ನಾವಿಂದು ನಿಮಗೆ ಪ್ರಧಾನಮಂತ್ರಿಯವರ ಮುದ್ರಾ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬ್ಯಾಂಕ್ ಆಗಿರಬಹುದು ಅಥವಾ ಸಣ್ಣಪುಟ್ಟ ಫೈನಾನ್ಸ್ ಕಂಪನಿಗಳು ಆಗಿರಬಹುದು ಮುದ್ರಾ ಲೋನ್ ಕೊಡುವುದಕ್ಕೆ ಮತ್ತೆ ಪ್ರಾರಂಭಿಸಿದೆ. ಅಂದರೆ ಜನಸಾಮಾನ್ಯರು ತಮ್ಮದೇ ಆದ ಸಣ್ಣಪುಟ್ಟ ಕೈಗಾರಿಕೆಗಳನ್ನು ಸ್ಥಾಪಿಸಿಕೊಳ್ಳಲು ಅಥವಾ ತಮ್ಮದೇ ಆದ ಹೊಸ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಇದು ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು.
ಪ್ರಧಾನಮಂತ್ರಿ ಮುದ್ರಾ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸುವ ಮೂಲಕ ಸಾಲ ಸೌಲಭ್ಯವನ್ನು ಪಡೆಯಬಹುದು. ಹಾಗಾದರೆ ನಾವಿಂದು ಆನ್ಲೈನ್ನಲ್ಲಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಮುದ್ರಾ ಯೋಜನೆಯಲ್ಲಿ ಎಷ್ಟು ವಿಧಗಳಿವೆ ಅದರ ಜೊತೆಗೆ ಯಾವ ಯಾವ ಉದ್ಯಮಗಳನ್ನು ಪ್ರಾರಂಭಿಸುವುದಕ್ಕೆ ಮುದ್ರಾ ಯೋಜನೆಯಲ್ಲಿ ಸಾಲ ಸಿಗುತ್ತದೆ ಎಂಬುದನ್ನು ತಿಳಿಸಿ ಕೊಡುತ್ತೇವೆ.
ಮೊದಲನೆಯದಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿ ಎಷ್ಟು ವಿಧಾನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೇದಾಗಿ ಶಿಶು ಮುದ್ರಾ ಯೋಜನೆ ಇದರಲ್ಲಿ ಐವತ್ತು ಸಾವಿರದವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಎರಡನೆಯದು ಕಿಶೋರ್ ಮುದ್ರಾ ಯೋಜನೆ ಈ ಯೋಜನೆಯಲ್ಲಿ ಐವತ್ತು ಸಾವಿರದಿಂದ ಐದು ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ.
ಮೂರನೆಯದಾಗಿ ತರುಣ ಮುದ್ರಾ ಯೋಜನೆ ಈ ಯೋಜನೆಯಲ್ಲಿ ಐದು ಲಕ್ಷದಿಂದ ಹತ್ತು ಲಕ್ಷದವರೆಗೆ ಸಾಲ ಸೌಲಭ್ಯ ಸಿಗುತ್ತದೆ ಇವತ್ತು ನಾವು ಕಿಶೋರ್ ಮುದ್ರಾ ಯೋಜನೆ ಬಗ್ಗೆ ತಿಳಿದುಕೊಳ್ಳೋಣ. ನಾವಿಂದು ನಿನಗೆ ಕಿಶೋರ್ ಮುದ್ರಾ ಯೋಜನೆಯಲ್ಲಿ ಐವತ್ತು ಸಾವಿರದಿಂದ ಐದು ಲಕ್ಷದವರೆಗೆ ಹೇಗೆ ಸಾಲ ಸೌಲಭ್ಯವನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ. ಹಾಗಾದ್ರೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಯಾವೆಲ್ಲ ವ್ಯಾಪಾರಿಗಳಿಗೆ ಹಾಗೂ ಉದ್ಯಮಗಳಿಗೆ ಸಾಲವನ್ನು ನೀಡಲಾಗುತ್ತದೆ ಎಂಬುದು ತಿಳಿದುಕೊಳ್ಳೋಣ.
ಮೊದಲನೆಯದಾಗಿ ಸಾರಿಗೆ ವಾಹನಗಳನ್ನು ಖರೀದಿಸುವುದಕ್ಕೆ ನಿಮಗೆ ಮುದ್ರಾ ಯೋಜನೆಯಲ್ಲಿ ಸಾಲವನ್ನು ಕೊಡಲಾಗುತ್ತದೆ. ಅಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸರಕನ್ನು ಸಾಗಿಸುವ ವಾಹನಗಳನ್ನು ತೆಗೆದುಕೊಳ್ಳುವುದಕ್ಕೆ ಹಣವನ್ನು ಕೊಡಲಾಗುತ್ತದೆ ಆಟೋರಿಕ್ಷ ಗಳಾಗಿರಬಹುದು ಸಣ್ಣಪ್ರಮಾಣದಲ್ಲಿ ಸರಕನ್ನು ಸಾಗಿಸುವ ವಾಹನ ಆಗಿರಬಹುದು ಮೂರು ಚಕ್ರದ ಗಾಡಿಗಳಾಗಿರಬಹುದು ಟ್ಯಾಕ್ಸಿ ಗಳಾಗಿರಬಹುದು ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಎರಡು ಚಕ್ರದ ವಾಹನಗಳು ಆಗಿರಬಹುದು ಇವುಗಳನ್ನು ಖರೀದಿ ಮಾಡುವುದಕ್ಕೆ ನಿಮಗೆ ಮುದ್ರ ಲೋನ್ ಅನ್ನು ಕೊಡಲಾಗುತ್ತದೆ.
ಎರಡನೆಯದಾಗಿ ಸಮುದಾಯ ಸಾಮಾಜಿಕ ಮತ್ತು ವೈಯಕ್ತಿಕ ಸೇವಾ ಚಟುವಟಿಕೆಗಳಿಗೆ ಮುದ್ರಾ ಲೋನ್ ಅನ್ನ ಕೊಡಲಾಗುತ್ತದೆ. ಅಂದರೆ ಯಾವುದೇ ಒಂದು ಕಟಿಂಗ್ ಶಾಪ್ ತೆರೆಯುವುದಕ್ಕೆ ಇರಬಹುದು ಬ್ಯೂಟಿಪಾರ್ಲರ್ ಅನ್ನು ಶುರು ಮಾಡುವುದಕ್ಕೆ ಜಿಮ್ ಪ್ರಾರಂಭಿಸುವುದಕ್ಕೆ ಕಿರಾಣಿ ಅಂಗಡಿ ಗಳನ್ನು ಪ್ರಾರಂಭಿಸುವುದಕ್ಕೆ ಹೊಲಿಗೆ ಅಂಗಡಿಗಳನ್ನು ಪ್ರಾರಂಭಿಸುವುದಕ್ಕೆ ಡ್ರೈ ಕ್ಲೀನಿಂಗ್ ಅಂಗಡಿಗಳನ್ನು ತೆರೆಯುವುದಕ್ಕೆ ಮೋಟರ್ ಸೈಕಲ್ ರಿಪೇರಿ ಅಂಗಡಿಗಳು ಅದೇ ರೀತಿಯಾಗಿ ಫೋಟೋ ಅಂಗಡಿಗಳನ್ನು ಮೆಡಿಕಲ್ ಗಳನ್ನು ಕೊರಿಯರ್ ಆಫೀಸ್ ಗಳನ್ನು ತೆರೆಯುವುದಕ್ಕೆ ಈ ರೀತಿಯಾಗಿ ಬೇರೆಬೇರೆ ಅಂಗಡಿಗಳನ್ನು ತೆರೆಯುವುದಕ್ಕೆ ಮುದ್ರ ಲೋನ್ ಕೊಡಲಾಗುತ್ತದೆ. ಮೂರನೆಯದಾಗಿ ಆಹಾರ ಉತ್ಪನ್ನಗಳ ವಲಯಕ್ಕೆ ಮುದ್ರ ಲೋನ್ ಕೊಡಲಾಗುತ್ತದೆ.
ಯಾವುದೇ ಪಾಪಡ್ ಗಳನ್ನು ತಯಾರಿಸುವ ಯಂತ್ರಗಳನ್ನು ಹಾಕುವುದಕ್ಕೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುವುದಕ್ಕೆ ಜೊತೆಗೆ ಕ್ಯಾಂಟೀನ್ ಗಳನ್ನು ತೆರೆಯುವುದಕ್ಕೆ ಅಥವಾ ಐಸ್ಕ್ರೀಮ್ ಫ್ಯಾಕ್ಟರಿಗಳನ್ನು ತೆರೆಯುವುದಕ್ಕೆ ಬಿಸ್ಕೆಟ್ ತಯಾರಿಸುವುದಕ್ಕೆ ಮತ್ತು ಬನ್ ಗಳನ್ನ ತಯಾರಿಸುವಂತಹ ಫ್ಯಾಕ್ಟರಿಗಳನ್ನು ತೆರೆಯುವುದಕ್ಕೆ ಈ ರೀತಿಯಾಗಿ ಬೇರೆ ಬೇರೆ ಆಹಾರ ಉತ್ಪನ್ನಗಳ ವಲಯಕ್ಕೆ ಮುದ್ರಾ ಲೋನ್ ನೀಡಲಾಗುತ್ತದೆ.
ನಾಲ್ಕನೆಯದಾಗಿ ಜವಳಿ ಉತ್ಪನ್ನಗಳು ಮತ್ತು ಚಟುವಟಿಕೆಗಳಿಗೆ ಮುದ್ರ ಲೋನ್ ಕೊಡಲಾಗುತ್ತದೆ. ಅಂದರೆ ಯಾವುದೇ ಒಂದು ಕೈಮಗ್ಗವನ್ನು ತಯಾರಿಸಲು ಪವರ್ ಲುಮ್ ಅನ್ನ ಹಾಕುವುದಾಗಿರಬಹುದು ಖಾದಿ ಚಟುವಟಿಕೆಗಳಿಗೆ ಮುದ್ರಾ ಲೋನ್ ಕೊಡಲಾಗುತ್ತದೆ. ಇದರ ಜೊತೆಗೆ ಬೇರೆ ಬೇರೆ ರೀತಿಯ ಸಾಂಪ್ರದಾಯಿಕ ಕಸೂತಿ ಮತ್ತು ಕೈ ಕೆಲಸಕ್ಕೆ ಮುದ್ರಾ ಲೋನ್ ಅನ್ನು ಕೊಡಲಾಗುತ್ತದೆ. ಈ ರೀತಿಯಾಗಿ ಜವಳಿ ಉತ್ಪನ್ನದ ಬೇರೆಬೇರೆ ವಲಯಗಳಿಗೆ ಮುದ್ರಾ ಲೋನ್ ಅನ್ನು ಕೊಡಲಾಗುತ್ತದೆ. ಇದರ ಜೊತೆಗೆ ವ್ಯಾಪಾರಿಗಳಿಗೆ ಅಂಗಡಿ ವ್ಯಾಪಾರ ಮಾಡುವವರಿಗೆ ಮುದ್ರಾ ಲೋನ್ ಅನ್ನು ಒದಗಿಸಲಾಗುತ್ತದೆ. ಜೊತೆಗೆ ಮೈಕ್ರೋ ಘಟಕಗಳಿಗೆ ಸಲಕರಣೆ ಹಣಕಾಸು ಯೋಜನೆಗೆ ಮುದ್ರಾ ಲೋನ್ ಅನ್ನು ಒದಗಿಸಲಾಗುತ್ತದೆ. ಅಂದರೆ ಯಾವುದೇ ಒಂದು ಯಂತ್ರೋಪಕರಣಗಳನ್ನು ಖರೀದಿ ಮಾಡುವುದಾಗಿರಬಹುದು.
ಸಣ್ಣಪುಟ್ಟ ಫ್ಯಾಕ್ಟರಿಗಳನ್ನು ಪ್ರಾರಂಭಿಸುವುದಕ್ಕೆ ತೆಗೆದುಕೊಳ್ಳುವ ಯಂತ್ರೋಪಕರಣಗಳನ್ನು ಖರೀದಿಸುವುದಕ್ಕೆ ಮುದ್ರಾ ಲೋನ್ ನೀಡಲಾಗುತ್ತದೆ. ಕೊನೆಯದಾಗಿ ಬಹಳ ಮುಖ್ಯವಾಗಿ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಮುದ್ರಾ ಲೋನ್ ಅನ್ನು ಕೊಡಲಾಗುತ್ತದೆ. ಕೃಷಿ ಸಂಬಂಧಿ ಚಟುವಟಿಕೆಗಳಾದ ಮೀನು ಸಾಕಾಣಿಕೆ ಜೇನು ಸಾಕಾಣಿಕೆ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಮುಂತಾದ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಮುದ್ರಾ ಲೋನ್ ಕೊಡಲಾಗುತ್ತದೆ. ಇದರ ಜೊತೆಗೆ ಡೈರಿಗಳನ್ನು ತೆರೆಯುವುದಕ್ಕೆ ಈ ರೀತಿಯಾಗಿ ಹೊಸ ಹೊಸ ಉದ್ಯಮಗಳನ್ನು ವ್ಯಾಪಾರಗಳನ್ನು ಪ್ರಾರಂಭಿಸುವುದಕ್ಕೆ ಮುದ್ರ ಲೋನ್ ನೀಡಲಾಗುತ್ತದೆ.
ಹಾಗಾದರೆ ಈ ಒಂದು ಪ್ರಧಾನ ಮಂತ್ರಿ ಮುದ್ರಾ ಲೋನ್ ಯೋಜನೆಯ ಸೌಲಭ್ಯವನ್ನು ಪಡೆಯುವುದಕ್ಕೆ ಆನ್ಲೈನಲ್ಲಿ ಹೇಗೆ ಅರ್ಜಿಯನ್ನು ಸಲ್ಲಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ಮುದ್ರಾ ಯೋಜನೆಯ ಲಿಂಕನ್ನು ತೆರೆಯಬೇಕು ತೆರೆದ ತಕ್ಷಣ ಅಲ್ಲಿ ಒಂದಿಷ್ಟು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ಉದ್ಯಮಿಮಿತ್ರ ಎನ್ನುವ ಆಯ್ಕೆ ಎಡಬದಿಯಲ್ಲಿ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ತಕ್ಷಣ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಕೆಳಗಡೆ ಬಂದಾಗ ಮುದ್ರಾ ಲೋನ್ಸ್ ಕಾಣಿಸುತ್ತದೆ ಅದರ ಕೆಳಗಡೆ ಅಪ್ಲೈ ನೋವ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಹಾಗೆ ಮಾಡಿದಾಗ ಅಲ್ಲಿ ನಿವ್ ರಿಜಿಸ್ಟ್ರೇಷನ್ ಎಂಬುದು ಕಾಣಿಸಿಕೊಳ್ಳುತ್ತದೆ.
ನೀವು ಮೊದಲ ಬಾರಿಗೆ ಹೊಸ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸುತ್ತಿದ್ದರೆ ಅಲ್ಲಿ ನ್ಯೂ ಎಂಟರ್ ಪ್ರೀನಿಯರ್ ಎಂಬುದನ್ನು ಆಯ್ಕೆಮಾಡಿಕೊಳ್ಳಬೇಕು. ಈಗಾಗಲೇ ನೀವು ವ್ಯಾಪಾರ ಉದ್ದಿಮೆಯನ್ನು ಪ್ರಾರಂಭಿಸಿದ್ದರೆ ಅಲ್ಲಿ ಕೆಳಗಡೆ ಎಕ್ಸಿಸ್ಟಿಂಗ್ ಎಂಟರ್ ಪ್ರೀನಿಯರ್ ಎಂಬುದನ್ನು ಆಯ್ಕೆಮಾಡಿಕೊಳ್ಳಬೇಕು ಒಂದು ವೇಳೆ ನೀವು ವೈದ್ಯರು ವಕೀಲರು ಆಗಿದ್ದರೆ ಸೆಲ್ಫ್ ಎಂಪ್ಲೋಯೆಡ್ ಪ್ರೊಫೆಷನಲ್ ಎನ್ನುವುದನ್ನು ಆಯ್ಕೆಮಾಡಿಕೊಳ್ಳಬೇಕು.
ಈಗ ನಾವು ಹೊಸದಾಗಿ ಉದ್ಯಮವನ್ನು ಪ್ರಾರಂಭಿಸುವವರಿಗೆ ಯಾವ ರೀತಿಯಾಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂಬುದನ್ನು ನೋಡೋಣ ನೀವು ರಿಜಿಸ್ಟ್ರೇಷನ್ ಮಾಡಿಕೊಳ್ಳುವುದಕ್ಕೆ ನಿಮ್ಮ ಹೆಸರು ಮೊಬೈಲ್ ನಂಬರ್ ಇಮೇಲ್ ಐಡಿಯನ್ನು ಹಾಕಬೇಕು ನಂತರ ಅದರ ಕೆಳಗೆ ಜನರೇಟ್ ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ನೀವು ಹಾಕಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಆ ಓಟಿಪಿಯನ್ನು ಹಾಕಿ ವೇರಿಫೈ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ರಿಜಿಸ್ಟ್ರೇಷನ್ ಎನ್ನುವುದು ಕಾಣಿಸಿ ಲಾಗಿನ್ ಪೇಜ್ ಓಪನ್ ಆಗುತ್ತದೆ. ನಿಮಗೇನಾದರು ಹ್ಯಾಂಡ್ ಹೋಲ್ಡಿಂಗ್ ಏಜೆನ್ಸಿಯ ಸಹಕಾರ ಬೇಕು ಎಂದರೆ ಅಲ್ಲಿ ಹ್ಯಾಂಡ್ ಹೋಲ್ಡಿಂಗ್ ಏಜೆನ್ಸಿ ಎನ್ನುವುದಿರುತ್ತದೆ ಅಲ್ಲಿ ಎನ್ಕ್ವೈರಿ ನೌ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಿಮಗೆ ಅವರ ಸಹಾಯ ಸಿಗುತ್ತದೆ. ಒಂದು ವೇಳೆ ನೀವು ನೇರವಾಗಿ ಅರ್ಜಿಯನ್ನು ಸಲ್ಲಿಸುವುದಿದ್ದರೆ ಲೋನ್ ಅಪ್ಲಿಕೇಶನ್ ಸೆಂಟರ್ ಎನ್ನುವುದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಮುದ್ರಾ ಲೋನ್ ನಲ್ಲಿ ಎಷ್ಟು ವಿಧಗಳಿವೆ ಎಂಬುದು ಕಾಣಿಸುತ್ತದೆ. ಅದರಲ್ಲಿ ನಿಮಗೆ ಯಾವ ಲೋನ್ ಬೇಕು ಅದರ ಮೇಲೆ ಕ್ಲಿಕ್ ಮಾಡಬೇಕು.
ನಾವೀಗ ನಿಮಗೆ ಕಿಶೋರ್ ಮುದ್ರಾ ಲೋನ್ ಪಡೆಯಲು ಹೇಗೆ ಅಪ್ಲೈ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಹಾಗಾಗಿ ಎರಡನೆಯ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ ಒಂದು ಅರ್ಜಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಐವತ್ತು ಸಾವಿರದಿಂದ ಐದು ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಮೊದಲಿಗೆ ಅಲ್ಲಿ ನಿಮಗೆ ಎಷ್ಟು ಲೋನ್ ಬೇಕು ಎನ್ನುವುದರ ಬಗ್ಗೆ ಕೇಳುತ್ತದೆ ನಿಮಗೆ ಎಷ್ಟು ಬೇಕು ಅಷ್ಟು ಹಣವನ್ನು ಅಲ್ಲಿ ನಮೂದಿಸಬೇಕು. ನಂತರ ಅಲ್ಲಿ ನಾಲ್ಕು ವಿಧದಲ್ಲಿ ನೀವು ಅರ್ಜಿಯನ್ನು ತುಂಬಬೇಕು. ಮೊದಲಿಗೆ ಬಿಸಿನೆಸ್ ಬಗ್ಗೆ ಕೇಳುತ್ತದೆ ನಂತರ ಇತರ ಮಾಹಿತಿಗಳನ್ನು ಕೇಳುತ್ತದೆ ನಂತರ ಕೆಲವು ದಾಖಲೆಗಳನ್ನು ಅಟ್ಯಾಚ್ ಮಾಡಬೇಕಾಗುತ್ತದೆ. ಕೊನೆಯದಾಗಿ ಡಿಕ್ಲರೇಷನ್ ಕೇಳುತ್ತದೆ.
ನೀವು ಅಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ತುಂಬಬೇಕು. ನಂತರ ನೀವು ಯಾವ ಯಾವ ದಾಖಲೆಗಳನ್ನು ಒದಗಿಸಬೇಕು ಎಂದರೆ ನಿಮ್ಮ ಗುರುತು ಮತ್ತು ವಿಳಾಸದ ದಾಖಲೆಯನ್ನು ನಿಮ್ಮ ಫೋಟೋವನ್ನು ನಂತರ ನಿಮ್ಮ ಸಹಿಯನ್ನು ಅಪ್ಲೋಡ್ ಮಾಡಬೇಕು ನಂತರ ನಿಮ್ಮ ಉದ್ಯಮದ ಕೆವೈಸಿ ಅನ್ನು ಅಪ್ಲೋಡ್ ಮಾಡಬೇಕು ಅಂದರೆ ಅಲ್ಲಿ ಕೆಂಪು ಬಣ್ಣದಲ್ಲಿ ಅಲ್ಲಿ ಗುರುತು ಮಾಡಿರುವ ದಾಖಲೆಗಳನ್ನು ನೀವು ಅಪ್ಲೋಡ್ ಮಾಡಿದರೆ ಸಾಕಾಗುತ್ತದೆ. ನಂತರ ಮೂರನೇ ವ್ಯಕ್ತಿಯ ಗ್ಯಾರೆಂಟಿಯ ಬಗ್ಗೆ ಕೇಳುತ್ತದೆ ಅದನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ನಂತರ ನೆಕ್ಸ್ಟ್ ಎಂಬುದರ ಮೇಲೆ ಕ್ಲಿಕ್ ಮಾಡಿದಾಗ ಕೊನೆಯದಾಗಿ ಡಿಕ್ಲರೇಷನ್ ಕೇಳುತ್ತದೆ ಅಲ್ಲಿ ಐ ಅಂಡರ್ಸ್ಟ್ಯಾಂಡ್ ಎಂಬುದರ ಮೇಲೆ ಕ್ಲಿಕ್ ಮಾಡಿ ಐ ಅಗ್ರಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದನ್ನು ಸಬ್ ಮಿಟ್ ಮಾಡಬೇಕು. ನಂತರ ಅದರ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕು. ಈ ರೀತಿಯಾಗಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಲೋನ್ ತೆಗೆದುಕೊಳ್ಳುವುದಕ್ಕೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಈ ರೀತಿಯಾಗಿ ನೀವು ಕೂಡ ಹೊಸದಾದ ಉದ್ಯಮವನ್ನು ಅಥವಾ ವ್ಯಾಪಾರವನ್ನು ಪ್ರಾರಂಭಿಸುವುದಿದ್ದರೆ ನೀವು ಕೂಡ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿ ಸಾಲವನ್ನು ಪಡೆದುಕೊಂಡು ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430