ಸೀತಾಫಲ ಹಣ್ಣಿನಲ್ಲಿ ಅಪಾರ ಪ್ರಮಾಣದ ನಾರಿನಂಶ, ವಿಟಮಿನ್ ಮತ್ತು ಮಿನರಲ್ ಇವೆ. ಇದು ಕಣ್ಣು, ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಹಣ್ಣಿನ ಮೂಲವೆಂದರೆ ಅದು ಅಮೆರಿಕ. ಆದರೆ ಭಾರತದಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸೀತಾಫಲ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಗುಜರಾತ್, ಮಧ್ಯಪ್ರದೇಶ ಮತ್ತು ಛತ್ತೀಸ್ ಘರ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ.

ಕಸ್ಟರ್ಡ್ ಸೇಬು ಉಷ್ಣವಲಯದ ಹಣ್ಣಾಗಿದ್ದು, ಸಕ್ಕರೆ ಸೇಬು, ಚೆರಿಮೋಯಾ, ಸೀತಾಫಲ, ಷರೀಫಾ ಮತ್ತು ಎತ್ತುಗಳ ಹೃದಯ ಎಂಬ ವಿವಿಧ ಹೆಸರುಗಳೊಂದಿಗೆ ಇದನ್ನು ಕರೆಯಲಾಗುತ್ತದೆ. ಇದರ ವಿನ್ಯಾಸ ಮತ್ತು ಬಿಳಿ ತೆಳ್ಳನೆಯ ಅಂಶ ಹೊಂದಿರುತ್ತದೆ ಮತ್ತು ಬೀಜಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣದ್ದಾಗಿರುತ್ತವೆ. ಈ ಲೇಖನದ ಮೂಲಕ ನಾವು ಪ್ರತೀದಿನ ನಿಯಮಿತ ಪ್ರಮಾಣದಲ್ಲಿ ಒಂದು ಸೀತಾಫಲ ಹಣ್ಣನ್ನು ತಿನ್ನುವುದರಿಂದ ನಮಗೇನು ಲಾಭವಿದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸೀತಾಫಲ ಇದು ಸಾಮಾನ್ಯವಾಗಿ ಹಳ್ಳಿಯಲ್ಲಿ ಹೆಚ್ಚಾಗಿ ದೊರೆಯುವ ಹಣ್ಣು. ಇದರಲ್ಲಿ ವಿಟಮಿನ್ ಎ , ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಇದೆ. ಕ್ಯಾಲ್ಸಿಯಂ ಅಂಶ ಇದು ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವುದು ನಮಗೆಲ್ಲ ತಿಳಿದೇ ಇದೆ. ಹಳ್ಳಿ ಸೊಗಡಿನ ಹಣ್ಣನ್ನು ತಿನ್ನಬೇಕು ಎನಿಸಿದವರು ಈ ಸೀತಾಫಲ ಹಣ್ಣನ್ನು ಧಾರಾಳವಾಗಿ ತಿನ್ನಬಹುದು.

ಇದರಲ್ಲಿ ಜಿಂಕ್, ಮ್ಯಾಗ್ನೀಸ್ , ಮೆಗ್ನೀಷಿಯಂ ಎಲ್ಲಾ ಅಂಶಗಳೂ ಸಹ ಇವೆ. ಈ ಎಲ್ಲಾ ಅಂಶಗಳು ಸೀತಾಫಲ ಹಣ್ಣಿನಲ್ಲಿ ಇರುವ ಕಾರಣ ಇದನ್ನು ಸೇವನೆ ಮಾಡುವುದರಿಂದ ನಮ್ಮ ಕಣ್ಣಿನ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು. ಅಷ್ಟೇ ಅಲ್ಲದೆ ನಮ್ಮ ವಸಡು, ರಕ್ತ ಪರಿಚಲನೆ, ಚರ್ಮದ ಆರೋಗ್ಯಕ್ಕೂ ಕೂಡಾ ಈ ಸೀತಾಫಲ ಹಣ್ಣು ಬಹಳ ಒಳ್ಳೆಯದು.

ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಉರಿಯೂತದಿಂದ ದೇಹವನ್ನೂ ರಕ್ಷಿಸುತ್ತದೆ. ಇದರಲ್ಲಿರುವ ಆಂಟಿ ಇನ್ಫಾಮೇಟರಿ ಗುಣವೂ ದೇಹದಲ್ಲಿನ ಉರಿಯೂತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸೀತಾಫಲ ಎಲೆಯು ಸಹ ಉತ್ತಮವಾದ ಆಂಟಿ-ಇನ್ಫಾಮೇಟಾರಿ ಗುಣವನ್ನು ಹೊಂದಿದೆ. ಸೀತಾಫಲ ಹಣ್ಣಿನಲ್ಲಿ ಉನ್ನತ ಗುಣಮಟ್ಟದ ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಉತ್ತಮ ನಾರಿನಂಶ ಹೊಂದಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಅತಿಸಾರದ ಲಕ್ಷಣಗಳಿದ್ದರೂ ಸಹ ಸೀತಾಫಲ ಹಣ್ಣು ತಿನ್ನುವುದರಿಂದ ಇದರಿಂದ ಗುಣಮುಖ ಹೊಂದಬಹುದು.

ಸೀತಾಫಲ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಆಕ್ಸಿಡೆಂಟ್ ಇದೆ. ಸೀತಾಫಲ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿ ರಾಡಿಕಲ್ಸ್ ಉತ್ಪತ್ತಿ ಮಾಡುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದಿಲ್ಲ. ಇದರಲ್ಲಿರುವ ಉತ್ತಮ ಅಂಶಗಳು ನೀವು ಕಾಯಿಲೆ ಬೀಳದಂತೆ ಗಮನ ವಹಿಸುತ್ತದೆ.

ಉತ್ತಮವಾದ ಚರ್ಮವನ್ನು ಹೊಂದಲು ಸಹಕಾರಿಯಾಗಿದೆ. ಸೀತಾಫಲ ಹಣ್ಣಿನಲ್ಲಿ ವಿವಿಧ ರೀತಿಯ ಆಂಟಿಆಕ್ಸಿಡೆಂಟ್ ಗಳುಇರುವ ಕಾರಣ ಇದರಲ್ಲಿ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಂಶಗಳಿವೆ. ಇದರಲ್ಲಿರುವ ಉತ್ತಮ ಅಂಶಗಳು ಮಾಲಿನ್ಯದಿಂದ ನಿಮ್ಮ ದೇಹವನ್ನು ಕಾಪಾಡುತ್ತದೆ.

1 ಕಪ್ ಸೀತಾಪಲ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಒಂದು ದಿನಕ್ಕೆ ಬೇಕಾಗುವ 10% ಪೊಟ್ಯಾಶಿಯಂ, 6% ಮೆಗ್ನೀಷಿಯಂ ಅಂಶವಿದೆ. ಪೊಟ್ಯಾಶಿಯಂ ಮತ್ತು ಮೆಗ್ನೀಷಿಯಂ ಅಂಶಗಳು ನಿಮ್ಮ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.ಸೀತಾಫಲ ಹಣ್ಣನ್ನು ತಿನ್ನುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿರುತ್ತದೆ.

ಸೀತಾಪಲ ಹಣ್ಣು ಇದು ಕಣ್ಣಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ರಿಬೋಫ್ಲಾವಿನ್ ಮತ್ತು ವಿಟಮಿನ್ ಸಿ ಯ ಅತ್ಯುತ್ತಮ ಮೂಲವು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ದೇಹದಲ್ಲಿನ ಇತರ ಕಣ್ಣಿನ ಸಂಬಂಧಿತ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇದು ಕಣ್ಣುಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡವನ್ನು ತಡೆಯುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!