ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಜಲಸಂಪನ್ಮೂಲ ಇಲಾಖೆಯಿಂದ ಸಿಹಿಸುದ್ದಿ ಇದೆ ಜಲಸಂಪನ್ಮೂಲ ಇಲಾಖೆಯಲ್ಲಿ ಬೃಹತ್ ಪ್ರಮಾಣದಲ್ಲಿ ಹುದ್ದೆಗಳ ನೇಮಕಾತಿ ನಡೆಯುವ ಕುರಿತು ಮಾಹಿತಿ ಹೊರಬಿದ್ದಿದ್ದು ಜಲಸಂಪನ್ಮೂಲ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಯಾವಾಗ ಅರ್ಜಿಯನ್ನ ಕರೆಯುತ್ತಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಜಲಸಂಪನ್ಮೂಲ ಇಲಾಖೆಯಲ್ಲಿ ಒಟ್ಟು ಐದು ಸಾವಿರದ ಏಳು ನೂರಕ್ಕೂ ಹೆಚ್ಚಿನ ಹುದ್ದೆಗಳ ಬೃಹತ್ ನೇಮಕಾತಿ ನಡೆಯುವ ಕುರಿತು ಮಾಹಿತಿಯೊಂದು ಹೊರಬಿದ್ದಿದೆ. ಎ ಇ ಆಗಿರಬಹುದು ಜೆ ಇ ಆಗಿರಬಹುದು ಎಸ್ ಡಿ ಎ, ಎಫ್ ಡಿ ಎ, ಕ್ಲರ್ಕ್ ಹುದ್ದೆಗಳು ಈ ರೀತಿಯಾಗಿ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಎಂಬ ಮಾಹಿತಿ ಜಲಸಂಪನ್ಮೂಲ ಇಲಾಖೆಯಿಂದ ಹೊರಬಿದ್ದಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಒಟ್ಟು ಐದು ಸಾವಿರದ ಏಳು ನೂರಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಯಾವ ಯಾವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುವುದನ್ನು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಕರ್ನಾಟಕ ವಿಧಾನಸಭೆಯಲ್ಲಿ ಜಲಸಂಪನ್ಮೂಲ ಅಧಿಕಾರಿಗಳಿಗೆ ಯಾವ ಪ್ರಶ್ನೆಗಳನ್ನು ಕೇಳಲಾಯಿತು ಮತ್ತು ಅವರು ಅದಕ್ಕೆ ಏನೆಂದು ಉತ್ತರವನ್ನು ನೀಡಿದ್ದಾರೆ ಎಂಬುದನ್ನು ನೋಡುವುದಾದರೆ ಮೊದಲನೇ ಪ್ರಶ್ನೆ ಜಲಸಂಪನ್ಮೂಲ ಇಲಾಖೆಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ ವೃಂದವಾರು ಹುದ್ದೆಗಳ ಮಾಹಿತಿಯನ್ನು ನೀಡುವುದಕ್ಕೆ ಕೇಳುತ್ತಾರೆ.
ಎರಡನೆಯದಾಗಿ ಯಾವ ಕಾಲಮಿತಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಭರ್ತಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ಕೇಳಿದ್ದಾರೆ ಅದಕ್ಕೆ ಸಂಬಂಧಪಟ್ಟ ಉತ್ತರ ಹೀಗಿರುತ್ತದೆ. ಖಾಲಿ ಇರುವ ಹುದ್ದೆಗಳನ್ನು ಹಾಲಿ ಸೇವೆಸಲ್ಲಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಅನ್ನ ಕರ್ತವ್ಯದ ಮೇಲೆ ಅಥವಾ ಹೆಚ್ಚುವರಿ ಪ್ರಭಾವದಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು ಸಾಧ್ಯವಾದಷ್ಟು ಕಾಲಮಿತಿಯಲ್ಲಿ ಭರ್ತಿಮಾಡಿಕೊಳ್ಳಲು ಕ್ರಮ ಜರುಗಿಸಲಾಗುವುದು ಎಂಬ ಉತ್ತರವನ್ನು ಕೊಡಲಾಗಿದೆ.
ಮೂರನೇ ಪ್ರಶ್ನೆ ಖಾಲಿ ಇರುವ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಅನುಸರಿಸುವ ಮಾನದಂಡಗಳೇನು ಹುದ್ದೆ ವಾರು ವಿವರಗಳನ್ನು ನೀಡಿ ಎಂದು ಹೇಳಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಮತ್ತು ಮುಂಬಡ್ತಿ ಹುದ್ದೆಗಳನ್ನು ಮುಂಬಡ್ತಿಯಿಂದ ತುಂಬಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಕೆಲವೊಂದು ಹುದ್ದೆಗಳಲ್ಲಿ ಎಪ್ಪತ್ತು ಶೇಕಡ ನೇರ ನೇಮಕಾತಿ ಮತ್ತು ಮೂವತ್ತು ಶೇಕಡಾ ಮುಂಬಡ್ತಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಕೆಲವು ಹುದ್ದೆಗಳನ್ನು ಶೇಕಡ ಐವತ್ತರಷ್ಟು ನೇರ ನೇಮಕಾತಿ ಮೂಲಕ ಮತ್ತು ಶೇಕಡ ಐವತ್ತರಷ್ಟು ಮುಂಬಡ್ತಿ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ಬೇರೆಬೇರೆ ವಿಧಾನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂದಿನ ಪ್ರಶ್ನೆ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಆದೇಶವನ್ನು ಹೊರಡಿಸಲಾಗಿದೆ? ಎಂದು ಕೇಳಲಾಯಿತು ಸದ್ಯಕ್ಕೆ ಯಾವುದೇ ರೀತಿಯ ಆದೇಶ ಪತ್ರವನ್ನು ಹೊರಡಿಸಿಲ್ಲ. ಆದರೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್ ವೃಂದದಲ್ಲಿ ಬಡ್ತಿ ಮೂಲಕ ಬರ್ತಿ ಮಾಡಬಹುದಾದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ. ಈಗ ಯಾವ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಂಬುದನ್ನು ನೋಡುವುದಾದರೆ ಖಾಲಿ ಇರುವ ಹುದ್ದೆಗಳ ಪಟ್ಟಿ ದೊಡ್ಡದಾಗಿದ್ದು ಅದರಲ್ಲಿ ಪ್ರಮುಖವಾಗಿ ಕೆಲವು ಹುದ್ದೆಗಳನ್ನು ನೋಡುವುದಾದರೆ ಅಸಿಸ್ಟೆಂಟ್ ಇಂಜಿನಿಯರಿಂಗ್
ಡಿವೈಸ್ ಒಂದರಲ್ಲಿ ಒಂದು ಸಾವಿರದ ಇಪ್ಪತ್ತು ಹುದ್ದೆಗಳು ಖಾಲಿ ಇರುವುದನ್ನು ಗಮನಿಸಬಹುದು. ಜೂನಿಯರ್ ಇಂಜಿನಿಯರಿಂಗ್ ವಿಭಾಗದಲ್ಲಿ ಆರುನೂರ ಎಪ್ಪತ್ತೊಂಬತ್ತು ಹುದ್ದೆಗಳು ಖಾಲಿ ಇವೆ. ಫಸ್ಟ್ ಡಿವಿಷನ್ ಅಸಿಸ್ಟೆಂಟ್ ವಿಭಾಗದಲ್ಲಿ ಮುನ್ನೂರ ತೊಂಬತ್ತೊಂಬತ್ತು ಹುದ್ದೆಗಳು ಖಾಲಿಇವೆ. ಅದೇ ರೀತಿಯಾಗಿ ಎಸ್ ಡಿ ಎ ಲ್ಲಿ ನಾಲ್ಕು ನೂರಾ ಅರವತ್ತೆಳು ಹುದ್ದೆಗಳು ಖಾಲಿ ಇವೆ. ಇವು ಮುಖ್ಯವಾಗಿರುವಂತೆ ಗಳು ಇವುಗಳನ್ನು ಹೊರತುಪಡಿಸಿ ಇನ್ನೂ ಅನೇಕ ಹುದ್ದೆಗಳು ಖಾಲಿ ಇವೆ ಡ್ರೈವರ್ ಹುದ್ದೆಗಳು ಜಾಮೆದಾರ್ ಹುದ್ದೆಗಳು ಅಟೆಂಡರ್ ಹುದ್ದೆಗಳು ಹೀಗೆ ಇನ್ನೂ ಅನೇಕ ರೀತಿಯ ಹುದ್ದೆಗಳು ಖಾಲಿ ಇವೆ. ಒಟ್ಟು ಐದು ಸಾವಿರದ ಏಳು ನೂರಾ ಹತ್ತೊಂಬತ್ತು ಹುದ್ದೆಗಳು ಖಾಲಿ ಇವೆ.
ಹಾಗಾದರೆ ನಾವು ಈಗ ಈ ಹುದ್ದೆಗಳಿಗೆ ಯಾವಾಗ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗುತ್ತದೆ ಎಂಬುದನ್ನು ನೋಡುವುದಾದರೆ ಎರಡು ಸಾವಿರದ ಹದಿನೇಳರಲ್ಲಿ ಒಟ್ಟು ಎಂಟು ನೂರು ಎ ಇ, ಜೆ ಇ ಹುದ್ದೆಯ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿತ್ತು ಅದಾದ ನಂತರ ಯಾವುದೇ ರೀತಿಯ ನೇಮಕಾತಿಗೆ ಅರ್ಜಿಯನ್ನು ಕರೆದಿರಲಿಲ್ಲ ಹಾಗಾಗಿ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಅಥವಾ ಎರಡು ಸಾವಿರದ ಇಪ್ಪತ್ತೆರಡರ ಜನವರಿ ತಿಂಗಳಿನಲ್ಲಿ ಎ ಇ, ಜೆ ಇ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸುವ ಸಂಭವವಿದೆ.
ಇನ್ನಿತರ ಹುದ್ದೆಗಳಿಗೆ ಮುಂದಿನ ದಿನಗಳಲ್ಲಿ ನೇಮಕಾತಿಗೆ ಅರ್ಜಿಯನ್ನು ಕರೆಯಬಹುದು. ಹಾಗಾಗಿ ನೀವು ಈ ಒಂದು ಎ ಇ, ಜೆ ಇ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಪರೀಕ್ಷೆಗೆ ಬೇಕಾದ ಪೂರ್ವ ತಯಾರಿಗಳನ್ನು ಈಗಿನಿಂದಲೇ ನಡೆಸಿದರೆ ಉತ್ತಮವಾಗುತ್ತದೆ. ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ತಿಳಿಸಿರಿ.