ಶರೀರದ ಮೂಳೆಗಳಿಗೆ ಬಲ ನೀಡುವ ಜೊತೆಗೆ ಕ್ಯಾಲ್ಸಿಯಂ ಕೊರತೆ ನಿವಾರಿಸುವ ಮನೆಮದ್ದು

0 1

ಮನುಷ್ಯ ಆರೋಗ್ಯವಂತನಾಗಿ ಇರಬೇಕೆಂದರೆ ದೇಹದ ಮೂಳೆಗಳು ಗಟ್ಟಿಮುಟ್ಟಾಗಿರಬೇಕು. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದರೆ ಮೂಳೆಗಳ ಬಲ ಕುಗ್ಗುತ್ತದೆ. ಇದರಿಂದ ಕೀಲು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕ್ಯಾಲ್ಸಿಯಂ ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಸ್ನಾಯು ಸಮಸ್ಯೆಗೆ ಪರಿಹಾರ ಕಾಣಬಹುದು. ಅಸ್ತಿ , ಮಜ್ಜ , ಸಾರ ಇವುಗಳಿಗೆ ಪೋಷಣೆ ನೀಡಿ ನಮ್ಮ ದೇಹದ ಮೂಳೆಗಳನ್ನು ಬಲಿಷ್ಟಗೊಳಿಸುವ ಮಾಂಸ ಖಂಡಗಳಿಗೆ ಉತ್ತಮ ಶಕ್ತಿ ನೀಡುವ ಒಂದು ಔಷಧೀಯ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹಳವಿ ಬೀಜ ಇದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೇವೆ. ಇದನ್ನು ನಮ್ಮ ಮೂಳೆಗಳನ್ನು ಬಲಿಷ್ಟ ಗೊಳಿಸುವ ಸಲುವಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಳಕೆ ಮಾಡಬಹುದು. ಇದನ್ನು ಪ್ರತೀ ಬಾರಿ ಒಂದು ಚಮಚದಷ್ಟು ಹಳವಿ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ತೆಗೆದುಕೊಳ್ಳಬೇಕು ಹಾಗೂ ಬೆಳಿಗ್ಗೆ ನೀರಿನಲ್ಲಿ ನೆನೆಸಿಟ್ಟು ರಾತ್ರಿ ತೆಗೆದುಕೊಳ್ಳಬೇಕು. ಈ ರೀತಿಯಾಗಿ ಸತತವಾಗಿ ಮೂರು ತಿಂಗಳುಗಳ ತೆಗೆದುಕೊಂಡರೆ ಮೂಳೆಗಳಿಗೆ ಸಂಬಂಧಿಸಿದ ಯಾವುದೇ ನೋವು , ಸೊಂಟ ನೋವು , ಕುತ್ತಿಗೆ ನೋವು , ಮೊಣಕಾಲು ನೋವು ಇದ್ಯಾವುದೂ ಸಹ ಇರುವುದಿಲ್ಲ. ಅದರಲ್ಲಿಯೂ ಸಹ ಬಾಣಂತಿಯರು , ಗರ್ಭಿಣಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ತಿಂಗಳ ಮುಟ್ಟಿನ ಸಮಯದಲ್ಲಿ , ಮುಟ್ಟು ನಿಲ್ಲುವ ಸಮಯದಲ್ಲಿ ಸಹ ತೆಗೆದುಕೊಳ್ಳಬೇಕು. ಮುಟ್ಟು ನಿಲ್ಲುವ ಸಂದರ್ಭದಲ್ಲಿ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗಿ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಬಹಳ ಬರುತ್ತವೆ. ಅಂತವರು ಈ ಹಳವಿ ಬೀಜವನ್ನು ಪ್ರತೀ ದಿನ ಬೆಳಿಗ್ಗೆ ಸಂಜೆ ಮೂರು ತಿಂಗಳುಗಳ ಕಾಲ ತೆಗೆದುಕೊಳ್ಳಬೇಕು.

ಮಹಿಳೆಯರಿಗೆ ಅಂತೂ ಈ ಹಳವಿ ಬೀಜ ಬಹಳ ಪ್ರಯೋಜನಕಾರಿ ಎನ್ನಬಹುದು. ಬೆಳೆಯುವ ಮಕ್ಕಳಿಗೂ ಸಹ ಈ ಹಳವಿ ಬೀಜವನ್ನು ನೀಡಬಹುದು. ಇದು ಒಂದು ಬೀಜ ಆಗಿರುವುದರಿಂದ ಪ್ರತೀ ನಿತ್ಯ ತೆಗೆದುಕೊಂಡರೂ ಸಹ ಯಾವುದೇ ಸಮಸ್ಯೆ ಅಥವಾ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಪ್ರತೀ ದಿನ ಒಂದು ಚಮಚ ಇದರ ಬಳಕೆ ಬಹಳ ಉತ್ತಮ.

ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದೇಹದ ಇತರ ಭಾಗಗಳಂತೆ ನಮ್ಮ ದೇಹದಲ್ಲಿನ ಅಸ್ಥಿಪಂಜರದ ವ್ಯವಸ್ಥೆಯ ಪಾತ್ರ ಮುಖ್ಯವಾಗಿದೆ. ಮೂಳೆಗಳು ನಮ್ಮ ದೇಹಕ್ಕೆ ಒಂದು ರಚನೆಯನ್ನು ಒದಗಿಸುತ್ತವೆ. ಅದೇ ಸಮಯದಲ್ಲಿ ಅವು ದೇಹದಲ್ಲಿನ ಕೆಲವು ಪ್ರಮುಖ ಅಂಗಗಳನ್ನು ಸಹ ರಕ್ಷಿಸುತ್ತವೆ. ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳನ್ನು ಸಂಗ್ರಹಿಸಲು ಮತ್ತು ಸ್ನಾಯುಗಳನ್ನು ಉತ್ತೇಜಿಸಲು ಮೂಳೆಗಳು ಸಹಕಾರಿ. ಬಾಲ್ಯದಿಂದ ವೃದ್ಧಾಪ್ಯದವರೆಗೆ ಅವುಗಳಲ್ಲಿ ಹಲವು ಬದಲಾವಣೆಗಳಿವೆ. 30 ನೇ ವಯಸ್ಸಿಗೆ, ಮೂಳೆ ದ್ರವ್ಯರಾಶಿ ಸಾಂದ್ರತೆಯು ಉತ್ತುಂಗಕ್ಕೇರುತ್ತದೆ. ಹಾಗೆಯೇ ವಯಸ್ಸಾದಂತೆ ಮೂಳೆಗಳಲ್ಲಿ ಈ ದ್ರವ್ಯರಾಶಿಯ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತದೆ, ಇದು ಆಸ್ಟಿಯೊಪೊರೋಸಿಸ್ ಸ್ಥಿತಿಗೆ ಕಾರಣವಾಗುತ್ತದೆ. ನಮಗೆ ವಯಸ್ಸಾದಂತೆ ಈ ರೀತಿಯ ಬೆಳವಣಿಗೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಟೊಳ್ಳಾಗುತ್ತವೆ. ಈ ಸಂದರ್ಭದಲ್ಲಿ, ಯಾವುದೇ ಕಾರಣಕ್ಕಾಗಿ ಮೂಳೆ ಮುರಿದುಹೋದರೆ, ನಂತರ ಅವುಗಳನ್ನು ಮತ್ತೆ ಸೇರಲು ತುಂಬಾ ಕಷ್ಟವಾಗುತ್ತದೆ. ಅಂಕಿಅಂಶಗಳ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸಣ್ಣ ಪುಟ್ಟ ಏಟಾದ ಸಂದರ್ಭದಲ್ಲೂ ಮೂಳೆ ಮುರಿಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. 50 ವರ್ಷ ದಾಟಿದ ಬಳಿಕ ಇಬ್ಬರು ಮಹಿಳೆಯರಲ್ಲಿ ಇಬ್ಬರು ಮತ್ತು ನಾಲ್ಕು ಪುರುಷರಲ್ಲಿ ಒಬ್ಬರಲ್ಲಿ ಇಂತಹ ಮೂಳೆ ಮುರಿಯುವ ಸಾಧ್ಯತೆಯಿದೆ ಎಂದು ಕೆಲವು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಕಾರಣ ವಯಸ್ಸಾದಂತೆ ಅವರು ಆಸ್ಟಿಯೊಪೊರೋಸಿಸ್ ನಿಂದ ಬಳಲುತ್ತಿರುತ್ತಾರೆ. ಈ ಸಂದರ್ಭದಲ್ಲಿ, ಅದರ ಬಗ್ಗೆ ಸರಿಯಾದ ಕಾಳಜಿ ಬಹಳ ಮುಖ್ಯ.

Leave A Reply

Your email address will not be published.