ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮು ಎಲ್ಲರಿಗೂ ಆಗುತ್ತದೆ. ಅದರಲ್ಲಿ ನೆಗಡಿ ಕೆಲವರಿಗೆ ಆಗುವುದೇ ಇಲ್ಲ. ಹಾಗೆಯೇ ಕೆಲವರಿಗೆ ವಾತಾವರಣಕ್ಕೆ ನೆಗಡಿ ಅಥವಾ ಕೆಮ್ಮುಗಳು ಉಂಟಾಗಬಹುದು. ಇದನ್ನು ಕಡಿಮೆಮಾಡಿಕೊಳ್ಳಲು ಇಂಗ್ಲೀಷ್ ಮಾತ್ರಗಳನ್ನು ಬಳಸಬಾರದು. ಏಕೆಂದರೆ ಇವುಗಳು ಆರೋಗ್ಯಕ್ಕೆ ಹಾನಿಕರ. ಆದಷ್ಟು ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಬೇಕು. ಆದ್ದರಿಂದ ನಾವು ಇಲ್ಲಿ ನೆಗಡಿಗೆ ಒಂದು ಸರಳವಾದ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಯಾವುದೇ ರೀತಿಯ ರೋಗ ಉಂಟಾದರೂ ಮೊದಲನೆಯದಾಗಿ ಮನೆಯ ಮದ್ದನ್ನು ಮಾಡಬೇಕು. ಏಕೆಂದರೆ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿ ಹಾನಿ ಇರುವುದಿಲ್ಲ. ಹಾಗೆಯೇ ಮನೆಯಲ್ಲಿರುವ ವಸ್ತುಗಳು ಶುದ್ಧವಾಗಿರುತ್ತದೆ. ಯಾವುದೇ ರೀತಿಯ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಮನೆಮದ್ದುಗಳು ಎಂದರೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಔಷಧಿಗಳನ್ನು ತಯಾರಿಸಿಕೊಳ್ಳುವುದು ಎಂದರ್ಥ. ಇದು ನಮ್ಮ ಹಿರಿಯರು ನಮಗೆ ಹೇಳಿಕೊಟ್ಟ  ಸಲಹೆ ಎಂದು ಹೇಳಬಹುದು.

ಮೊದಲು ವೀಳ್ಯದೆಲೆಯನ್ನು ತೆಗೆದುಕೊಳ್ಳಬೇಕು. ವೀಳ್ಯದೆಲೆ ನಾಟಿಯನ್ನು ಹಾಕಬೇಕು. ಹಾಗೆಯೇ ನಂತರದಲ್ಲಿ ನಾಲ್ಕು ತುಳಸಿ ಎಲೆಯನ್ನು ತೆಗೆದುಕೊಳ್ಳಬೇಕು. ತುಳಸಿಯಲ್ಲಿ ಹಸಿರು ತುಳಸಿಯನ್ನು ತೆಗೆದುಕೊಳ್ಳಬೇಕು. ನಂತರ ನಾಲ್ಕು ಕಾಳುಮೆಣಸನ್ನು ತೆಗೆದುಕೊಳ್ಳಬೇಕು. ನಂತರ ಚಿಕ್ಕದಾದ ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಈರುಳ್ಳಿ ಸಾಂಬಾರ್ ಈರುಳ್ಳಿ ಆದರೆ ಬಹಳ ಒಳ್ಳೆಯದು. ಇವೆಲ್ಲವುಗಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಇವು ಈ ಮನೆಮದ್ದಿಗೆ ಬೇಕಾಗುತ್ತದೆ.

ಅದಕ್ಕೆ ನಾಲ್ಕು ತುಳಸಿ ಹಾಗೆಯೇ ಅದಕ್ಕೆ ನಾಲ್ಕು ಕಾಳುಮೆಣಸು ಅದರ ಜೊತೆ ಚಿಕ್ಕದಾದ ಸಾಂಬಾರ್ ಈರುಳ್ಳಿಯನ್ನು ಹಾಕಿ ಕವಳದಂತೆ ಮಾಡಿ ಚೆನ್ನಾಗಿ ಉಗಿಯಬೇಕು. ಇದರಿಂದ ಹಲವಾರು ಪ್ರಯೋಜನಗಳಿವೆ ಯಾವುದೇ ರೀತಿಯ ಉಸಿರಾಟದ ತೊಂದರೆಗಳು ಇದ್ದರೆ ಇದರಿಂದ ಕಡಿಮೆಯಾಗುತ್ತದೆ. ಹಾಗೆಯೇ ಶೀತ, ಕೆಮ್ಮು, ಮಲಬದ್ಧತೆಗಳು ಸಹ ದೂರವಾಗುತ್ತದೆ. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ಇಂತಹ ಮನೆಮದ್ದುಗಳನ್ನು ಮಾಡಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!