ಎಣ್ಣೆಯಲ್ಲಿ ಕರಿದ ಸಮೋಸ, ಪಾನಿಪುರಿ ಅಂದರೆ ಯಾರಿಗ ತಾನೇ ಇಷ್ಟ ಇಲ್ಲ. ಹೊರಗಡೆ ತಿನ್ನಲು ಆರೋಗ್ಯ ಹಾಳಾಗುತ್ತದೆ ಎಂಬ ಭಯ, ಅದರಲ್ಲೂ ಕೊರೋನ ವೈರಸ್ ಬಂದಿರುವುದರಿಂದ ಹೊರಗಡೆ ತಿನ್ನುವುದು ಭಯವಾಗಿದೆ. ಅದಕ್ಕಾಗಿ ಮನೆಯಲ್ಲೇ ಸುಲಭವಾಗಿ, ಆರೋಗ್ಯಕರವಾಗಿ ಈರುಳ್ಳಿ ಸಮೋಸ ಮಾಡಬಹುದು. ಹಾಗಾದರೆ ಈರುಳ್ಳಿ ಸಮೋಸ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಈರುಳ್ಳಿ ಸಮೋಸ ಮಾಡಲು ಬೇಕಾಗುವ ಸಾಮಗ್ರಿಗಳು ಮೈದಾ ಹಿಟ್ಟು, ಅವಲಕ್ಕಿ, ಈರುಳ್ಳಿ, ಹಸಿಮೆಣಸು, ಜೀರಿಗೆ, ಅರಿಶಿಣ, ಧನಿಯಾ ಪುಡಿ ಅಚ್ಚಖಾರದ ಪುಡಿ, ಉಪ್ಪು ಎಣ್ಣೆ. ಈರುಳ್ಳಿ ಸಮೋಸ ಮಾಡುವ ವಿಧಾನ. 2 ಕಪ್ ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟು ತೆಗೆದುಕೊಳ್ಳಬೇಕು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದಕ್ಕೆ ಎರಡು ಸ್ಪೂನ್ ಕಾಯಿಸಿದ ಎಣ್ಣೆಯನ್ನು ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಮೆತ್ತಗೆ ಕಲಿಸಿಕೊಳ್ಳಬೇಕು ಇದನ್ನು ಅರ್ಧ ಗಂಟೆ ನೆನೆಯಲು ಬಿಡಬೇಕು. ಒಂದು ಬೌಲ್ ನಲ್ಲಿ ಎರಡು ಸ್ಪೂನ್ ಮೈದಾಹಿಟ್ಟಿಗೆ 4-5 ಸ್ಪೂನ್ ನೀರು ಹಾಕಿ ಕಲೆಸಿಕೊಳ್ಳಬೇಕು. ಕಲಸಿ ನೆನೆಸಿಟ್ಟ ಮೈದಾ ಹಿಟ್ಟನ್ನು ತೆಗೆದುಕೊಂಡು ನಾದಿ ನಾಲ್ಕು ಭಾಗ ಮಾಡಿ ಒಂದು ಭಾಗವನ್ನು ತೆಳುವಾಗಿ ಲಟ್ಟಿಸಬೇಕು. ನಂತರ ಚೌಕಾಕಾರದಲ್ಲಿ ಕಟ್ ಮಾಡಬೇಕು. ಹೆಂಚನ್ನು ಕಾಯಿಸಿ 2-3 ಸೆಕೆಂಡ್ ಬೇಯಿಸಿಕೊಳ್ಳಬೇಕು. ಇದನ್ನು ಉದ್ದ 21 ಸೆ.ಮೀ ಅಗಲ 6 ಸೆ.ಮೀ ಇರುವಂತೆ ಕಟ್ ಮಾಡಿಕೊಳ್ಳಬೇಕು.
ಒಂದು ಬೌಲ್ ನಲ್ಲಿ ಸ್ಟೆಪ್ಪಿಂಗ್ ಅರ್ಧಕಪ್ ಮೀಡಿಯಂ ಅವಲಕ್ಕಿ, 2 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ, 4-5 ಹಸಿಮೆಣಸಿನಕಾಯಿ, ಸ್ವಲ್ಪ ಜೀರಿಗೆ, ಅರಿಶಿಣ, 1 ಸ್ಪೂನ್ ಅಚ್ಚಖಾರದ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಗರಂಮಸಾಲೆ ಬೇಕಿದ್ದರೆ ಹಾಕಿಕೊಳ್ಳಬಹುದು, ರುಚಿಗೆ ತಕ್ಕಷ್ಟು ಉಪ್ಪು, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮೈದಾ ಶೀಟ್ಸ್ ಗೆ ರೆಡಿ ಮಾಡಿಕೊಂಡ ಮೈದಾ ನೀರನ್ನು ಸ್ವಲ್ಪ ಸ್ವಲ್ಪ ಹಚ್ಚಿ ಸಮೋಸ ರೀತಿಯಲ್ಲಿ ಮಾಡಿ ಸ್ಟಪ್ಪಿಂಗ್ ಗೆ ಮಾಡಿಕೊಂಡ ಮಿಶ್ರಣವನ್ನು ಹಾಕಿ ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿ ಬೇಯಿಸಬೇಕು ಗೋಲ್ಡನ್ ಕಲರ್ ಬಂದನಂತರ ತೆಗೆಯಬೇಕು. ಹೀಗೆ ಮಾಡಿದರೆ ಎರಡು-ಮೂರು ದಿನ ಸ್ಟೋರ್ ಮಾಡಿ ತಿನ್ನಬಹುದು. ಹಸಿಮೆಣಸಿನಕಾಯಿಯನ್ನು ಇಷ್ಟಪಡುವವರು ಪಿನ್ ಅಥವಾ ಸೂಜಿಯಿಂದ ಅದರ ಮೇಲೆ ಸಣ್ಣ ಗೆರೆ ಎಳೆದು ಎಣ್ಣೆಯಲ್ಲಿ ಕರಿಯಬೇಕು ಇದನ್ನು ಸಮೋಸ ಜೊತೆ ತಿಂದರೆ ಸೂಪರ್ ಆಗಿರುತ್ತದೆ ಅಲ್ಲದೆ ಸಮೋಸವನ್ನು ಪುದೀನಾ ಚಟ್ನಿ ಜೊತೆ ತಿನ್ನಬಹುದು. ಹೊರಗಡೆ ಸಮೋಸ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲೇ ಟ್ರೈ ಮಾಡಿ.