ಪ್ರಿಯ ಓದುಗರೆ ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ.

ಇವರ ಹಾಗೆಯೇ ಇವರ ಮಕ್ಕಳು ಇಬ್ಬರೂ ಕೂಡಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕೆಲವು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ಇನ್ನು ರವಿಚಂದ್ರನ್ ಅವರ ಮಗಳು ಇತ್ತೀಚೆಗೆ ಅಷ್ಟೇ ಸೀರೆ ವ್ಯಾಪಾರವನ್ನು ಆರಂಭಿಸಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಿನಿಮಾ ಕಲಾವಿದರು ಅವರ ಕುಟುಂಬಗಳು ತಮ್ಮದೇ ಆದ ಸ್ವಂತ ಉದ್ಯಮವನ್ನು ಹೊಂದಿರುವುದು ಹೊಸ ವಿಚಾರವೇನಲ್ಲಾ. ಅದರಲ್ಲೂ ಕನ್ನಡದ ಸಿನಿಮಾ ಸ್ಟಾರ್ ಗಳ ಮಕ್ಕಳು ಕೆಲವರು ಸಿನಿಮಾ ಇಂಡಸ್ಟ್ರಿಗೆ ಬಂದು ನಟ ನಟಿಯಾದರೆ, ಮತ್ತೆ ಕೆಲವರು ತಮ್ಮದೇ ಆದ ಸ್ವಂತ ಉದ್ಯಮಗಳನ್ನು ಶುರು ಮಾಡಿಕೊಂಡು ಹೆಸರು ಮಾಡಿದ್ದಾರೆ.

ಅದೇ ರೀತಿ ಕ್ರೇಜಿ ಸ್ಟಾರ್ ಮಗಳು ಗೀತಾಂಜಲಿ ಅವರು ಕೊಂಚ ಸ್ವಾಭಿಮಾನಿ ಎಂದರೂ ತಪ್ಪಾಗಲಾರದು ಹಾಗಾಗಿ ಅವರೂ ಸಹ ತಮ್ಮದೇ ಆದ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಕಳೆದ ಎರಡು ವರ್ಷದ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೀತಾಂಜಲಿ ಅವರು ಕುಟುಂಬದ ಜೊತೆ ಸಮಯ ಕಳೆಯುವುದಷ್ಟೇ ಅಲ್ಲಾ ತಮ್ಮದೇ ಆದ ಸ್ವಂತ ಉದ್ಯಮ ಶುರು ಮಾಡಿ ಹೆಸರು ಮಾಡಿದ್ದಾರೆ. ಗೀತಾಂಜಲಿ ತನ್ನದೇ ಸ್ವಂತ ಉದ್ಯಮ ಆರಂಭ ಮಾಡಲು ಬೇರೆಯೇ ಕಾರಣ ಇದೆ. ಹಾಗಿದ್ದರೆ ಆ ಕಾರಣ ಏನು?

ಗೀತಾಂಜಲಿ ಅವರು ಓದುತ್ತಿದ್ದ ಸಮತದಲ್ಲಿಯೇ ತಮ್ಮದೇ ಆದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದನ್ನು ಶುರು ಮಾಡಿದ್ದರು. ಪುಟ್ಟ ಕಂಪನಿ ಮಾಡಿಕೊಂಡು ಅದರಲ್ಲಿ ಬರುತ್ತಿದ್ದ ಆದಾಯದಲ್ಲಿ ತಮ್ಮ ಖರ್ಚು ವೆಚ್ಛಗಳನ್ನು ಸರಿದೂಗಿಸಿಕೊಳ್ಳುತ್ತಿದ್ದರು ಅಷ್ಟೇ ಅಲ್ಲದೆ ಅಪ್ಪ ಅಮ್ಮನನ್ನು ಹಣ ಕೇಳುತ್ತಿರಲಿಲ್ಲ.

ರವಿಚಂದ್ರನ್ ಅವರು ತಮ್ಮ ಸ್ನೇಹಿತರ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶ ಕೊಡಿಸಲು ಕೇಳಿದರೂ ಸಹ ತನಗೆ ಬೇಡ ತನ್ನ ಕೈಲಾದದ್ದನ್ನು ನಾನು ಮಾಡುವೆ ಎಂದು ಎಲ್ಲಿಯೂ ಸಹ ತಾನು ರವಿಚಂದ್ರನ್ ಮಗಳು ಎಂದು ಹೇಳಿಕೊಳ್ಳದೇ ಸ್ವಂತ ಶ್ರಮದಿಂದ ತಮ್ಮ ಉದ್ಯಮ ನಡೆಸುತ್ತಿದ್ದರು ಗೀತಾಂಜಲಿ. ಆನಂತರ ತಮ್ಮ ವಿದ್ಯಾಭ್ಯಾಸವೆಲ್ಲಾ ಮುಗಿದ ನಂತರ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಜೊತೆಗೆ ಸೀರೆ ಉದ್ಯಮವನ್ನೂ ಸಹ ಶುರು ಮಾಡಿದರು. ತಮ್ಮದೇ ಆದ ಸ್ವಂತ ಸೀರೆ ಕಾರ್ಖಾನೆ ತೆರೆದು ಮೊದಲು ಪ್ರಿಂಟ್ ಆದ ಸೀರೆಯನ್ನು ರವಿಚಂದ್ರನ್ ಅವರು ಕೊಡಿಸಿದ್ದು ಮಾತ್ರ ವಿಶೇಷ ವ್ಯಕ್ತಿಯೊಬ್ಬರಿಗೆ.

ಹೌದು ಮಗಳ ಕಾರ್ಖಾನೆಯಲ್ಲಿ ಪ್ರಿಂಟ್ ಆದ ಮೊದಲ ಸೀರೆಯನ್ನು ಕೊಟ್ಟದ್ದು ಮತ್ಯಾರಿಗೂ ಅಲ್ಲ ನಟಿ ತಾರಾ ಅವರಿಗೆ. ಹೌದು ರವಿಚಂದ್ರನ್ ಅವರ ಸಿಪಾಯಿ ಸಿನಿಮಾ 25 ವರ್ಷ ಪೂರೈಸಿದ ಕಾರಣ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ತಾರಾ ಅವರು ಈ ವಿಚಾರವನ್ನು ಹಂಚಿಕೊಂಡರು. ಈಶ್ವರಿ ಪ್ರೊಡಕ್ಷನ್ಸ್ ಎಂದರೆ ಸಾಕು. ಅದರದ್ದೇ ಆದ ಘನತೆ ಗೌರವ ಇದೆ. ನಾವುಗಳು ಆ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದ್ದೇ ನಮ್ಮ ಸೌಭಾಗ್ಯ. ನಾನು ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಸಿಪಾಯಿ ಸಿನಿಮಾದಲ್ಲಿ ರುಕ್ಕಮ್ಮಾ ಹಾಡಿನಲ್ಲಿ ನನ್ನನ್ನೇ ಹೈಲೈಟ್ ಮಾಡಿದ್ರು.

ರವಿಚಂದ್ರನ್ ಅವರದ್ದು ಒಂದು ರೀತಿ ತಾಯಿ ಹೃದಯ. ಸೆಟ್ ನಲ್ಲಿ ಇದ್ದವರನ್ನೆಲ್ಲಾ ಬಹಳ ಕಾಳಜಿ ಮಾಡುತ್ತಿದ್ದರು. ಊಟದ ಸಮಯದಲ್ಲಂತೂ ಖುದ್ದು ಅವರೇ ನಿಂತು ಅದು ತಿನ್ನಿ ಇದು ತಿನ್ನಿ ಅನ್ನೋರು. ಈಗಲೂ ರವಿ ಸರ್ ಅವರನ್ನು ಭೇಟಿ‌ ಮಾಡಿದ್ರೆ ನಮ್ಮ ತಾಯಿಯ ಜೊತೆ ಇದ್ದ ರೀತಿಯೇ ಆಗುತ್ತದೆ.

ಅವರ ಮಗಳು ಸೀರೆ ಕಾರ್ಖಾನೆ ತೆರೆದಾಗಲೂ ಮೊದಲು ಪ್ರಿಂಟ್ ಆದ ಸೀರೆಯನ್ನು ನನಗಾಗಿ ಎತ್ತಿಟ್ಟು ಫೋನ್ ಮಾಡಿ ನನ್ನನ್ನು ಕರೆದು ಅವರ ಮಗಳ ಕೈಯಿಂದ ನನಗೆ ಕೊಡಿಸಿದ್ದರು. ಅದು ರವಿ ಸರ್ ಅವರ ದೊಡ್ಡ ಗುಣ. ಅವರಿಗೆ ಎಂದೂ ಅವರೇ ಸಾಟಿ ಎಂದು ರವಿಚಂದ್ರನ್ ಅವರ ದೊಡ್ಡತನದ ಬಗ್ಗೆ ಸಂತೋಷದಿಂದ ಮಾತನಾಡಿದರು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!