LPG ಸಿಲಿಂಡರ್ ಮನೆ ಡೆಲಿವರಿಗೆ ಗ್ರಾಹಕರು ಶುಲ್ಕ ಕೊಡಬೇಕಿಲ್ಲ, ಎಷ್ಟೇ ಮಹಡಿ ಇದ್ದರೂ ಫ್ರೀ ಡೆಲಿವರಿ! ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್‌ಗಳು 30, 40, 50 ರು.ಗಳನ ಮನೆಗೆ ಗ್ಯಾಸ್ ಸಿಲಿಂಡರ್ ಕೊಡುವ ಡೆಲಿವರಿ ಬಾಯ್‌ಗಳು 30, 40, 50 ರು.ಗಳನ್ನು ಡೆಲಿವರಿ ಚಾರ್ಜ್ ಎಂದು ಹೇಳಿ ಪಡೆಯುವುದು ಮಾಮೂಲು. ಆದರೆ, ಗ್ರಾಹಕರು ಡೆಲಿವರಿ ಬಾಯ್‌ಗಳಿಗೆ ಈ ಹಣ ಕೊಡುವ ಅವಶ್ಯಕತೆ ಇಲ್ಲ ಎಂದು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೆಷನ್ (HPCL) ಕಂಪನಿ ಹೇಳಿದೆ. ಕರೀಂ ಅನ್ಸಾರಿ ಎಂಬ ಹೈದರಾಬಾದ್ ನಿವಾಸಿ ಎಚ್‌ಪಿಸಿಎಲ್‌ಗೆ ಇತ್ತೀಚೆಗೆ ಮಾಹಿತಿ ಹಕ್ಕು (ಆರ್‌ಟಿಐ) ಮೂಲಕ ಅರ್ಜಿ ಸಲ್ಲಿಸಿ, ನನಗೆ ಸಿಲಿಂಡರ್(LPG Cylinder) ಡೆಲಿವರಿ ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದ. ಇದು ನಿಯಮದಲ್ಲಿದೆಯೇ? ಎಂದು ಪ್ರಶ್ನಿಸಿದ್ದರು. ಸಿಲಿಂಡರ್ ತಂದು ಕೊಡುವ ವ್ಯಕ್ತಿಯು ಬಿಲ್‌ಗಿಂತಲೂ ಹೆಚ್ಚಿನ ಹಣ ಕೇಳಿದರೆ, ಗ್ರಾಹಕರು ನಿರಾಕರಿಸಬೇಕು, ಎಂದು ಎಚ್‌ಪಿಸಿಎಲ್ ಹೇಳಿದೆ. ಕೆಲವೆಡೆ ಸಿಲಿಂಡರ್ ಮನೆ ಡೆಲಿವರಿಗೆ ವಿತರಕರು ಹಣ ಪಡೆಯುತ್ತಾರೆ ಎನ್ನುವ ಆರೋಪವಿದೆ. ಇದೀಗ ಈ ಆರೋಪಕ್ಕೆ ಸ್ಪಷ್ಟನೆ ಸಿಕ್ಕಿದಂತೆ ಆಗಿದೆ.
ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ವ್ಯಕ್ತಿಗೆ ಗ್ರಾಹಕರು ಡೆಲಿವರಿ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊ-ರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಹೇಳಿದೆ. ಇದು ಈ ಕಂಪನಿ ಮಾತ್ರವಲ್ಲ, ಇತರೆ ಎಲ್ಲ ಕಂಪನಿಗಳ ಗ್ರಾಹಕರಿಗೂ ಅನ್ವಯವಾಗುತ್ತದೆ. ಇದಕ್ಕೆ ಉತ್ತರಿಸಿರುವ ಎಚ್‌ಪಿಸಿಎಲ್, ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿ. ಆ ಕಟ್ಟಡ/ಅಪಾರ್ಟ್‌ಮೆಂಟ್ ಅಥವಾ ಫ್ಲ್ಯಾಟ್ ಯಾವುದೇ ಅಂತಸ್ತಿನಲ್ಲಿ ಇರಲಿ ಡೆಲಿವರಿ ಬಾಯ್‌ಗಳು ಯಾವುದೇ ಹೆಚ್ಚುವರಿ ಹಣ ಪಡೆಯದೇ ತಲುಪಿಸಬೇಕು. ಕೇವಲ ಬಿಲ್‌ನಲ್ಲಿರುವಷ್ಟುಹಣ ಮಾತ್ರ ಪಡೆಯಬೇಕು. ಒಂದು ವೇಳೆ ಡೆಲಿವರಿ ಬಾಯ್ ಹೆಚ್ಚು ಹಣ ಕೇಳಿದರೆ ನಿರಾಕರಿಸಬಹುದು ಎಂದು ಸ್ಪಷ್ಟಪಡಿಸಿದೆ.
ಸಿಲಿಂಡರ್ ತಂದು ಕೊಡುವ ವ್ಯಕ್ತಿಯು ಬಿಲ್‌ಗಿಂತಲೂ ಹೆಚ್ಚಿನ ಹಣ ಕೇಳಿದರೆ, ಗ್ರಾಹಕರು ನಿರಾಕರಿಸಬೇಕು,” ಎಂದು ಎಚ್‌ಪಿಸಿಎಲ್ ಹೇಳಿದೆ. ಕೆಲವೆಡೆ ಸಿಲಿಂಡರ್ ಮನೆ ಡೆಲಿವರಿಗೆ ವಿತರಕರು ಹಣ ಪಡೆಯುತ್ತಾರೆ ಎನ್ನುವ ಆರೋಪವಿದೆ. ಇದೀಗ ಈ ಆರೋಪಕ್ಕೆ ಸ್ಪಷ್ಟನೆ ಸಿಕ್ಕಿದಂತೆ ಆಗಿದೆ.