ಮನುಷ್ಯ ಅಂದ ಮೇಲೆ ಅವನಿಗೆ ವಾಸಿಸಲು ಮನೆ ಬೇಕೇ ಬೇಕು. ಕೆಲವರು ತಮ್ಮ ಜಮೀನಿನ ಆದಾಯದಿಂದ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಜಮೀನು ಇರುವುದಿಲ್ಲ. ಹಾಗೆಯೇ ಒಳ್ಳೆಯ ಆದಾಯ ನೀಡುವ ಕೆಲಸ ಸಹಿತ ಇರುವುದಿಲ್ಲ. ಹಾಗಾಗಿ ಇಂತಹವರಿಗೆ ಸರ್ಕಾರವು ಮನೆಯನ್ನು ಕಟ್ಟಿಸಿಕೊಡುವ ಯೋಜನೆಯನ್ನು ಹೊಂದಿದೆ. ಆದ್ದರಿಂದ ನಾವು ಇಲ್ಲಿ ಸರ್ಕಾರದ ಯೋಜನೆಯಿಂದ ಅತಿ ಸುಂದರವಾದ ಮನೆಯನ್ನು ಕಟ್ಟಿ ಪ್ರಶಸ್ತಿಯನ್ನು ಪಡೆದವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೋಟೆಯ ಜಿಲ್ಲೆ ಎಂದು ಚಿತ್ರದುರ್ಗವನ್ನು ಕರೆಯುತ್ತಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ವೆಂಕಟೇಶ್ವರ ಬಡಾವಣೆಯಲ್ಲಿ ಒಂದು ಕುಟುಂಬ ವಾಸವಿದೆ. ಈ ಕುಟುಂಬವು 15 ವರ್ಷಗಳ ಹಿಂದೆ ಇಲ್ಲಿಗೆ ಬಂದಿದೆ. ಚೆನ್ನಬಸಪ್ಪ ಮತ್ತು ಪಂಕಜಾ ಎನ್ನುವ ವ್ಯಕ್ತಿಗಳು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಇಲ್ಲಿಗೆ ಬಂದಿದ್ದರು. ಇವರು ಸಣ್ಣದಾಗಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಇವರಿಗೆ ಹೊಸ ಮನೆಯನ್ನು ಕಟ್ಟಬೇಕು ಎನ್ನುವುದು ದೊಡ್ಡ ಕನಸಾಗಿತ್ತು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಇವರಿಗೆ ಮನೆಯನ್ನು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರ 1ವರೆ ಲಕ್ಷವನ್ನು ನೀಡಿದೆ. ಹಾಗೆಯೇ ರಾಜ್ಯ ಸರ್ಕಾರ 1ಲಕ್ಷದ 20,000 ರೂಪಾಯಿಗಳನ್ನು ನೀಡಿದೆ. 20 ಮತ್ತು 30ರ ಅಡಿಯಲ್ಲಿ ಅತಿ ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ. ಅತ್ಯುತ್ತಮ ಮನೆ ನಿರ್ಮಾಣ ಪ್ರಶಸ್ತಿಗೆ ಇವರ ಮನೆ ಆಯ್ಕೆಯಾಗಿದೆ. ಇದು ಎರಡನೇ ಸ್ಥಾನವನ್ನು ಪಡೆದಿದೆ. ಡಿ.ಸಿ. ಕಛೇರಿಗೆ ಆಗಮಿಸಿ ಆನ್ಲೈನ್ ಮೂಲಕ ಮೋದಿಯವರಿಂದ ಪ್ರಶಂಸೆಯನ್ನು ಪಡೆದಿದ್ದಾರೆ.
ಇದರಿಂದ ಬಹಳ ಪ್ರಯೋಜನವಾಗಿದೆ. ಸರ್ಕಾರ ಕೊಟ್ಟ ಸಾಲದಿಂದ ಒಂದು ಚಿಕ್ಕ ಮನೆಯಾದರೂ ಸರಿ ಕಟ್ಟಿಕೊಳ್ಳಬೇಕು ಎಂಬ ಆಸೆ ಇತ್ತು. ಈಗ ಅದು ನೆರವೇರಿದೆ. ಬಹಳ ಸಂತೋಷವಾಗುತ್ತಿದೆ ಎಂದು ಪಂಕಜಾ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಮನೆಯು ಈಗಿನ ಆಧುನಿಕತೆಯನ್ನು ಹೊಂದಿದ್ದು ಮನೆಯ ಬಾಗಿಲು, ಕಿಟಕಿಗಳು, ಅಡುಗೆ ಮನೆ ಎಲ್ಲವನ್ನು ಆಧುನಿಕವಾಗಿ ಹೇಗೆ ಇರಬೇಕೋ ಹಾಗೆ ಮಾಡಿಕೊಂಡಿದ್ದಾರೆ. ಆದ್ದರಿಂದ ನೀವು ಸಹ ಹಳೆಯ ಮನೆಯಲ್ಲಿ ವಾಸವಾಗಿದ್ದರೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.