ಪ್ರಪಂಚದ ಕೆಲವು ವಿಶೇಷ, ಅಪರೂಪದ ವಿಷಯಗಳು ನಮಗೆ ಗೊತ್ತಿರುವುದಿಲ್ಲ. ಉದಾಹರಣೆಗೆ ಪ್ರಪಂಚದ ದುಬಾರಿ ಪಿಜ್ಜಾ ಬೆಲೆ ಎಷ್ಟು, ನ್ಯೂಸ್ ರಿಪೋರ್ಟರ್ ಹೇಗೆ ಅಷ್ಟು ವೇಗವಾಗಿ ಕ್ಯಾಮೆರಾ ನೋಡಿಕೊಂಡು ಓದುತ್ತಾರೆ ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಪಿಜ್ಜಾ ಬೆಲೆ 100 ರೂಪಾಯಿಕ್ಕಿಂತ ಹೆಚ್ಚಿರುತ್ತದೆ. ಪ್ರಪಂಚದ ಅತಿ ದುಬಾರಿ ಪಿಜ್ಜಾದ ಬೆಲೆ ಡಾಲರ್ 12,000 ಅಂದರೆ 8,98,000 ರೂಪಾಯಿ ಇದರ ಹೆಸರು ಲೂಯಿಸ್ 13 ಇದು ಇಟಲಿಯಲ್ಲಿ ತಯಾರಾಗುತ್ತದೆ. ಇದನ್ನು ಆರ್ಡರ್ ಮಾಡಿದವರ ಮನೆಯಲ್ಲೇ ಇಟಲಿಯ 3 ಶೆಫ್ ಗಳು ತಯಾರಿಸುತ್ತಾರೆ, ಇದರಲ್ಲಿ ಹಾಕುವ ಸಾಮಗ್ರಿಗಳು ಸ್ಪೇಷೆಲ್ ಮತ್ತು ದುಬಾರಿಯಾಗಿರುತ್ತದೆ ಅಲ್ಲದೇ ಇದಕ್ಕೆ ಹಾಕುವ ಸಾಮಗ್ರಿಗಳನ್ನು ಬೇರೆ ಬೇರೆ ದೇಶದಿಂದ ತರಿಸುತ್ತಾರೆ. ಈ ಪಿಜ್ಜಾವನ್ನು ತಯಾರಿಸಲು 72 ಗಂಟೆ ಅಂದರೆ 3 ದಿನಗಳು ಬೇಕು. ಜಪಾನಿನಲ್ಲಿ ಪೋಕೆಮನ್ ಕ್ರೇಜ್ ಇದೆ. ಪ್ರತಿವರ್ಷ ಅಲ್ಲಿ ಪೋಕೆಮನ್ ಪಿಕಚೋ ಪರೇಡ್ ನಡೆಯುತ್ತದೆ. ಅಲ್ಲದೇ ಅಲ್ಲಿ ಪೋಕೆಮನ್ ಕೆಫೆ ಕೂಡ ತೆರೆಯಲಾಗಿದೆ ಅಲ್ಲಿರುವ ಚೇರ್, ಟೇಬಲ್ ಎಲ್ಲವನ್ನು ಪೋಕೆಮನ್ ರೀತಿಯಲ್ಲಿ ತಯಾರಿಸಲಾಗಿದೆ. ಅಲ್ಲಿಯ ಫುಡ್ ಕೂಡ ಪೋಕೆಮನ್ ಆಕಾರದಲ್ಲಿ ತಯಾರಿಸಲಾಗುತ್ತದೆ.
ಇಲ್ಲಿ ವೇಟರ್ ಕೂಡ ಪೋಕೆಮನ್ ವೇಷದಲ್ಲಿ ಪುಡ್ ಸರ್ವ್ ಮಾಡುತ್ತಾರೆ. ತಮಿಳುನಾಡಿನ ಒಂದು ಶೋ ರೂಮ್ ನಲ್ಲಿ ಕೋವಿಡ್ 19 ಮಹಾಮಾರಿಯಿಂದ ರಕ್ಷಿಸಲು ಭಾರತದ ಮೊದಲ ಸಾರಿ ಧರಿಸಿದ ಸ್ಯಾನಿಟೈಸರ್ ಲೇಡಿ ರೋಬೋಟ್ ತಯಾರಿಸಲಾಗಿದೆ. ಈ ರೋಬೋಟ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಜನರನ್ನು ಮಾಸ್ಕ್ ಧರಿಸಿಕೊಂಡ ನಂತರವೇ ಶೋರೂಮ್ ಒಳಗೆ ಬಿಡುತ್ತದೆ. ಸಾನಿಟೈಸರ್ ಮಾಡುತ್ತಾ ಶೋರೂಮ್ ವಸ್ತುಗಳು ಕಳ್ಳತನವಾಗದಂತೆ ನೋಡಿಕೊಳ್ಳುತ್ತದೆ. ಪಂಜಾಬ್ ನ ನಿವಾಸಿ ಹರ್ಮಾನ್ ಎನ್ನುವವರು ಇವರು ಪುರುಷನಲ್ಲ ಮಹಿಳೆ ಈಕೆ 12 ವರ್ಷದವಳಿದ್ದಾಗ ಹಾರ್ಮೋನ್ಸ್ ಪ್ರಭಾವದಿಂದ ಪುರುಷರಂತೆ ಗಡ್ಡ ಬರಲು ಪ್ರಾರಂಭವಾಯಿತು.
ಈಕೆ ಶೇವ್ ಮಾಡುತ್ತಿದ್ದಳು ಆದರೆ ಪುನಃ ಬೆಳೆಯುತ್ತಿರುವುದರಿಂದ ಶೇವ್ ಮಾಡುವುದನ್ನು ಬಿಡುತ್ತಾಳೆ. ಎಲ್ಲರೂ ಇವಳನ್ನು ಅವಹೇಳನದಿಂದ ನೋಡುತ್ತಿದ್ದರು ಆದರೆ ಈಕೆ ಧೈರ್ಯಗೆಡದೆ ಮಾಡೆಲ್ ಆಗಿ ಬೆಳೆಯುತ್ತಾರೆ ಸಣ್ಣ ವಯಸ್ಸಿನಲ್ಲಿ ಗಡ್ಡ ಹೊಂದಿದ ಮಹಿಳೆ ಎಂದು ಗಿನ್ನಿಸ್ ರೆಕಾರ್ಡ್ ನಲ್ಲಿ ಇವಳ ಹೆಸರು ಸೇರುತ್ತದೆ. ಹಲವು ರೀತಿಯ ಜಾಕೆಟ್ ಗಳು ಮಾರುಕಟ್ಟೆಗೆ ಬಂದಿವೆ ಕ್ಲೈಮೇಟ್ ಕಂಟ್ರೋಲ್ ಜಾಕೆಟ್ಸ್ ಗಳು ಕೂಡ ಬರುತ್ತಿವೆ ಇವುಗಳನ್ನು ಹಾಕಿಕೊಂಡರೆ ಬೇಸಿಗೆಯಲ್ಲಿ ತಣ್ಣಗೆ, ಚಳಿಯಲ್ಲಿ ಬೆಚ್ಚಗೆ ಕನ್ವರ್ಟ್ ಆಗುತ್ತದೆ. ಅಲ್ಲದೆ ಇದು ಮಳೆಯ ನೀರಿನಲ್ಲಿ ಒದ್ದೆಯಾದರೆ ಸ್ವಲ್ಪ ಸಮಯದಲ್ಲಿ ಡ್ರೈ ಆಗುತ್ತದೆ. ಈ ಜಾಕೆಟ್ ಅನ್ನು ಸೋಲಾರ್ ಇಂದ ಚಾರ್ಜ್ ಮಾಡಬಹುದು.
ಸಾಮಾನ್ಯವಾಗಿ ಪಕ್ಷಿಗಳು 500 ಅಡಿಯಷ್ಟು ಮೇಲೆ ಹಾರಬಲ್ಲವು. ರುಪೇಲ್ಸ ಗ್ರಿಪೋನ್ ವಲ್ಚರ್ ಎಂಬ ಪಕ್ಷಿ ಸುಮಾರು 37,000 ಅಡಿ ಎತ್ತರ ಹಾರುತ್ತದೆ. ಇವು ಹೆಚ್ಚು ಸೆಂಟ್ರಲ್ ಆಫ್ರಿಕಾದಲ್ಲಿ ಕಂಡುಬರುತ್ತದೆ. ಒಲಂಪಿಕ್ಸ್ ನಲ್ಲಿ ಅಥ್ಲೆಟ್ಸ್ ತಮಗೆ ಸಿಕ್ಕ ಮೆಡಲ್ ಗಳನ್ನು ಬಾಯಿಯಲ್ಲಿ ಕಚ್ಚುತ್ತಾರೆ ಏಕೆಂದರೆ ಮೊದಲಿನ ಅಥ್ಲೇಟ್ಸ್ ಗಳು ತಮಗೆ ಕೊಟ್ಟಿರುವ ಮೆಡೆಲ್ ನಿಜವಾದದ್ದು ಹೌದಾ ಎಂದು ನೋಡಲು ಬಾಯಿಯಲ್ಲಿ ಕಚ್ಚುತ್ತಿದ್ದರಂತೆ ಆದರೆ ಈಗಲೂ ಅದು ಮುಂದುವರೆದಿದೆ.
ಗೋಲ್ಡನ್ ಕೇಪ್ ಡ್ರೆಸ್ ಎಂಬ ಒಂದು ಡ್ರೆಸ್ ಇದೆ ಅದನ್ನು 80 ಜನರು ಮೂರು ವರ್ಷದಲ್ಲಿ ತಯಾರಿಸಿದ್ದಾರೆ. ನ್ಯೂಸ್ ರಿಪೋರ್ಟರ್ ಕ್ಯಾಮೆರಾ ನೋಡಿಕೊಂಡು ವೇಗವಾಗಿ ತಪ್ಪಿಲ್ಲದೆ ನ್ಯೂಸ್ ಓದುತ್ತಾರೆ ಹೇಗೆಂದರೆ ಅವರು ಟೆಲಿಪ್ರಾಂಪ್ಟರ್ ಎಂಬ ಗ್ಯಾಜೆಟ್ ಅನ್ನು ಬಳಸುತ್ತಾರೆ ಇದರಲ್ಲಿ ಎರಡು ಭಾಗಗಳಿರುತ್ತವೆ ಮೊದಲನೆಯದು ಪ್ರಾಜೆಕ್ಟರ್ ಇದರಲ್ಲಿ ಕಂಪ್ಯೂಟರ್ ನಿಂದ ಕಳಿಸುವ ಸ್ಕ್ರಿಪ್ಟ್ ಪ್ರಸಾರವಾಗುತ್ತದೆ ಎರಡನೇಯದು ಬೀನ್ ಸ್ಪ್ಲಿಟ್ಟರ್ ಗ್ಲಾಸ್ ಇದರಲ್ಲಿ ಪ್ರೊಜೆಕ್ಟರ್ ನಲ್ಲಿ ಪ್ರಸಾರವಾಗುವ ಸ್ಕ್ರಿಪ್ಟ್ ಪ್ರತಿಬಿಂಬ ಕಾಣುತ್ತದೆ ಇದರಿಂದ ನ್ಯೂಸ್ ರಿಪೋರ್ಟರ್ ಕ್ಯಾಮೆರಾ ನೋಡುತ್ತಾ ನ್ಯೂಸ್ ಓದುತ್ತಾರೆ. ನ್ಯೂಯಾರ್ಕ್ ನಲ್ಲಿರುವ ಎಲ್ಲಾ ರೆಸ್ಟೋರೆಂಟ್ ಗಳನ್ನು ಭೇಟಿ ಮಾಡಬೇಕು ಎಂದರೆ 54 ವರ್ಷಗಳು ಬೇಕಾಗುತ್ತದೆ. ನ್ಯೂಯಾರ್ಕ್ ನಗರ ಪ್ರಪಂಚದಲ್ಲೇ ಹೆಚ್ಚು ರೆಸ್ಟೋರೆಂಟ್ ಹೊಂದಿದ ನಗರವಾಗಿದೆ. ಈ ಅಪರೂಪದ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.