ನಿತ್ಯವೂ ಮೊಸರನ್ನು ಸೇವಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಬಹುತೇಕ ಜನರು ತಿಳಿದಿದ್ದಾರೆ. ಅದರಲ್ಲಿ ಸಮೃದ್ಧವಾಗಿರುವ ಕ್ಯಾಲ್ಸಿಯಂ, ವಿಟಮಿನ್, ಕ್ಯಾಲೊರಿ, ಪ್ರೋಟೀನ್‍ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ ಎನ್ನುವ ಭಾವನೆಗಳಿವೆ. ನಿಜ, ಮೊಸರು ಸೇವನೆಯಿಂದ ಸಾಕಷ್ಟು ಆರೋಗ್ಯಕರ ಫಲಿತಾಂಶವನ್ನು ಪಡೆಯಬಹುದು. ಮೊಸರಿನಲ್ಲಿ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ.
ಅವು ಆರೋಗ್ಯಕರ ಚಯಾಪಚಯ ಕ್ರಿಯೆಗಳಿಗೆ ಉತ್ತೇಜನ ನೀಡುತ್ತವೆ. ಸಾಕಷ್ಟು ಜನರು ಮಲಬದ್ಧತೆಯ ಕಾರಣದಿಂದ ಸಾಕಷ್ಟು ಔಷಧಗಳ ಹಾಗೂ ಚಿಕಿತ್ಸೆಯ ಮೊರೆ ಹೋಗುತ್ತಾರೆ. ಅದರ ಬದಲು ಜಾನುವಾರುಗಳ ಹಾಲಿನಿಂದ ತಯಾರಿಸಲಾಗುವ ಮೊಸರನ್ನು ಸೇವಿಸಿದರೆ ಸಮಸ್ಯೆಯಿಂದ ಸುಲಭ ಪರಿಹಾರ ಪಡೆದುಕೊಳ್ಳಬಹುದು. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಸಾಕಷ್ಟು ಆರೋಗ್ಯಕರವಾದ ಪೋಷಕಾಂಶಗಳನ್ನು ಹೊಂದಿರುವ ಮೊಸರಿನಿಂದ ನಾನಾ ಬಗೆಯ ಸಿಹಿ ತಿಂಡಿಗಳನ್ನು ಹಲವಾರು ಅಡುಗೆಗಳನ್ನು ಸಹ ಮಾಡಲಾಗುತ್ತದೆ. ಈ ಲೇಖನದಲ್ಲಿ ನಾವು ಮೊಸರಿನಿಂದ ಮಾಡಬಹುದಾದ ಒಂದು ಅಡುಗೆಯ ಬಗ್ಗೆ ತಿಳಿದುಕೊಳ್ಳೋಣ.
ಮೊಸರಿನಿಂದ ಮಾಡುವ ಅಡಿಗೆಯ ಬಗ್ಗೆ ತಿಳಿಯುವುದಕ್ಕೂ ಮೊದಲು ಸಂಕ್ಷಿಪ್ತವಾಗಿ ಮೊಸರಿನ ಕೆಲವು ಆರೋಗ್ಯಕರ ಲಾಭಗಳ ಬಗ್ಗೆ ನೋಡೋಣ. ಮೊಸರಿನಲ್ಲಿ ರಿಬೋಫ್ಲಾವಿನ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಇತ್ಯಾದಿ ಪೋಷಕಾಂಶಗಳಿವೆ. ಮತ್ತೊಂದು ಅಂಶವೆಂದರೆ ಮೊಸರು ತಿಂದರೆ ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳು ಸದೃಢವಾಗಿರುತ್ತವೆ. ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು. ಮೊಸರು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಮೊಸರು ಸಹಾಯಕ. ಇಷ್ಟೇ ಅಲ್ಲದೆ ಇನ್ನೂ ಹತ್ತು ಹಲವಾರು ಪ್ರಯೋಜನಗಳು ನಮಗೆ ಮೊಸರಿನಿಂದ ಸಿಗುತ್ತವೆ. ಹಾಗಿದ್ದರೆ ಮೊಸರಿನಿಂದ ಮಾಡುವ ಈ ಒಂದು ಅಡುಗೆಯನ್ನು ಮಾಡುವ ವಿಧಾನ ಹೇಗೆ? ಮತ್ತು ಏನೆಲ್ಲಾ ಸಾಗ್ರಿಗಳು ಬೇಕು ಎನ್ನುವುದನ್ನು ನಾವು ನೋಡೋಣ.
ಮೊಸರು ಒಗ್ಗರಣೆ ಇದಕ್ಕೆ ಬೇಕಾಗುವ ಸಾಮಗ್ರಿಗಳು ಮೊಸರು ಒಂದು ಕಪ್, ಕಡಲೆ ಬೇಳೆ, ಜೀರಿಗೆ, ಸಾಸಿವೆ ಅರಿಶಿನ, ಎಣ್ಣೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಚಿಕ್ಕದಾಗಿ ಕಟ್ ಮಾಡಿದ ಈರುಳ್ಳಿ ಒಂದು, ಜಜ್ಜಿದ ಬೆಳ್ಳುಳ್ಳಿ ಎಸಳು 5, ಹಸಿಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ 2 , ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ, ಮೊದಲು ಒಂದು ಪಾತ್ರೆಗೆ ಮೊಸರು , ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅದಕ್ಕೆ ಒಂದು ಲೋಟ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಆದ ನಂತರ ಕಡಲೆ ಬೇಳೆ, ಜೀರಿಗೆ ಸಾಸಿವೆ ಹಾಕಿ ಸಿಡಿದ ನಂತರ, ಜಜ್ಜಿಟ್ಟ ಬೆಳ್ಳುಳ್ಳಿ ( ಬೇಕಿದ್ದರೆ ಮಾತ್ರ) ಕೆಂಪು ಮೆಣಸಿನಕಾಯಿ ಮತ್ತು ಹಸಿಮೆಣಸಿನಕಾಯಿ ಎರಡನ್ನೂ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು.
ನಂತರ ಅದಕ್ಕೆ ಈರುಳ್ಳಿ ಮ್ಟ್ಟು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ನಂತರ ಕೊನೆಯಲ್ಲಿ ಅರಿಶಿನ ಪುಡಿ ಸೇರಿಸಿ ಒಮ್ಮೆ ಮಿಕ್ಸ್ ಮಾಡಿ ಸ್ಟೌ ಆರಿಸಿ ಒಂದೆರಡು ನಿಮಿಷ ತಣ್ಣಗೆ ಆಗಲು ಬಿಡಬೇಕು. ನಂತರ ಕಾಲ್ ಕಪ್ ಅಷ್ಟು ನೀರು ಸೇರಿಸಿ ನಂತರ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಹಾಗೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಅನ್ನದ ಜೊತೆ ಸವಿಯಲು ರುಚಿಯಾದ ಮೊಸರು ಒಗ್ಗರಣೆ ರೆಡಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430