ಮನೆಯಲ್ಲೇ ಪ್ರೊಟೀನ್ ಪೌಡರ್ ಮಾಡಿಕೊಳ್ಳೋದು ಹೇಗೆ? ನೋಡಿ

0 13

ಇತ್ತೀಚಿನ ವರ್ಕ್ ಟೆನ್ಶನ್, ಕಲಬೆರಕೆ ಆಹಾರ, ಜೀವನ ಶೈಲಿಯಿಂದ ಅಗತ್ಯ ಪ್ರೊಟೀನ್ ದೇಹಕ್ಕೆ ಸಿಗುತ್ತಿಲ್ಲ ಇದರಿಂದ ಬೇಗನೆ ಕೆಲವು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ದೇಹಕ್ಕೆ ಪ್ರೋಟೀನ್ ಸಿಗುವ ನಟ್ಸ್ ಗಳಿಂದ ಪೌಡರ್ ಮಾಡಿಕೊಂಡು ಪ್ರತಿದಿನ ಸೇವಿಸಿದರೆ ಆರೋಗ್ಯವಾಗಿರಬಹುದು. ಹಾಗಾದರೆ ನಟ್ಸ್ ಗಳಿಂದ ಪೌಡರ್ ಮಾಡುವುದು ಹೇಗೆ ಮತ್ತು ಸೇವಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವರ್ಕೌಟ್ ಆದ ನಂತರ ಪ್ರೊಟೀನ್ ಅವಶ್ಯಕವಿರುತ್ತದೆ. ಮಸಲ್ಸ್ ಸ್ಟ್ರಾಂಗ್ ಆಗಲು ಪ್ರೊಟೀನ್ ಸಹಾಯ ಮಾಡುತ್ತದೆ, ಅಲ್ಲದೆ ಪ್ರೊಟೀನ್ ಸೇವಿಸುತ್ತಿದ್ದರೆ ತೂಕ ಸಮತೋಲನದಲ್ಲಿ ಇರುತ್ತದೆ ಮತ್ತು ದೇಹಕ್ಕೆ ಶಕ್ತಿ ಕೊಡುತ್ತದೆ. ಅಂಗಡಿಗಳಲ್ಲಿ ಪ್ರೊಟೀನ್ ಸಿಗುತ್ತದೆ ಆದರೆ ಅದು ಕಲಬೆರೆಕೆ ಆಗಿರುವುದರಿಂದ ದೇಹಕ್ಕೆ ಒಳ್ಳೆಯದಲ್ಲ ಆದ್ದರಿಂದ ಮನೆಯಲ್ಲೇ ಸಿಗುವ ಸಾಮಾಗ್ರಿಗಳನ್ನು ಬಳಸಿ ಸುಲಭವಾಗಿ ಪ್ರೊಟೀನ್ ತಯಾರಿಸಿಕೊಳ್ಳಬಹುದು. ಬೇಕಾಗುವ ಸಾಮಗ್ರಿಗಳು ಕಾಲು ಕಪ್ ಪಿಸ್ತಾ, ಕಾಲು ಕಪ್ ಶೇಂಗಾ, ಕಾಲು ಕಪ್ ಬಾದಾಮಿ, ಕಾಲು ಕಪ್ ಗೋಡಂಬಿ, ಕಾಲು ಕಪ್ ಅಕ್ರೋಟ್.

ಮೊದಲು ಕಾಲು ಕಪ್ ಪಿಸ್ತಾವನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ಪಿಸ್ತಾ ಸಣ್ಣದಿದ್ದರೆ 3-4 ನಿಮಿಷ ಸಾಕು, ದೊಡ್ಡದಿದ್ದರೆ 5ರಿಂದ 6 ನಿಮಿಷ ಫ್ರೈ ಮಾಡಬೇಕು. ಬಣ್ಣ ಬದಲಾವಣೆ ಕಂಡು ಬಂದ ತಕ್ಷಣ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಕಾಲು ಕಪ್ ಗೋಡಂಬಿಯನ್ನು ಫ್ರೈ ಮಾಡಬೇಕು ಇದು ಬೇಗ ಫ್ರೈ ಆಗುತ್ತದೆ ಇದನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಂತರ ಕಾಲು ಕಪ್ ಬಾದಾಮಿಯನ್ನು ರೋಸ್ಟ್ ಮಾಡಬೇಕು ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದ ತಕ್ಷಣ ತೆಗೆದಿಟ್ಟುಕೊಳ್ಳಬೇಕು. ಕಾಲು ಕಪ್ ಶೇಂಗಾವನ್ನು ಫ್ರೈ ಮಾಡಬೇಕು ಇದರಿಂದ ಅದರಲ್ಲಿರುವ ಎಣ್ಣೆಯ ಅಂಶ ಹೋಗುತ್ತದೆ. ವಾಲನಟ್ ಅಥವಾ ಅಕ್ರೋಟ್ ಇದನ್ನು ಸಹ ಸಣ್ಣ ಉರಿಯಲ್ಲಿ ಫ್ರೈ ಮಾಡಿ ಇಟ್ಟುಕೊಳ್ಳಬೇಕು ನಂತರ ನೀಟಾಗಿ ಫ್ರೈ ಮಾಡಿಕೊಂಡ ಎಲ್ಲ ನಟ್ಸ್ ಗಳನ್ನು ಪೌಡರ್ ಮಾಡಿಕೊಳ್ಳಬೇಕು. ನೈಸ್ ಆದ ಪೌಡರನ್ನು ಒಂದು ಒಣಗಿದ ಬಾಟಲ್ ನಲ್ಲಿ ಅಥವಾ ಗಾಜಿನ ಕಂಟೇನರ್ ನಲ್ಲಿ ತುಂಬಿ ಫ್ರಿಜ್ ನಲ್ಲಿ ಇಡುವುದರಿಂದ ಒಂದು ತಿಂಗಳವರೆಗೆ ಹಾಳಾಗುವುದಿಲ್ಲ. ಆದರೆ ಎರಡು ತಿಂಗಳಿಗೆ ಬೇಕಾಗುವಷ್ಟು ಒಂದೇ ಸಲ ಮಾಡಬಾರದು ಹಾಳಾಗುತ್ತದೆ. ಈ ಪ್ರೊಟೀನ್ ಮಕ್ಕಳ ಬೆಳವಣಿಗೆಗೆ ಬಹಳ ಉಪಯುಕ್ತವಾಗಿದೆ. ಅವರ ತೂಕ ಅಭಿವೃದ್ಧಿ ಆಗುವುದರ ಜೊತೆಗೆ ಅವರ ಬ್ರೇನ್ ಅನ್ನು ಆಕ್ಟಿವ್ ಆಗಿರುವಂತೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ ಮಕ್ಕಳಿಗೆ ತರಕಾರಿ, ಹಣ್ಣುಗಳನ್ನು ಕೊಟ್ಟರೆ ಅವರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸ್ವೀಟ್ಸ್, ಜ್ಯೂಸ್, ಮಿಲ್ಕ್ ಶೇಕ್ ಗಳಲ್ಲಿ ಸೇರಿಸಿ ಸೇವಿಸಬಹುದು. ಮಕ್ಕಳಷ್ಟೇ ಅಲ್ಲದೆ ದೊಡ್ಡವರೂ ಸಹ ಪ್ರೊಟೀನನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಮನೆಯಲ್ಲೆ ತಯಾರಿಸಿದ ಪರಿಶುದ್ಧವಾದ ಪ್ರೊಟೀನ್ ಪೌಡರ್ ಅನ್ನು ಪ್ರತಿದಿನ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

Leave A Reply

Your email address will not be published.