ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ. ಯಾವುದೇ ಸಿನಿಮಾ ಇರಲಿ ಚಿಕ್ಕಣ್ಣನ ಕಾಮೆಡಿ ಇರಲೇ ಬೇಕು. ಚಿಕ್ಕಣ್ಣ ಅವರು ತಾವೇ ಒಂದು ಫಾರ್ಮ್ ಹೌಸ್ ಮಾಡಿದ್ದರೆ. ಅವರ ಫಾರ್ಮ್ ಹೌಸ್ ಎಲ್ಲಿದೆ, ಅಲ್ಲಿ ಏನೇನಿದೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಶ್ರೀ ಚಾಮುಂಡೇಶ್ವರಿ ಮೇಕೆ ಮತ್ತು ನಾಟಿ ಕೋಳಿ ಫಾರ್ಮ್ ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ. ಇದರ ಮಾಲಿಕ ಕನ್ನಡ ಚಿತ್ರರಂಗದ ಹಾಸ್ಯಗಾರ ಚಿಕ್ಕಣ್ಣ, ಅವರ ಕನಸಿನ ಪ್ರಪಂಚ ಈ ಫಾರ್ಮ್ ಹೌಸ್. ಚಿಕ್ಕಣ್ಣನವರು 2 ವರ್ಷಕ್ಕಿಂತ ಮೊದಲು ಈ ಜಾಗವನ್ನು ಖರೀದಿಸಿದ್ದರು. ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಇದ್ದಾಗ ಈ ಜಾಗದಲ್ಲಿ ಗಿಡಗಳನ್ನು ನಡೆಸಿದ್ದಾರೆ. ಸಿಲ್ವರ್, ತೇಗ, ರಕ್ತಚಂದನ, ನಿಂಬೆ, ಹೆಬ್ಬೇವು, ಧಾಳಿಂಬೆ, ಕರಿಬೇವು, ಮಾವು, ಬೆಟ್ಟದ ನೆಲ್ಲಿಕಾಯಿ, ಹಲಸು, ಸೀಬೆ, ಗಸ್ ಗಸೆ, ಹೋಂಗೆ ಮರಗಳನ್ನು ಈ ಜಾಗದಲ್ಲಿ ನೋಡಬಹುದು, ತರಕಾರಿಯನ್ನು ಸಹ ಬೆಳೆಯಲಾಗುತ್ತಿದೆ. ಚಿಕ್ಕಣ್ಣ ಅವರಿಗೆ ಮೊದಲಿನಿಂದಲೂ ಇಷ್ಟವಾದ ಕೆಲಸವೆಂದರೆ ಕೃಷಿ ಮಾಡುವುದು. ಅವರು ತಮ್ಮ ಜಾಗದಲ್ಲಿ ಕುರಿ, ಶಿರಾ ಮತ್ತು ಭಂಡೂರಿ ಮೇಕೆ, ನಾಟಿ ಕೋಳಿ ಮತ್ತು ಖಡಕ್ ನಾಥ್ ಕೋಳಿ, ಹಸುಗಳನ್ನು ಸಾಕಿದ್ದಾರೆ ಹಾಗೆ ಅವುಗಳಿಗೆ ಮೇವನ್ನು ಕೂಡ ಬೆಳೆಸಿದ್ದಾರೆ. ಚಿಕ್ಕಣ್ಣ ಅವರು ಚಾಮುಂಡೇಶ್ವರಿ ದೇವಿಯ ಭಕ್ತ ಅದಕ್ಕಾಗಿ ಅವರು ತಮ್ಮ ಫಾರ್ಮ್ ಹೌಸ್ ಗೆ ಶ್ರೀ ಚಾಮುಂಡೇಶ್ವರಿ ಫಾರ್ಮ್ ಹೌಸ್ ಎಂದು ಹೆಸರಿಟ್ಟಿದ್ದಾರೆ. ಚಿಕ್ಕಣ್ಣ ಅವರು ಶೂಟಿಂಗ್ ಇಲ್ಲದಿರುವ ಸಮಯವನ್ನು ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿದ್ದರು.
ಚಿಕ್ಕಣ್ಣ ಅವರ ತಂದೆ ಪ್ರಾಣಿ ಪ್ರಿಯರಾಗಿದ್ದರು, ಅವರ ತಂದೆ ಈಗಿಲ್ಲ ಇದ್ದಿದ್ದರೆ ಚಿಕ್ಕಣ್ಣ ಅವರ ಫಾರ್ಮ್ ಹೌಸ್ ನೋಡಿ ಖುಷಿ ಪಡುತ್ತಿದ್ದರು. ತಂದೆ ತಾಯಿ ಇದ್ದಾಗ ನಾವು ಅವರನ್ನು ನೋಡಿಕೊಳ್ಳುವುದಿಲ್ಲ ಅವರು ಇಲ್ಲದಿದ್ದಾಗ ನೋವು ಪಡುತ್ತೇವೆ ಎಂದು ಚಿಕ್ಕಣ್ಣ ಅವರು ಹೇಳಿದರು. ಭೂಮಿಯನ್ನು ಖರೀದಿಸಿ ಅಲ್ಲಿ ಬೆಳೆದ ಬೆಳೆಯನ್ನು ನೋಡಿ ಖುಷಿಯಾಗುತ್ತದೆ, ಯಾವುದೇ ಟೆನ್ಷನ್ ಇದ್ದರೂ ಮಾಯವಾಗುತ್ತದೆ ಎಂದು ಹೇಳಿದರು. ದರ್ಶನ್ ಅವರ ಫಾರ್ಮ್ ಹೌಸ್ ನೋಡಿ ನಾವು ಹೀಗೆ ಮಾಡಬಹುದು ಎಂದು ಚಿಕ್ಕಣ್ಣ ಅವರು ಅಂದುಕೊಂಡರು. ಚಿಕ್ಕಣ್ಣ ಅವರು ಬ್ಯುಸಿ ಇದ್ದಾಗ ಅವರ ಫ್ರೆಂಡ್ ಈ ಜಾಗವನ್ನು ನೋಡಿಕೊಳ್ಳುತ್ತಾರೆ. ಚಿಕ್ಕಣ್ಣ ಅವರು ಬಹಳ ಚೆನ್ನಾಗಿ ಬಿರಿಯಾನಿ ಮಾಡುತ್ತಾರೆ. ಭೂಮಿಯಲ್ಲಿ ಬೆಳೆ ಬೆಳೆದು ಸಿಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ ಎಂಬುದು ಚಿಕ್ಕಣ್ಣ ಅವರನ್ನು ನೋಡಿ ತಿಳಿಯುತ್ತದೆ. ಚಿಕ್ಕಣ್ಣ ಅವರ ಕನಸಿನ ಪ್ರಪಂಚದಲ್ಲಿ ಅವರ ಆಸೆಯಂತೆ ಜೀವನ ನಡೆಸಲಿ ಎಂದು ಆಶಿಸೋಣ.