ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿಗೆ ಸೇರಿದಂತೆ ಎಲ್ಲರಿಗೂ ಮಂಡಿ ನೋವು, ಕಾಲು ನೋವು ಹೀಗೆ ನಾನಾ ರೀತಿಯ ನೋವು ಬರುತ್ತದೆ. ಈ ಎಲ್ಲಾ ನೋವುಗಳಿಗೆ ಮನೆಯಲ್ಲೇ ಸುಲಭವಾಗಿ, ನೈಸರ್ಗಿಕವಾಗಿ ಮಾಡಿಕೊಳ್ಳಬಹುದಾದ ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ಮಂಡಿ ನೋವು, ಸೊಂಟ ನೋವು, ಮೊಣಕಾಲು ನೋವು ಈ ಎಲ್ಲಾ ಸಮಸ್ಯೆಗಳಿಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಮನೆಮದ್ದು ಒಂದಿದೆ. ಅದೇನೆಂದರೆ ಕೆರೆ ದಂಡೆಯ ಮೇಲೆ ರೋಡ್ ಸೈಡಿನಲ್ಲಿ ಎಕ್ಕೆಗಿಡ ಬೆಳೆದಿರುತ್ತದೆ. ಇದರಲ್ಲಿ ಎರಡು ರೀತಿ ಇದೆ ಬಿಳಿ ಹೂವಿನ ಎಕ್ಕೆಗಿಡ ಹಾಗೂ ಗುಲಾಬಿ ಬಣ್ಣದ ಹೂವಿನ ಎಕ್ಕೆ ಗಿಡ. ಬಿಳಿ ಹೂವಿನ ಎಕ್ಕೆಗಿಡ ಔಷಧೀಯ ಗುಣವನ್ನು ಹೊಂದಿರುತ್ತದೆ. ಮೊದಲು ಫ್ರೆಶ್ ಆಲೋವೆರ ಜೆಲ್ ಅನ್ನು ತೆಗೆದುಕೊಳ್ಳಬೇಕು ಅದಕ್ಕೆ ಒಂದು ಸ್ಪೂನ್ ಅರಿಶಿಣ ಪುಡಿಯನ್ನು ಹಾಕಬೇಕು 2 ಸ್ಪೂನ್ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಎಣ್ಣೆಯಿಂದ ಮಾಲಿಷ್ ಮಾಡಿದರೆ ಯಾವುದೇ ನೋವು ಬೇಗನೆ ಗುಣವಾಗುತ್ತದೆ. ಎರಡು ಎಕ್ಕೆ ಎಲೆಯನ್ನು ತೊಳೆದು ಒರೆಸಿಕೊಳ್ಳಬೇಕು ಒಂದು ಹೆಂಚಿಗೆ ಎಳ್ಳೆಣ್ಣೆಯನ್ನು ಒರೆಸಿಕೊಳ್ಳಬೇಕು ಹೆಂಚನ್ನು ಬಿಸಿಮಾಡಿ ಎಲೆಯನ್ನು ಬಾಡಿಸಿಕೊಳ್ಳಬೇಕು ಹೀಗೆ ಮಾಡಿದಾಗ ಎಲೆಯಲ್ಲಿ ಔಷಧೀಯ ಗುಣಗಳು ಉತ್ಪತ್ತಿಯಾಗುತ್ತದೆ.
ಮೊದಲು ನೋವು ಇರುವ ಜಾಗಕ್ಕೆ ಮಾಡಿಕೊಂಡ ಆಲೋವೆರಾ ಪೇಸ್ಟನ್ನು ಹಚ್ಚಿಕೊಂಡು ಸ್ವಲ್ಪ ಬಿಸಿ ಇರುವ ಎಕ್ಕೆ ಎಲೆಯನ್ನು ಅದರ ಮೇಲಿಟ್ಟು ಬೀಳದಂತೆ ದಾರವನ್ನು ಕಟ್ಟಿ ಕೊಳ್ಳಬೇಕು ನಂತರ ಒಂದು ಬಟ್ಟೆಯನ್ನು ಕಟ್ಟಿದಾಗ ಕಾವು ನೋವನ್ನು ಉಪಶಮನ ಮಾಡುತ್ತದೆ. ಹೀಗೆ ಒಂದು ವಾರ ಮಾಡಿದರೆ ನೋವು ಉಪಶಮನವಾಗುತ್ತದೆ ಮೆಟ್ಟಿಲುಗಳನ್ನು ಹತ್ತುವುದು, ಆಟವಾಡುವುದು ಓಡಲು ಸಾಧ್ಯ. ಈ ಔಷಧಿಯನ್ನು ಮೊದಲಿನ ಕಾಲದಿಂದಲೂ ಜನರು ಉಪಯೋಗಿಸುತ್ತಿದ್ದರು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಮತ್ತು ನೈಸರ್ಗಿಕವಾದ ಚಿಕಿತ್ಸೆ ಆಗಿದೆ. ಶುಗರ್ ಇದ್ದವರು ಎಕ್ಕೆ ಎಲೆಯನ್ನು ರಾತ್ರಿ ಅಂಗಾಲಿಗೆ ಕಟ್ಟಿಕೊಂಡು ಬೆಳಗ್ಗೆ ತೆಗೆಯುವುದರಿಂದ ಶುಗರ್ ಕಂಟ್ರೋಲಿಗೆ ಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ನೈಸರ್ಗಿಕ ಚಿಕಿತ್ಸೆಯಿಂದ ಶಾಶ್ವತ ಪರಿಹಾರವನ್ನು ಪಡೆಯಿರಿ.