ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು ಅಮೂಲ್ಯ. 10ಕ್ಕೂ ಅಧಿಕ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡ ಅವರು ನಂತರ ‘ಚೆಲುವಿನ ಚಿತ್ತಾರ’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದರು. ನಂತರದ 10 ವರ್ಷಗಳಲ್ಲಿ ಅಮೂಲ್ಯ ಮಾಡಿದ ಸಿನಿಮಾಗಳ ಸಂಖ್ಯೆ ಕಡಿಮೆ ಎನಿಸಿದರೂ, ಅವರು ಗಳಿಸಿಕೊಂಡ ಅಭಿಮಾನಿ ಬಳಗ ದೊಡ್ಡದು. ಆದರೆ ಇತ್ತೀಚೆಗೆ ಅಮೂಲ್ಯ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದಾರೆ.
2017ರಲ್ಲಿ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಯಾವ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲೇ ಇಲ್ಲ. ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗೋಲ್ಡನ್ ಸ್ಟಾರ್ ಎಂಬ ಬಿರುದನ್ನು ಗಣೇಶ್ ರವರು ಪಡೆದುಕೊಂಡಿದ್ದರೆ ಗೋಲ್ಡನ್ ಕ್ವೀನ್ ಎಂದು ನಟಿ ಅಮೂಲ್ಯ ಪಡೆದುಕೊಂಡಿದ್ದಾರೆ. ಸದ್ಯ ಇದೀಗ ಸಿನಿಮಾರಂಗದಿಂದ ದೂರ ಉಳಿದ್ದರೂ ಕೂಡ ಆಗಾಗ ಸುದ್ದಿಯಲ್ಲಿಯೇ ಇರುತ್ತಾರೆ. ತಮ್ಮ ಮಾವನಿಗಾಗಿ ನಟಿ ಅಮೂಲ್ಯ ರಾಜಕೀಯ ಪ್ರವೇಶ ಮಾಡಿದ್ದು, ಬೆಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಅವರ ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
ತನ್ನ ಮಾವನ ಜೊತೆ ರಾಜಕೀಯ ಕೆಲಸಗಳಲ್ಲಿ ಗುರುತಿಸಿಕೊಳ್ಳುವ ಅಮೂಲ್ಯ ಅವರು ಆಗಾಗ ರಾಜಕೀಯ ವಿಚಾರದಿಂದಾಗಿ ಬಹಳ ಸದ್ದು ಮಾಡುತ್ತಿರುತ್ತಾರೆ. ಸದ್ಯ ಮದುವೆಯಾದ ಬಳಿಕ ಅಮೂಲ್ಯ ಮತ್ತೆ ಯಾವುದೇ ಸಿನಿಮಾಗಾಗಿ ಬಣ್ಣ ಹಚ್ಚಲೇ ಇಲ್ಲ. ನಟಿ ಅಮೂಲ್ಯ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿಬಂದರೂ ಕೂಡ ಇದುವರೆಗೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ ಎಂಬುದು ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ. ಪತಿ ಹಾಗೂ ಸಂಸಾರ ಅಂತ ಸಂತೋಷದ ಜೀವನ ನಡೆಸುತ್ತಿರುವ ಅಮೂಲ್ಯ ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದಾರೆ. ಸದ್ಯ ಇದೀಗ ಗೋಲ್ಡನ್ ಕ್ವೀನ್ ಅಮೂಲ್ಯ ಅವರು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದು ಇದು ಅವರ 28 ನೇ ವರ್ಷದ ಹುಟ್ಟುಹಬ್ಬವಾಗಿದೆ.
ಇನ್ನು ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಉಡುಗೊರೆ ಕಳುಹಿಸಿಕೊಟ್ಟಿರುವುದು ಮೂಲ್ಯ ಅವರಿಗೆ ಸಂಭ್ರಮ ಹೆಚ್ಚಿಸಿದೆ. ಅಮೂಲ್ಯ ಚಿಕ್ಕ ವಯಸ್ಸಿನಿಂದಲೂ ಕೂಡ ಅಮೂಲ್ಯ ಕಂಡರೆ ದರ್ಶನ್ ರವರಿಗೆ ಬಹಳಾನೇ ಇಷ್ಟ. ಅಲ್ಲದೇ ಸ್ವಂತ ತಂಗಿಯಂತೆ ಅಮೂಲ್ಯ ಅವರನ್ನು ಕಾಣುವುದು ವಿಶೇಷವಾಗಿದೆ. ಇನ್ನು ಪ್ರತಿ ವರ್ಷ ಕೂಡ ಡಿ ಬಾಸ್ ಗೆ ಅಮೂಲ್ಯ ರವರು ರಾಖಿ ಹಬ್ಬದಂದು ವಿಶೇಷ ರಾಖಿಯನ್ನು ಕಳುಹಿಸಿಕೊಡುತ್ತಾರೆ. ಇನ್ನು ಅಮೂಲ್ಯ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ಡಿ ಬಾಸ್ ದರ್ಶನ್ ರವರು ವಿಶೇಷ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದು ತನ್ನ ಪ್ರೀತಿಯ ತಂಗಿಗೆ ಸಂತೋಷ ತಂದಿದ್ದಾರೆ. ದರ್ಶನ್ ಅವರು ವಿಶೇಷವಾದ ಹೂ ಗುಚ್ಚ ಬಗೆಬಗೆಯ ಉಡುಪುಗಳು ಸ್ವೀಟ್ ಬಾಕ್ಸ್ ಗಳನ್ನು ಅಮೂಲ್ಯ ಅವರ ಮನೆಗೆ ಕಳುಹಿಸಿ ಕೊಟ್ಟಿದ್ದು ಜೊತೆಗೆ ಕರೆ ಮಾಡಿ ಹುಟ್ಟು ಹಬ್ಬದ ಶುಭಾಷಯ ಕೂಡ ತಿಳಿಸಿದ್ದಾರೆ.
ಇನ್ನು ಡಿ ಬಾಸ್ ಬರ್ತ್ ಡೇ ದಿನ ಕೂಡ ಮಿಸ್ ಮಾಡದೆ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ಡಿ ಬಾಸ್ ಮನೆಗೆ ಹೋಗಿ ಕೇಕ್ ಕತ್ತರಿಸಿ ಸಂಭ್ರಮಿಸುವುದರ ಜೊತೆಗೆ ಒಂದು ಕ್ಯೂಟ್ ಸೆಲ್ಫಿಯನ್ನು ತಗೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಾರೆ. ಇಷ್ಟರ ಮಟ್ಟಿಗೆ ಇಬ್ಬರು ಬಾಂಧವ್ಯವನ್ನು ಹೊಂದಿದ್ದು ಇನ್ನು ಚಿಕ್ಕ ವಯ್ಯಸ್ಸಿನಿಂದ ಕೂಡ ಅಮೂಲ್ಯ ಅವರು ಆಡಿ ಬೆಳೆದಿರುವುದನ್ನು ನೋಡಿರುವ ದಚ್ಚು ತಮ್ಮ ಸಿನಿಮಾಗಳಲ್ಲಿಯೂ ಕೂಡ ಅಮೂಲ್ಯ ಅವರ ನಟನೆಯನ್ನು ನೋಡಿ ಬಹಳ ಮೆಚ್ಚಿಕೊಂಡು ಅಮೂಲ್ಯ ಅವರನ್ನು ಮುದ್ದು ಮಾಡುತ್ತಿದ್ದರಂತೆ.
ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಡಿ ಬಾಸ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ತಾಯಿ ಚಾಮುಂಡೇಶ್ವರಿ ತಾಯಿ ಒಳ್ಳೆಯದ್ ಮಾಡಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ಅಮೂಲ್ಯ ರವರು ಇತ್ತೀಚಿಗಷ್ಟೆ ಪತಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿ ಅಪಾರ ಮೆಚ್ಚುಗೆ ಗಳಿಸಿದ್ದರು. ಅಮೂಲ್ಯ ಪತಿ ಜಗದೀಶ್ ರವರು ಇತ್ತೀಚಿಗಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಜಗದೀಶ್ ಹಟ್ಟುಹಬ್ಬವನ್ನು ಆರ್ ಆರ್ ನಗರದ ಕೊರೊನಾ ವಾರಿಯರ್ ತಂಡದ ಸ್ನೇಹಿತರು ಆಚರಣೆ ಮಾಡಿದ್ದಾರೆ. ರೈತರೊಬ್ಬರಿಂದ ಕರುವನ್ನು ಕೊಂಡು ಅದಕ್ಕೆ ರಾಮ ಎಂದು ನಾಮಕರಣ ಮಾಡಿ ಗೋಶಾಲೆಗೆ ದಾನ ನೀಡುವ ಮೂಲಕ ಜನ್ಮದಿನದ ಸಂಭ್ರಮವನ್ನು ಹೆಚ್ಚಿಸಿದ್ದಾರೆ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತು.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430