ಗಟ್ಟಿಮೇಳ ಸೀರಿಯಲ್ ಹೆಚ್ಚು ನೋಡುಗರನ್ನು ಹೊಂದಿದ ಸೀರಿಯಲ್ ಎಂದರೆ ತಪ್ಪಾಗಲಿಕ್ಕಿಲ್ಲ. ಹೆಣ್ಣುಮಕ್ಕಳೇ ಇರುವ ಕುಟುಂಬವನ್ನು ಸೊಗಸಾಗಿ ಪ್ರಸ್ತುತಪಡಿಸಲಾಗುತ್ತಿದೆ. ಈ ಸೀರಿಯಲ್ ನಲ್ಲಿ ಪರಿಮಳ ಅವರ ಮೊದಲ ಮಗಳು ಆರ್ಥಿ ಎಲ್ಲರ ಮನಸನ್ನು ಸೆಳೆದಿದ್ದಾರೆ. ಅವರ ನಿಜವಾದ ಹೆಸರು ಏನು ಹಾಗೂ ಅವರ ಸೀರಿಯಲ್ ಪಯಣದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್ ಬಹಳ ಮಹಿಳೆಯರು, ಮಕ್ಕಳು ಪ್ರತಿದಿನ ನೋಡುತ್ತಾರೆ. ಪೂಜೆ ಮಾಡುವಾಗ ನೆನಪಾಗುವ ಗಟ್ಟಿಮೇಳ ಸೀರಿಯಲ್ ಆರ್ಥಿ ಸೈಲೆಂಟ್ ಹುಡುಗಿ. ಗಟ್ಟಿಮೇಳ ಸೀರಿಯಲ್ ಆರ್ಥಿ ಅವರ ನಿಜವಾದ ಹೆಸರು ಅಶ್ವಿನಿ. ಅವರಿಗೆ ದಾವಣೆಗೆರೆ ಬೆಣ್ಣೆದೋಸೆ ಅಂದರೆ ಬಹಳ ಇಷ್ಟ, ಮಂಡಕ್ಕಿ ಮೆಣಸಿನಕಾಯಿ ಬಜ್ಜಿ ಎಂದರೆ ಪಂಚಪ್ರಾಣ. ಆದರೆ ಇವರ ಸೀರಿಯಲ್ ಗೆ ಸೆಲೆಕ್ಟ್ ಆದ ಅವರ ಸೀರಿಯಲ್ ಪಯಣ ಸುಲಭವಾಗಿರಲಿಲ್ಲ. ಅವರು ಚಿಕ್ಕ ವಯಸ್ಸಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿದ್ದರು. ಜನರು ಗುರುತಿಸುವ ವರ್ಕ್ ಮಾಡಬೇಕು ಎಂಬ ಆಸೆ ಇತ್ತು. ಮೊದಲು ಲೋಕಲ್ ಚಾನೆಲ್ ಒಂದರಲ್ಲಿ ಆಂಕರಿಂಗ್ ಮಾಡುತ್ತಿದ್ದರು. ವರ್ಕ್ ಮಾಡುತ್ತಿರುವಾಗ ಸೀರಿಯಲ್ ಆಡಿಷನ್ ಕೊಡುತ್ತಿದ್ದರು. ಸುಮಾರು 150-200 ಸೀರಿಯಲ್ ಗಳಿಗೆ ಆಡಿಷನ್ ಕೊಟ್ಟಿದ್ದರು. ಕೆಲವೊಮ್ಮೆ ಭರವಸೆ ಕಳೆದುಕೊಂಡಿದ್ದಾರೆ ಆದರೆ ಅವರು ಎಷ್ಟೇ ಆಡಿಷನ್ ಆಗಲಿ ಒಂದು ಸಲ ಆದರೂ ಸೆಲೆಕ್ಟ್ ಆಗಬಹುದು ಎಂಬ ಭರವಸೆಯಿಂದ ಆಡಿಷನ್ ಕೊಡುತ್ತಾರೆ. ರಾಧಾ ರಮಣ ಧಾರಾವಾಹಿಯಲ್ಲಿ ತಂಗಿ ಪಾತ್ರದಲ್ಲಿ ನಟಿಸಲು ಅವಕಾಶ ದೊರೆಯಿತು, ಇದರಿಂದ ಬಹಳ ಖುಷಿಪಡುತ್ತಾರೆ. ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿ ಒಂದು ವರ್ಷ ಮುಖ ತೋರಿಸಲಿಲ್ಲ. ಯಾರಿಗಾದರೂ ನಟನೆ ಮಾಡುತ್ತಿರುವ ಬಗ್ಗೆ ಹೇಳಿದರೆ ಯಾವ ಸೀರಿಯಲ್, ನಿನ್ನ ಮುಖವೇ ಕಾಣುವುದಿಲ್ಲ ಎಂದು ಹೇಳುತ್ತಿದ್ದರು. ಈ ಸಮಯದಲ್ಲಿ ಅವಮಾನಗಳು ಆಯಿತು. ನಂತರ ಮುಖ ತೋರಿಸಿದರು ಒಳ್ಳೆಯ ಸ್ಪಂದನೆ ಸಿಕ್ಕಿತು. ನಂತರ ಗಟ್ಟಿಮೇಳ ಧಾರಾವಾಹಿಯಲ್ಲಿ ಆರ್ಥಿಯಾಗಿ ನಟಿಸಲು ಅವಕಾಶ ದೊರೆಯಿತು.

ಗಟ್ಟಿಮೇಳ ಧಾರಾವಾಹಿಯಲ್ಲಿ ದೊಡ್ಡ ಮಗಳಾಗಿ ಮೂರು ಜನರಿಗೆ ಅಕ್ಕನ ಪಾತ್ರ, ಈ ಪಾತ್ರ ಚಾಲೆಂಜಿಂಗ್ ಆಗಿತ್ತು. ಅಶ್ವಿನಿ ಅವರು ಯಾವುದೇ ಪಾತ್ರ ಮಾಡುತ್ತಾರೆ ಆದರೆ ಆ ಪಾತ್ರ ವ್ಯಾಲ್ಯೂ ಹೊಂದಿರಬೇಕು ಎಂದು ಅಶ್ವಿನಿ ಅವರು ಹೇಳಿದರು. ಗಟ್ಟಿಮೇಳ ಧಾರಾವಾಹಿಯಿಂದ ಒಳ್ಳೆಯ ಹೆಸರು ಸಿಕ್ಕಿದೆ, ಜನರು ನನ್ನನ್ನು ಗುರುತಿಸಿತ್ತಾರೆ, ನನಗೆ ಖುಷಿಯಾಗುತ್ತದೆ ಎಂದು ಅಶ್ವಿನಿ ಅವರು ಹೇಳಿದರು. ನಂತರ ತೆಲುಗು ಭಾಷೆಯ ಒಂದು ಸೀರಿಯಲ್ ನಲ್ಲಿ ಅವಕಾಶ ದೊರೆಯಿತು. ಅವರಿಗೆ ಪೌರಾಣಿಕ ಪಾತ್ರ ಮಾಡುವ ಆಸೆ ಇತ್ತು ಅದರಂತೆ ತೆಲುಗು ಭಾಷೆಯ ಸೀರಿಯಲ್ ನಲ್ಲಿ ಸಿಕ್ಕ ಪಾತ್ರ ಅಶ್ವಿನಿ ಅವರಿಗೆ ಬಹಳ ಖುಷಿ ಕೊಟ್ಟಿದೆ. ಅಶ್ವಿನಿ ಅವರು ಇನ್ನು ಹೆಚ್ಚಿನ ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆಯಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!