ಸಾಮಾನ್ಯವಾಗಿ ಎಲ್ಲರೂ ಹೇಳುವುದು ಬೆಳಿಗ್ಗೆ ಬೇಗನೆ ಏಳುವುದು ಆರೋಗ್ಯಕ್ಕೆ ಹಿತಕರ ಎಂದು ನೀವು ಆಧ್ಯಾತ್ಮಗುರುಗಳನ್ನು ಕೇಳಿ ಯೋಗಪಟುಗಳನ್ನು ಕೇಳಿ ಆಹಾರ ತಜ್ಞರನ್ನು ಕೇಳಿ ಅವರು ಹೇಳುವುದು ಇದು ಉತ್ತಮ ಅಭ್ಯಾಸ ಎಂದು. ಬೆಳಿಗ್ಗೆ ಬೇಗ ಏಳುವುದರಿಂದ ಶುದ್ಧವಾದ ಗಾಳಿ ಸಿಗುತ್ತದೆ ಬೆಳಿಗ್ಗೆ ಬೇಗ ಏಳುವುದರಿಂದ ದಿನ ದಿನಪೂರ್ತಿ ಮೈಂಡ್ ಫ್ರೆಶ್ ಆಗಿರುತ್ತದೆ. ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಮಾಡುವುದು ದೇಹಕ್ಕೆ ಹಿತಕಾರಕ ಮತ್ತು ಇದರಿಂದ ಆರೋಗ್ಯ ವೃದ್ಧಿಸುತ್ತದೆ. ಇದು ಸಾಮಾನ್ಯವಾಗಿ ಎಲ್ಲರೂ ಹೇಳುವ ಮಾತು ನಾವಿಂದು ನಿಮಗೆ ಬೆಳಿಗ್ಗೆ ಬೇಗನೆ ಏಳುವುದರಿಂದ ಆಯುರ್ವೇದದ ಪ್ರಕಾರ ಯಾವರೀತಿ ಪ್ರಯೋಜನ ಎಂಬುದನ್ನು ತಿಳಿದುಕೊಳ್ಳೋಣ
ಬೆಳಿಗ್ಗೆ ಬೇಗನೆ ಎದ್ದು ಏನು ಮಾಡಬೇಕು ಏನು ಮಾಡಿದರೆ ಯಾವ ಪ್ರಯೋಜನವಾಗುತ್ತದೆ ಎಂಬುದನ್ನು ಆಯುರ್ವೇದದ ದೃಷ್ಟಿಕೋನದಿಂದ ನೋಡೋಣ. ನೀವು ಬೆಳಿಗ್ಗೆ ಐದು ಗಂಟೆಗೆ ಏಳಬೇಕು ಎಂದರೆ ನೀವು ರಾತ್ರಿ ಬೇಗನೆ ಮಲಗಿಕೊಳ್ಳಬೇಕು.ನಾನು ಮಲಗುವುದೇ ರಾತ್ರಿ ಹನ್ನೆರಡುವರೆಗೆ ಬೆಳಿಗ್ಗೆ ಐದು ಗಂಟೆಗೆ ಎಳುತ್ತೇನೆ ಎಂದರೆ ನೀವೇ ನಿಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರಿ. ರಾತ್ರಿ ಬೇಗ ಮಲಗಿದರೆ ಮಾತ್ರ ಬೆಳಿಗ್ಗೆ ಬೇಗ ಎಳುವುದಕ್ಕೆ ಸಾಧ್ಯ. ರಾತ್ರಿ ನೀವು ಯಾವೆಲ್ಲ ಯೋಚನೆಯನ್ನು ಮಾಡುತ್ತಾ ಮಲಗಿರುತ್ತಿರಿ ಅದೇ ರೀತಿ ನಿಮ್ಮ ಮನಸ್ಸು ಯೋಚಿಸುತ್ತದೆ ನೀವು ಒಂದು ವೇಳೆ ಆಧ್ಯಾತ್ಮದ ಬಗ್ಗೆ ಯೋಚಿಸುತ್ತಾ ಮಲಗಿದ್ದರೆ ಬೆಳಿಗ್ಗೆ ಏಳುವಾಗ ನಿಮ್ಮ ದಿನ ಆ ವಿಚಾರದೊಂದಿಗೆ ಮುಂದುವರೆಯುತ್ತದೆ. ರಾತ್ರಿ ನೀವು ಮಲಗುವಾಗ ವಿಚಿತ್ರವಾದ ಆಲೋಚನೆಗಳನ್ನು ಟಿವಿಯಲ್ಲಿ ಕ್ರೈಮ್ ವಿಷಯಗಳನ್ನು ನೋಡಿಕೊಂಡು ಅದರ ಬಗ್ಗೆ ವಿಚಾರ ಮಾಡುತ್ತಾ ಮಲಗಿದರೆ ರಾತ್ರಿಯೆಲ್ಲ ಮನಸ್ಸು ತೊಳಲಾಟವನ್ನು ಅನುಭವಿಸುತ್ತದೆ. ನೀವು ಬೆಳಿಗ್ಗೆ ಎದ್ದಾಗಲೂ ಕೂಡ ನಿಮ್ಮ ಮನಸ್ಸು ಯಾವುದೊ ಗೊಂದಲದಲ್ಲಿ ಇರುತ್ತದೆ. ಆದ್ದರಿಂದ ನೀವು ಬೆಳಿಗ್ಗೆ ಬೇಗನೆ ಏಳುವುದಾದರೆ ಅದರ ಪೂರ್ವಭಾವಿ ತಯಾರಿ ಹಿಂದಿನ ದಿನ ರಾತ್ರಿಯೇ ಮಾಡಿಕೊಂಡಿರಬೇಕು.
ಸಾಮಾನ್ಯವಾಗಿ ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಏಳುವುದು ಉತ್ತಮವಾದದ್ದು ಅಂದರೆ ಬೆಳಿಗ್ಗೆ 5:00 ಗಂಟೆಗೆ ಎದ್ದೇಳಿ. ಎದ್ದ ತಕ್ಷಣ ನೀವು ಉಷಾಪಾನವನ್ನು ಮಾಡಬೇಕು ಉಷಾಪಾನ ಎಂದರೆ ನೀರನ್ನು ಕುಡಿಯುವಂತಹದ್ದು ನೀವು ಬೆಳಿಗ್ಗೆ ಎದ್ದು ಬಿಸಿನೀರನ್ನು ಕುಡಿದರೆ ಉತ್ತಮ ಬಿಸಿ ನೀರನ್ನು ಕುಡಿದ ತಕ್ಷಣ ತೇಗು ಬರುತ್ತದೆ ತೇಗು ಬಂದಾಗ ಯಾವುದೇ ರೀತಿಯ ವಾಸನೆ ಇರಬಾರದು ಒಂದುವೇಳೆ ತೇಗು ಬಂದಾಗ ವಾಸನೆ ಘಮ ಇದ್ದರೆ ನೀವು ಹಿಂದಿನ ದಿನ ತಿಂದ ಆಹಾರ ಹಾಗೆಯೇ ಜಠರದಲ್ಲಿ ಉಳಿದಿದೆ ಅದು ಜೀರ್ಣವಾಗಿಲ್ಲ ಎಂದು ಅರ್ಥ. ಹಾಗಾಗಿ ನೀವು ಯಾವುದೇ ರೀತಿಯ ಆಹಾರವನ್ನು ತೆಗೆದುಕೊಳ್ಳಬಾರದು ಕೆಲವೊಬ್ಬರಿಗೆ ಬೆಳಿಗ್ಗೆ ಎದ್ದ ತಕ್ಷಣ ಬೇಡ್ ನಿಂದ ಏಳುವ ಮೊದಲೇ ಬೆಡ್ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ನೀವು ಉಷಾಪಾನವನ್ನು ಮಾಡಿದ ನಂತರ ನಿಮ್ಮ ಜೀರ್ಣ ಪ್ರಕ್ರಿಯೆ ನಿಮಗೆ ಅರ್ಥವಾಗಿರುತ್ತದೆ. ಇದಾದನಂತರ ಮಲವಿಸರ್ಜನೆ ಇದು ಬಹಳ ಮುಖ್ಯವಾದದ್ದು ದೇಹವನ್ನು ನಿರ್ಮಲವಾಗಿಟ್ಟು ಕೊಳ್ಳಬೇಕು ಎಂದರೆ ಮಲವಿಸರ್ಜನೆ ಮಾಡುವುದು ಒಳ್ಳೆಯದು ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಮುಖ್ಯವಾದ ಕಾರಣ ಬೆಳಿಗ್ಗೆ ಲೇಟಾಗಿ ಏಳುವುದು. ತ್ರಿದೋಷ ಸಿದ್ಧಾಂತದ ಪ್ರಕಾರ ಹೇಳುವುದಾದರೆ ಯಾವ ರೀತಿ ನಮ್ಮ ದೇಹ ತ್ರಿದೋಷಗಳಿಂದ ಮಾಡಲ್ಪಟ್ಟಿರುತ್ತದೆ ಯೋ ಅಂದರೆ ಪಿತ್ತ ಕಫ ವಾತ. ಅದೇ ರೀತಿ ಸಮಯಗಳಲ್ಲಿಯೂ ತ್ರಿದೋಷ ಉಂಟು. ಬೆಳಗ್ಗಿನ ಜಾವದಲ್ಲಿ ಒಂದು ದೋಷ ಪ್ರಬಲವಾಗಿರುತ್ತದೆ ಮಧ್ಯಾಹ್ನದ ಸಮಯದಲ್ಲಿ ಇನ್ನೊಂದು ದೋಷ ಪ್ರಬಲವಾಗಿರುತ್ತದೆ ಮತ್ತು ಸಾಯಂಕಾಲ ಮತ್ತೊಂದು ದೋಷ ಪ್ರಬಲವಾಗಿರುತ್ತದೆ 5:00 ಗಂಟೆಯ ನಸುಕಿನಲ್ಲಿ ಕಫ ಪ್ರಧಾನವಾಗಿರುತ್ತದೆ ಬೆಳಗ್ಗಿನ ಜಾವ 5:00 ಗಂಟೆಯ ಸುಮಾರಿಗೆ ಪ್ರಕೃತಿಯಲ್ಲಿ ಪ್ರಧಾನವಾಗಿರುವ ಕಫದ ಪ್ರಭಾವ ನಮ್ಮ ದೇಹದ ಮೇಲೂ ಉಂಟಾಗುತ್ತದೆ ನಮ್ಮ ದೇಹದಲ್ಲಿಯೂ ಬೆಳಗ್ಗಿನ ಜಾವ ಕಫ ಪ್ರಕೋಪ ವಾಗಿರುತ್ತದೆ ಪ್ರಕೋಪವಾಗಿರುವಂತಹ ಸಮಯದಲ್ಲಿಯೇ ಮಲವಿಸರ್ಜನೆಯನ್ನು ಮಾಡಬೇಕು.
ನೀವು ತಡವಾಗಿ ಅಂದರೆ ಎಂಟು ಗಂಟೆಯ ಸುಮಾರಿಗೆ ಅಂದರೆ ವಾತ ಪ್ರಕೋಪ ವಾಗುವ ಸಂದರ್ಭದಲ್ಲಿ ಮಲ ಒಣಗಿರುತ್ತದೆ ಆಗ ಸರಿಯಾಗಿ ಮಲವಿಸರ್ಜನೆ ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ನೀವು ತುಂಬಾ ಪ್ರೆಸರ್ ಹಾಕಿ ಮಲವಿಸರ್ಜನೆಯನ್ನು ಮಾಡಿದರೆ ಕರುಳಿನಲ್ಲಿ ಗಾಯ ಆಗುವ ಸಂಭವ ಇರುತ್ತದೆ ಆಗ ರಕ್ತಸ್ರಾವವಾಗುವ ಸಂಭವ ಇರುತ್ತದೆ. ಇನ್ನೂ ಕೆಲವರು ಹನ್ನೆರಡು ಗಂಟೆಗೆ ಏಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಆ ಸಮಯದಲ್ಲಿ ಪಿತ್ತ ಪ್ರಕೋಪ ವಾಗಿರುತ್ತದೆ ಆ ಸಮಯದಲ್ಲಿ ಸೂರ್ಯ ಎದ್ದು ನೆತ್ತಿಯ ಮೇಲೆ ಬಂದಿರುತ್ತಾನೆ ಆ ಸಮಯದಲ್ಲಿ ನೀವು ಮಲವಿಸರ್ಜನೆಯನ್ನು ಮಾಡಿದರೆ ಅಂದರೆ ಪಿತ್ತಪ್ರಕೋಪ ಆಗಿದ್ದಾಗ ದೇಹದಲ್ಲಿ ಹೀಟು ಹೆಚ್ಚಾಗಿರುತ್ತದೆ ಆಸಿಡ್ ಲೆವೆಲ್ ಹೆಚ್ಚಾಗಿರುತ್ತದೆ ಅಂತಹ ಸಂದರ್ಭದಲ್ಲಿ ಕರುಳಿನಲ್ಲಿ ಪಿತ್ತ ಪ್ರಕೋಪವಾಗಿದ್ದಾಗ ನೀವು ಮಲವಿಸರ್ಜನ್ ಮಾಡಲು ಹೋದರೆ ಉರಿಯ ಅನುಭವ ಆಗುತ್ತದೆ ಜೊತೆಗೆ ಮಲಒಣಗಿರುತ್ತದೆ. ಮಲ ವಿಸರ್ಜನೆ ಸರಾಗವಾಗಿ ಆಗುವುದಿಲ್ಲ.
ನೀವು ಬೆಳಗ್ಗಿನ ಜಾವ ಸುಸೂತ್ರವಾಗಿ ಮಲವಿಸರ್ಜನೆ ಮಾಡದ ಹೊರತು ಯಾವುದೇ ರೀತಿಯ ಆಹಾರವನ್ನು ತೆಗೆದುಕೊಂಡರು ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಂಡರು ಪ್ರಯೋಜನವಾಗುವುದಿಲ್ಲ. ನೀವು ಬೆಳಗ್ಗಿನ ಜಾವ ಬೇಗ ಎದ್ದು ಕಫ ಪ್ರಧಾನವಾಗಿರುವ ಸಮಯದಲ್ಲಿ ಮಲವಿಸರ್ಜನೆಯನ್ನು ಮಾಡುವುದರಿಂದ ನಿಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ. ಮಲವಿಸರ್ಜನೆ ಸರಿಯಾಗಿ ಆದರೆ ಮಾತ್ರ ನಿಮ್ಮ ಆದಿನ ಲವಲವಿಕೆಯಿಂದ ಇರುತ್ತದೆ ದೇಹ ಹಗುರ ಎನಿಸುತ್ತದೆ. ಕರುಳನ್ನು ಎರಡನೆಯ ಮೆದುಳು ಎಂದು ಕರೆಯಲಾಗುತ್ತದೆ ಒಂದು ವೇಳೆ ಕರುಳಿನಲ್ಲಿ ಮಲ ಇದ್ದರೆ ಅದರ ಪರಿಣಾಮ ಮನಸ್ಸಿನ ಮೇಲಾಗುತ್ತದೆ. ಮನಸ್ಸಿಗೆ ಕಿರಿಕಿರಿಯಾಗುತ್ತದೆ ಬೇರೆಯವರನ್ನು ಮಾತನ್ನು ಕೇಳಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಸಮಾಧಾನ ಇರುವುದಿಲ್ಲ ತಾಳ್ಮೆ ಇರುವುದಿಲ್ಲ ಹಾಗಾಗಿ ನಿಮ್ಮ ಮನಸ್ಸಿನ ಆರೋಗ್ಯಕ್ಕೆ ಕರುಳಿನ ಆರೋಗ್ಯ ತುಂಬಾ ಮುಖ್ಯವಾದದ್ದು.
ಮಲವಿಸರ್ಜನೆ ಆದನಂತರ ನಿಮಗೆ ವಾಕಿಂಗ್ ಹೋಗುವ ಅಭ್ಯಾಸವಿದ್ದರೆ ವಾಕ್ ಹೋಗಿಬನ್ನಿ ವ್ಯಾಯಾಮವನ್ನು ಮಾಡಿ ಪ್ರಾಣಾಯಾಮವನ್ನು ಮಾಡಿ ಏರೋಬಿಕ್ಸ್ ಮಾಡುವವರು ಏರೋಬಿಕ್ಸ್ ಅನ್ನು ಮಾಡಬಹುದು ಕೆಲವರಿಗೆ ಈ ಸಮಯದಲ್ಲಿ ಗುಂಪುಗುಂಪಾಗಿ ಮಾತನಾಡಿಕೊಂಡು ಹೋಗುವ ಅಭ್ಯಾಸವಿರುತ್ತದೆ ಆದರೆ ನೀವು ಅಂತರ್ಮುಖಿಗಳಾಗಿ ಈ ಮೇಲಿನ ಚಟುವಟಿಕೆಗಳನ್ನು ಮಾಡಿದರೆ ಅದರಿಂದ ತುಂಬಾ ಪ್ರಯೋಜನವಾಗುತ್ತದೆ. ಅಂತರ್ಮುಖಿ ಸದಾ ಸುಖಿ ಎಂಬ ಮಾತು ಇದೆ ಇನ್ನು ಕೆಲವರಿಗೆ ವಾಕಿಂಗ್ ಹೋಗುವಾಗ ಹಾಡನ್ನು ಕೇಳುತ್ತಾ ಹೋಗುವ ಅಭ್ಯಾಸವಿರುತ್ತದೆ ಸೈಲೆನ್ಸ್ ಇಸ್ ದ ಬೆಸ್ಟ್ ಮ್ಯೂಸಿಕ್ ಎಂಬ ಮಾತಿದೆ ನೀವು ಪ್ರಶಾಂತವಾಗಿರುವ ವಾತಾವರಣಕ್ಕೆ ಜಾಗಕ್ಕೆ ಹೋಗಿ ಕುಳಿತುಕೊಳ್ಳಿ ಪ್ರಶಾಂತತೆ ಯಲ್ಲಿಯೇ ಒಂದು ಸಂಗೀತ ನಿಮಗೆ ಕೇಳಿಸುತ್ತದೆ. ನೀವು ಮೂವತ್ತು ನಿಮಿಷ ಯಾರ ಮಾತನ್ನು ಕೇಳಿಸಿಕೊಳ್ಳದೆ ತಲೆತಗ್ಗಿಸಿ ವಾಕ್ ಮಾಡಿದರೆ ಇದರಿಂದ ನಿಮ್ಮ ಮನಸ್ಸಿನ ಆರೋಗ್ಯವು ಚೆನ್ನಾಗಿರುತ್ತದೆ ದೇಹದ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ವಾಕ್ ನಿಂದ ಬಂದ ತಕ್ಷಣ ಅಥವಾ ಪ್ರಾಣಾಯಾಮ ವ್ಯಾಯಾಮ ಇತ್ಯಾದಿಗಳನ್ನು ಮುಗಿಸಿದ ನಂತರ ನೀವು ದಿನನಿತ್ಯದಂತೆ ಸ್ನಾನಮಾಡುವುದು ಹಾಲು ಕುಡಿಯುವುದು ಇತರ ಚಟುವಟಿಕೆಗಳನ್ನು ಮಾಡಬಹುದು.
ನೋಡಿದಿರಲ್ಲ ಸ್ನೇಹಿತರೆ ಬೆಳಿಗ್ಗೆ ಬೇಗನೆ ಏಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ. ನೀವು ಕೂಡ ಇಂದಿನಿಂದಲೇ ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ ಬೇಗ ಹೇಳುವುದರಿಂದ ತುಂಬಾ ಪ್ರಯೋಜನಗಳಾಗುತ್ತದೆ ಮನಸ್ಸು ಲವಲವಿಕೆಯಿಂದ ಇರುತ್ತದೆ ನೀವು ಕೂಡ ಬೆಳಿಗ್ಗೆ ಬೇಗ ಹೇಳುವುದನ್ನು ರೂಡಿಮಾಡಿಕೊಳ್ಳಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430