ಕನ್ನಡ ಚಿತ್ರರಂಗದ ಮಾಣಿಕ್ಯ ವರ ನಟ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಹಲವು ಕೊಡುಗೆಯನ್ನು ನೀಡಿದ್ದಾರೆ. ರಾಜಕುಮಾರ್ ಅವರ ಸಿನಿಮಾಗಳನ್ನು ಜನರು ಇಂದಿಗೂ ನೋಡುತ್ತಾರೆ ಅವರ ಸಿನಿಮಾದ ಹಾಡುಗಳು ಇಂದಿಗೂ ಪ್ರಸಿದ್ಧವಾಗಿದೆ. ಡಾಕ್ಟರ್ ರಾಜಕುಮಾರ್ ಅವರು ಅಪಾರ ಬಂಧು-ಬಳಗವನ್ನು ಹೊಂದಿದ್ದರು. ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಡಾಕ್ಟರ್ ರಾಜಕುಮಾರ್ ಅವರ ಕುಟುಂಬವು ಕನ್ನಡ ಚಿತ್ರರಂಗದಲ್ಲಿ ದೊಡ್ಡಮನೆ ಕುಟುಂಬ ಎಂದೇ ಹೆಸರಾಗಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ವರ ನಟ, ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದಿಂದ ಅವರ ಮಕ್ಕಳು, ಮೊಮ್ಮಕ್ಕಳು, ಮೈದುನರು ನಟರಾಗಿ, ನಿರ್ಮಾಪಕರಾಗಿ ಹೀಗೆ ಸಿನಿಮಾರಂಗದಲ್ಲಿ ಹಲವು ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ.‌ ಡಾಕ್ಟರ್ ರಾಜಕುಮಾರ್ ಅವರ ದೊಡ್ಡಮನೆ ಕುಟುಂಬವಾದರೂ ಬಹಳ ಸರಳ ವ್ಯಕ್ತಿತ್ವವನ್ನು ಹೊಂದಿದ್ದರು ಹಾಗೂ ಅವರ ಸಿನಿಮಾಗಳು ಬಹಳ ಅರ್ಥಪೂರ್ಣವಾಗಿ ಜನರ ಮನಸ್ಸಿಗೆ ತಟ್ಟುತ್ತಿತ್ತು.‌ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಆಲದ ಮರದಂತೆ ತನ್ನ ಕಾರ್ಯನಿರ್ವಹಿಸಿದೆ ಆದ್ದರಿಂದ ಈ ಕುಟುಂಬವನ್ನು ಕನ್ನಡ ಚಿತ್ರರಂಗದಲ್ಲಿ ಹೆಮ್ಮೆಯಿಂದ ದೊಡ್ಡಮನೆ ಕುಟುಂಬ ಎಂದು ಕರೆಯಲಾಗುತ್ತದೆ. ಡಾಕ್ಟರ್ ರಾಜಕುಮಾರ್ ಅವರ ಮೂವರು ಮಕ್ಕಳಾದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಹಾಗೂ ರಾಘವೇಂದ್ರ ರಾಜಕುಮಾರ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು ಲಕ್ಷ್ಮೀ ಮತ್ತು ಪೂರ್ಣಿಮಾ. ರಾಜಕುಮಾರ್ ಅವರ ಹಿರಿಯ ಮಗಳಾದ ಲಕ್ಷ್ಮೀ ಅವರು ನಿರ್ಮಾಪಕರಾದ ಗೋವಿಂದರಾಜು ಅವರನ್ನು ಮದುವೆಯಾಗಿದ್ದಾರೆ. ಗೋವಿಂದರಾಜು ಅವರು ಭಕ್ತ ಪ್ರಹ್ಲಾದ, ಒಲವು ಗೆಲುವು ಜ್ವಾಲಾಮುಖಿ, ಹೊಸಬೆಳಕು ಹೀಗೆ ಹಿಟ್ಟಾದ ಹಲವು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಪೂರ್ಣಿಮಾ ಅವರು ಕನ್ನಡ ಚಿತ್ರರಂಗದ ಫೇಮಸ್ ನಟನಾದ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ. ತೊಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೋ ಎಂದು ರಾಮ್ ಕುಮಾರ್ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರ ಕುಟುಂಬದಲ್ಲಿ ಎಲ್ಲರೂ ಅನ್ಯೋನ್ಯವಾಗಿ, ಪ್ರೀತಿಯಿಂದ, ಕಾಳಜಿಯಿಂದ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಅವರ ಮಕ್ಕಳು, ಮೊಮ್ಮಕ್ಕಳು ರಾಜಕುಮಾರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದಾರೆ.‌ ಡಾಕ್ಟರ್ ರಾಜ್ ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹೇಳಿಕೊಟ್ಟ ಮಾರ್ಗದರ್ಶನ ಹಾಗೂ ಅವರ ಸರಳ ಜೀವನಶೈಲಿ ಇಂದಿಗೂ ಮಾದರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!