಪವರ್ ಸಿನಿಮಾದಲ್ಲಿ ಮೆಹಬೂಬ ಹಾಡಿಗೆ ಡ್ಯಾನ್ಸ್ ಮಾಡಿ ಫುಲ್ ಫೇಮಸ್ ಆದ ನಟಿ ತ್ರಿಶಾ ಇವರು ಮೇಕಪ್ ಇಲ್ಲದೆ ಮುದ್ದಾಗಿ ಕಾಣುತ್ತಾರೆ. ಇವರು ಕನ್ನಡ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರು ಮೇ 4, 1983 ರಂದು ಚೆನ್ನೈ ನಲ್ಲಿ ಹುಟ್ಟಿದ್ದಾರೆ. ಇವರ ಮಾತೃಭಾಷೆ ತಮಿಳು ಆಗಿದ್ದು ನಟಿ ಹಾಗೂ ಮೋಡಲ್ ಆಗಿದ್ದಾರೆ. ಇವರಿಗೆ ಇಂಗ್ಲಿಷ್, ಹಿಂದಿ, ತಮಿಳು, ಫ್ರೆಂಚ್ ಭಾಷೆಗಳು ಬರುತ್ತದೆ. ಇವರ ತಂದೆ ಹೆಸರು ಕೃಷ್ಣನ್, ತಾಯಿ ಹೆಸರು ಉಮಾ ಕೃಷ್ಣನ್.

ಸಮಂತಾ ಅಕ್ಕಿನೇನಿ ಇವರು ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಿಸುತ್ತಾರೆ. ಇವರು ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಇವರು ಏಪ್ರೀಲ್ 28, 1987 ರಂದು ತಮಿಳು ನಾಡಿನ ಚೆನ್ನೈನಲ್ಲಿ ಜನಿಸಿದ್ದಾರೆ. ಇವರು ಕ್ರಿಶ್ಚಿಯನ್ ಧರ್ಮದವರು, ತಮ್ಮ ಶಿಕ್ಷಣವನ್ನು ಚೆನ್ನೈನಲ್ಲಿ ಮುಗಿಸಿದ್ದಾರೆ. ಇವರ ತಂದೆಯ ಹೆಸರು ಜೋಸೆಫ್ ಪ್ರಭು ಇವರಿಗೆ ಇಬ್ಬರು ಬ್ರದರ್ಸ್ ಇದ್ದಾರೆ. ಮೇಕಪ್ ಮಾಡಿದರೂ ಮಾಡದೇ ಇದ್ದರೂ ರಕುಲ್ ಪ್ರೀತ್ ಸಿಂಗ್ ಇವರು ಸುಂದರವಾಗಿ ಕಾಣುತ್ತಾರೆ. ಇವರು ವಿವಿಧ ಭಾಷೆಗಳಲ್ಲಿ ನಟಿಸುತ್ತಾರೆ ಹಾಗೂ ಇವರೊಬ್ಬರು ಫೇಮಸ್ ಬಿಸಿನೆಸ್ ವುಮೆನ್. ಇವರು ಡೆಲ್ಲಿಯಲ್ಲಿ 1990 ಅಕ್ಟೋಬರ್ 10 ರಂದು ಜನಿಸಿದ್ದಾರೆ. ಇವರ ತಂದೆ ಹೆಸರು ರಾಜೇಂದ್ರ ಸಿಂಗ್, ಇವರಿಗೆ ಒಬ್ಬ ಬ್ರದರ್ ಇದ್ದಾನೆ. ತಮ್ಮ ಶಿಕ್ಷಣವನ್ನು ಡೆಲ್ಲಿಯಲ್ಲಿ ಮುಗಿಸಿದ್ದಾರೆ. ಇವರು ಕನ್ನಡದ ಗಿಲ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ.

ಕಾಜಲ್ ಅಗರವಾಲ್ ಇವರು ಮೇಕಪ್ ಇಲ್ಲದೆಯೂ ಸುಂದರವಾಗಿ ಕಾಣುತ್ತಾರೆ ಇವರದು ನ್ಯಾಚುರಲ್ ಬ್ಯೂಟಿ. ಇವರು ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು 19 ಜೂನ್ 1985ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಇವರು ಹಿಂದೂ ಧರ್ಮದವರು. ಇವರು ತಮ್ಮ ಶಿಕ್ಷಣವನ್ನು ಮುಂಬೈ ನಗರದಲ್ಲಿ ಪಡೆದಿದ್ದಾರೆ. ಇವರು ಇತ್ತೀಚೆಗೆ ಮದುವೆಯನ್ನು ಮಾಡಿಕೊಂಡಿದ್ದಾರೆ. ನಂದಿತಾ ಶ್ವೇತಾ ಇವರು ಮೇಕಪ್ ಇಲ್ಲದೆ ಇದ್ದರೆ ಚೆನ್ನಾಗಿ ಕಾಣುತ್ತಾರೆ. ಇವರು ನಟಿ ಹಾಗೂ ಮೊಡೆಲ್ ಆಗಿದ್ದಾರೆ. ಇವರು ಬೆಂಗಳೂರಿನಲ್ಲಿ 30 ಏಪ್ರಿಲ್ 1986 ರಂದು ಜನಿಸಿದರು. ಇವರು ಕನ್ನಡದಲ್ಲಿ ನಂದ ಲವ್ಸ್ ನಂದಿತಾ ಎಂಬ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಜೊತೆ ನಟಿಸಿದ್ದಾರೆ. ಲಾವಣ್ಯ ತ್ರಿಪಾಠಿ ಇವರು ಸಹ ಮೇಕಪ್ ಇಲ್ಲದೆ ಸುಂದರವಾಗಿ ಕಾಣುತ್ತಾರೆ. ಇವರು ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಡಿಸೆಂಬರ್ 15, 1990 ರಂದು ಜನಿಸಿದರು. ಇವರು ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪುಟ್ಟಬೊಮ್ಮ ಹಾಡಿನ ಮೂಲಕ ಫೇಮಸ್ ಆದ ಪೂಜಾ ಹೆಗ್ಡೆ ಇವರು ನ್ಯಾಚುರಲ್ ಬ್ಯೂಟಿ. ಇವರು ಕರ್ನಾಟಕದ ಮಂಗಳೂರಿನಲ್ಲಿ ಅಕ್ಟೋಬರ್ 13, 1990 ರಂದು ಜನಿಸಿದರು. ಇವರ ತಂದೆಯ ಹೆಸರು ಮಂಜುನಾಥ್ ಹೆಗ್ಡೆ, ತಾಯಿಯ ಹೆಸರು ಲತಾ ಹೆಗ್ಡೆ. ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಇವರು ದಕ್ಷಿಣ ಭಾರತದ ಪ್ರಸಿದ್ಧ ನಟಿ. ಇವರು ತಮಿಳು, ತೆಲುಗು, ಮಲಯಾಳಂ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನುಪಮ ಪರಮೇಶ್ವರನ್ ಇವರು ನಟಿಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕೇರಳದಲ್ಲಿ 18 ಫೆಬ್ರುವರಿ 1996 ರಂದು ಜನಿಸಿದರು. ಪ್ರಿಯಾಮಣಿ ಇವರು ನಟಿ ಹಾಗೂ ಮೊಡೆಲ್ ಆಗಿದ್ದಾರೆ. ಇವರು ಕನ್ನಡದಲ್ಲಿ ರಾಮ್ ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಜೂನ್ 4, 1984 ರಲ್ಲಿ ಜನಿಸಿದರು.

ಶೃತಿ ಹಾಸನ್ ಇವರು ಕಮಲ್ ಹಾಸನ್ ಅವರ ಮಗಳು. ಇವರು ಹೆಚ್ಚು ಮೇಕಪ್ ಮಾಡಿಕೊಳ್ಳುತ್ತಾರೆ. ರಾಶಿ ಖಾನ ಇವರು ಮೇಕಪ್ ಇಲ್ಲದೆ ಇದ್ದರೂ ಸುಂದರವಾಗಿ ಕಾಣುತ್ತಾರೆ, ಇವರದು ನ್ಯಾಚುರಲ್ ಬ್ಯೂಟಿ. ತೆಲುಗು ಭಾಷೆಯಲ್ಲಿ ನಟಿಸಿ ಫೇಮಸ್ ಆದ ಕೀರ್ತಿ ಸುರೇಶ್ ಅವರದು ನ್ಯಾಚುರಲ್ ಬ್ಯೂಟಿ. ಶಾಲಿನಿ ಪಾಂಡೆ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ ಇವರದು ನ್ಯಾಚುರಲ್ ಬ್ಯೂಟಿ. ಕಿರಿಕ್ ಪಾರ್ಟಿ ಕನ್ನಡದ ಸಿನಿಮಾ ಮೂಲಕ ಪರಿಚಯವಾಗಿ ಇಂದು ತೆಲುಗು ಭಾಷೆಯ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿ ಫೇಮಸ್ ಹಾಗೂ ಬೇಡಿಕೆ ನಟಿಯಾಗಿದ್ದಾರೆ. ಇವರು ಕ್ಯೂಟ್ ಆಗಿದ್ದು ಮೇಕಪ್ ಇಲ್ಲದೆ ಸುಂದರವಾಗಿ ಕಾಣುತ್ತಾರೆ. ಈ ಎಲ್ಲರಿಗೂ ಹೆಚ್ಚು ಅವಕಾಶಗಳು ಸಿಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!