ಸ್ಯಾಂಡಲ್‌ವುಡ್ ನಟ ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಪುತ್ರನ ತೊಟ್ಟಿಲು ಶಾಸ್ತ್ರವು ಬೆಂಗಳೂರಿನ ಮೇಘನಾ ತವರುಮನೆಯಲ್ಲಿಯೇ ನಡೆದಿದ್ದು , ಈಗ ಚಿರು ಹಾಗೂ ಮೇಘನಾ ಮಗುವಿಗೆ ನಾಮಕರಣ ಶಾಸ್ತ್ರವನ್ನು ಮಾಡಲಾಗುತ್ತಿದೆ. ಕೊರೊನಾ ಕಂಠಕವನ್ನ ಎದುರಿಸಿದ್ದ ಮೇಘಾನ ಸರ್ಜಾ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸುಂದರ್ರಾಜ್ ಮೊಮ್ಮಗನಿಗೆ ಅದ್ದೂರಿಯಾಗಿ ನಾಮಕರಣ ಮಾಡಲು ಸದ್ದಿಲ್ಲದೇ ಪ್ಲಾನ್ ಮಾಡಿದ್ದಾರೆ.
ಮಗನ ತೊಟ್ಟಿಲು ಶಾಸ್ತ್ರದ ಸಮಯದಲ್ಲಿ ತುಂಬ ದಿನಗಳ ನಂತರ ಕ್ಯಾಮರಾ ಮುಂದೆ ಬಂದ ಮೇಘನಾ ಎಲ್ಲರೂ ಯಾಕೆ ಮಾಧ್ಯಮದ ಮುಂದೆ ಬಂದು ಮಾತನಾಡುತ್ತಿಲ್ಲ? ಇನ್ನೊಂದಿಷ್ಟು ದಿನ ಟೈಮ್ ಬೇಕಾ ಅಂತ ಕೇಳುತ್ತಿದ್ದರು. ನನಗೆ ಎಷ್ಟು ಟೈಮ್ ಕೊಟ್ಟರೂ ಕೂಡ ಸಾಕಾಗಲ್ಲ. ಯಾಕೆಂದರೆ ಈ ನೋವನ್ನು ಎಂದಿಗೂ ಮರೆಯೋಕೆ ಆಗದು. ಇಂದು ನನ್ನ ಮಗನ ತೊಟ್ಟಿಲು ಶಾಸ್ತ್ರ ಮಾಡಿದ್ದೇನೆ. ಹೀಗಾಗಿ ಮನೆಯಲ್ಲಿ ಖುಷಿ ತುಂಬಿದೆ ಎಂದು ಹೇಳಿದ್ದರು. ನಿಜವಾಗಿಯೂ ನಾನು ಸ್ಟ್ರಾಂಗ್ ಇದ್ದೇನೋ ಇಲ್ಲವೋ ಗೊತ್ತಿಲ್ಲ. ಕೆಲವು ಘಟನೆಗಳು ನಡೆದಾಗ ನಾನು ಬ್ಲ್ಯಾಂಕ್ ಆಗಿದ್ದು ನಿಜ. ನನ್ನ ಮಗುವಿನಲ್ಲಿ ಚಿರುನನ್ನು ಕಾಣುತ್ತೇನೆ. ಚಿರಂಜೀವಿ ಅಂದರೆ ಸೆಲೆಬ್ರೇಶನ್. ಚಿರು ಎಂದಕೂಡಲೇ ಎಲ್ಲರಿಗೂ ಅವರ ನಗು ಮುಖ ಕಾಣುತ್ತದೆ. ಹೀಗಾಗಿ ನಾವು ಕೂಡ ಮುಂದಿನ ದಿನಗಳಲ್ಲಿ ಸೆಲೆಬ್ರೇಶನ್ ಮುಂದುವರಿಸುತ್ತೇವೆ. ಚಿರಂಜೀವಿ ಸರ್ಜಾಗೆ ಸಂಬಂಧಪಟ್ಟ ಯಾವುದೇ ವಿಷಯವಿದ್ದರೂ ಕೂಡ ನಾವು ಆಚರಣೆ ಮಾಡುತ್ತೇವೆ. ಅಂತ ಹೇಳಿ ಮೇಘನಾ ಕಣ್ಣೀರು ಹಾಕಿದ್ದಾರೆ.
ಇನ್ನೂ ಈಗ ಸುಂದರ್ ರಾಜ್ ಅವರ ಮುದ್ದಿನ ಮೊಮ್ಮಗ , ಸರ್ಜಾ ಕುಟುಂಬದ ಕುಡಿ , ಮೇಘನಾ ರಾಜ್ ಹಾಗೂ ಚಿರು ಅವರ ಪುತ್ರ ಜೂನಿಯರ್ ಚಿರು ಚಿಂಟು ನಾಮಕರಣ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಲೇ ಜೂನಿಯರ್ ಯುವಸಾಮ್ರಾಟನಿಗೆ ಏನ್ ಹೆಸರಿಡ್ತಾರೆ ಅನ್ನೋ ಕುತೂಹಲ ಕರುನಾಡಿನ ಮನೆಮನದ ಮಾತಾಗಿದೆ. ಇದಲ್ಲದೇ ಜೂನಿಯರ್ ಚಿರುಗೆ ಯಾವ ಅಕ್ಷರದಲ್ಲಿ ಹೆಸರು ಇಡ್ತಾರೆ ಅನ್ನೋ ಪ್ರಶ್ನೆಯೂ ಚಿರು ಫ್ಯಾನ್ಸ್ಗಳಲ್ಲಿ ಅಪ್ಡೇಟ್ ಆಗಿದೆ. ಆದ್ರೆ ಅಭಿಮಾನಿಗಳಿಗೆ ಸದ್ಯ ಚಿರು ಪುತ್ರನ ಹೆಸರೇನು ಅನ್ನೋ ಕಲರ್ ಫುಲ್ ಕ್ಲೂ ಸಿಕ್ಕಿದೆ. ಸುಂದರ್ ರಾಜ್, ಪ್ರಮಿಳಾ ದಂಪತಿಗಳು ಚಿಂಟು ಅಂತ ಈಗಾಗಲೇ ಕರಿಯುತ್ತಿದ್ದಾರೆ.
ತಾತಾ ಸುಂದರಾಜ್ ಮೊಮ್ಮಗ ಚಿಂಟುಗೆ ‘ಚಿಂತನ್’ ಎಂದು ಹೆಸರಿಡಲು ಮೇಘಾನ ಚಿಂತಿಸಿದ್ದಾರೆ ಎನ್ನಲಾಗುತ್ತಿದೆ. ಚಿರು ಪುತ್ರನಿಗೆ ಅಪ್ಪ ಅಮ್ಮನ ಹೆಸರಿನ ಅಕ್ಷರದಿಂದಲೇ ಹೆಸರಿಡಲು ಸುಂದರ್ ರಾಜ್ ಕುಟುಂಬ ಆಲೋಚಿಸಿದೆ. ಅದರಂತೆ ಚಿರು ಹೆಸರಿನ ಮೊದಲ ಅಕ್ಷರ ‘ಚ’ ಹಾಗೂ ಮೇಘನಾ ಹೆಸರಿನ ಕೊನೆಯ ಅಕ್ಷರ ‘ನ’ ಬಳಸಿ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲು ಮೇಘನಾ ಕುಟುಂಬ ನಿರ್ಧರಿಸಿದೆ ಎನ್ನಲಾಗ್ತಿದೆ. ಸದ್ಯ ಕೊರೊನಾ ಗೆದ್ದು ಮನೆ ಸೇರಿರುವ ಸುಂದರ್ ರಾಜ್ ಕುಟುಂಬ ವಿಶ್ರಾಂತಿಯಲ್ಲಿದ್ದು, ಫೆಬ್ರವರಿ ಕೊನೆಯವಾರ ಇಲ್ಲವೇ ಮಾರ್ಚ್ ಮೊದಲ ವಾರದಲ್ಲಿ ಚಿಂತೆ ಇಲ್ಲದ ಚಿಂಟುಗೆ ನಾಮಕರಣ ಮಾಡಲು ಪ್ಲಾನ್ ಮಾಡಿದ್ದಾರೆ.